Thursday 17 October 2019

ಶರಣು ಶರಣರ ಪೊರೆವ ಕರುಣಿಗೆ ankita vijaya vittala

ಶರಣು ಶರಣು ಪ
ಶರಣು ಶರಣರ ಪೊರೆವ ಕರುಣಿಗೆ ಶರಣು ಸುರವರ ದೇವಿಗೆ ಅ. ಪ.

ಶ್ರಧ್ಧೆ ಭಾರತಿ ಭಾಗ್ಯ ಸಂಪನ್ನೆ ಪದ್ಮ ಮಂದಿರ ನಂದನೆ
ಬುದ್ಧಿ ವರದಾಯಕಳೆ ಕರುಣಾಬ್ಧಿಯೆ ಭಕ್ತರ ಪ್ರಿಯಳೆ 1

ಪನ್ನಗ ಗಿರಿಶರಿಂದಲಿ ಮಿಗಿಲೆನಿಪೆ ಶತಗುಣದಲಿ
ಮೃಗನ ನಾಭಿ ನೊಸಲಿಗೊಪ್ಪುವ ಮೃಗಕಲಾನನೆ ದೇವಿಯೆ2

ಇಂದ್ರಸೇನಳೆ ವಿಪ್ರಕನ್ನಿಕೆ ಚಂದ್ರಾಧಿಷ್ಠನ ವಾಸಳೆ
ಸಿರಿ ವಿಜಯವಿಠ್ಠಲನ ವಂದಿಪ ದ್ರೌಪದಿ ದೇವಿಯೆ3
**********

No comments:

Post a Comment