Monday, 18 November 2019

ಸಿಕ್ಕಿರೆನ್ನ ಕೈಗೀಗ ಇನ್ತಕ್ಕೊಳ್ಳಿ ಸೀರೆಯ ಬೇಗ ankita pranesha vittala

by ಪ್ರಾಣೇಶದಾಸರು
ಸಿಕ್ಕಿರೆನ್ನ ಕೈಗೀಗ ಇನ್ತಕ್ಕೊಳ್ಳಿ ಸೀರೆಯ ಬೇಗ | ಎಲೆ ಸಿಕ್ಕಿ ಪ

ಬೀದಿಯೊಳಗೆ ನಿಮ್ಮ ಮೈಗೆ ಸರಿಸಿ ನಾ |ಹೋದರೆ ಮುಟ್ಟಿದನೆಂದು ||ಬೈದು ಯಶೋದೆಗೆ ಪೇಳಿ ಕೊಲ್ಲಿಸಿದ್ದ- |ಕ್ಕಾದುದು ನೋಡಿರಿ ಇಂದು1

ಹುಡುಗರೊಡನೆ ನಾನಾಡುತ ಬಂದರೆ |ಬಡಿಯಲಿ ಹವಣಿಸಲಿಲ್ಲೇ ||ಕುಡಿಯಲು ಪಾಲ್ ಬಾಯ್ತೆರೆದು ಬೇಡಿದರೆ |ಕೊಡದಲೆ ನೂಕಿಸಲಿಲ್ಲೆ 2

ಬಚ್ಚಲೊಳಗೆ ಮೈದೊಳೆವಲ್ಲಿಗೆ ಬಂದ |ನಚ್ಚುತನೆಂಬುವಿರಲ್ಲೇ ||ಬಚ್ಚದೆ ಬತ್ತಲೆ ಅಡವಿಯೊಳಿರುವದು |ಹೆಚ್ಚಿದು ಅಹ ಅಲ್ಲಲ್ಲೇ 3

ಬೆಳ್ಳಕೆ ದಾರೋ ಕಾಣಿಸುತಿಹರು |ಇಲ್ಲಿಗೆ ಬಂದರೆ ಹೇಗೆ ||ಸುಳ್ಳಲ್ಲವೆ ನಿಮ್ಮಂಣರಾಣೆ |ಇನ್ನೆಲ್ಲಿಗೆ ಹೋಗುವಿರೀಗೆ 4

ಒಂದೊಂದೇ ನಿಮ್ಮಾಟವು ಮನಸಿಗೆ |ತಂದರೆ ಕೋಪವು ಘನ್ನ ||ಇಂದಿರೇಶ ಪ್ರಾಣೇಶ ವಿಠಲ ಗತಿ- |ಯೆಂದಿರೆ ವಂದಿನಕನ್ನಾ5
*******

No comments:

Post a Comment