Thursday, 17 October 2019

ಹರಿಯ ಮರೆದುದಕಿಂತ ಪಾಪವಿಲ್ಲ ankita vijaya vittala

ಹರಿಯ ಮರೆದುದಕಿಂತ ಪಾಪವಿಲ್ಲ
ಹರಿಸ್ಮರಣೆಯಿಂದಧಿಕ ಪುಣ್ಯ ಮತ್ತೊಂದಿಲ್ಲ            ।।ಪ॥

ಗೋಹತ್ಯ ಸುರಾಪಾನ ಕನಕತಸ್ಕರ ಸುಜನ-
ದ್ರೋಹ ಗುರುತಲ್ಪಗಮನ ಬಲು ಕಪಟ ವ್ಯಸನ
ಬಾಹಿರವಾಗ್ ದ್ವೇಷ ಪರದಾರಗಮನ ವಿ-
ವಾಹಗಳ ಮಾಣಿಸುವ ಪಾಪಕಿಂತಲು ಮೇಲು        ।।೧।।

ಗಂಗಾನದಿಯಲ್ಲಿ ಸ್ನಾನ ಪ್ರಣವ ಆಚಮನ
ಹಿಂಗದಲೆ ಗಾಯತ್ರಿಮಂತ್ರ ಮೌನ
ತುಂಗ ದಾನ ಧರ್ಮ ವೃತ್ತಿಕ್ಷೇತ್ರ ರತುನ
ಬಂಗಾರಯಿತ್ತಧಿಕ ಬಹಳ ಪುಣ್ಯ ಮೇಲು                ।।೨।।

ಹಾಸ್ಯವಿರೋಧ ಮದ ಮತ್ಸರ ಪರಕಾರ್ಯ
ದಾಸ್ಯದಲಿ ಕೆಡಿಸುವ ಶಠನ ಲೋಭಿ
ವೈಶ್ವದೇವಾಹಿತ ಅತಿಥಿಗಳ ನಿಂದ್ಯ ರ
ಹಸ್ಯ ದೂರುವ ಬಲು ಪಾಪಕಿಂತಲು ಮೇಲು         ।।೩।।

ತೀರ್ಥಯಾತ್ರೆ ವೇದ ಭಾಗವತ ಪುರಾಣ
ಸಾರ್ಥಕ್ಯವಾದ ಪ್ರವಚನ ಶಾಸ್ತ್ರ
ಪ್ರಾರ್ಥನೆ ಸ್ತೋತ್ರಗೀತ ಸಾರ ಪ್ರಬಂಧ
ಅರ್ಥ ಪೇಳುವ ಬಲು ಪುಣ್ಯಕಿಂತಲು ಮೇಲು           ।।೪।।

ಮಿತ್ರಘ್ನಗರಳಪ್ರಯೋಗ ಗರ್ಭಿಣಿವಧ
ಗೋತ್ರಸಂಸರ್ಗ ಬಲು ಪ್ರಾಣಹಿಂಸಾ
ಕ್ಷೇತ್ರ ಅಪಹಾರ ಕ್ಷುದ್ರವಾಣಿ ನಿಜಕ-
ಳತ್ರಾದಿ ದ್ರೋಹ ಬಲು ಪಾಪಕಿಂತಲು ಮೇಲು        ।।೫।।

ವೇದಾದಿ ಕರ ಸರ್ವದಲ್ಲಿ ಗಯಾಶ್ರಾದ್ಧ
ಭೂಧರ ಸಮಾಗಮ ಸತ್ ಶ್ರವಣಾ
ಆದಿತ್ಯಚಂದ್ರ ಉಪರಾಗ ಪರ್ವಣಿ ನಾನಾ-
ರಾಧನೆಯಲಿ ಬಲು ಪುಣ್ಯಕಿಂತಲು ಮೇಲು             ।।೬।।

ಆವಾವ ಪಾಪ ಪುಣ್ಯಗಳದರ ಕಿಂಕರವು
ದೇವನ ನೆನೆಸಿದಂಥ ನೆನೆಯದಂಥ
ಜೀವರೊಳಗೊಬ್ಬ ಮುಕ್ತನು ಒಬ್ಬ ತಮಯೋಗ್ಯ
ಕೈವಲ್ಯಪತಿ ನಮ್ಮ ವಿಜಯವಿಠ್ಠಲ ಪ್ರೇರಕಾ           ।।೭।।
***

ರಾಗ :  ಕಾಂಬೋದಿ   ತಾಳ : ಝಂಪೆ


Hariya maredudakinta papavilla
Harismaraneyindadhika punya mattondilla ||pa||

Gohatya surapana kanakataskara sujana-
Droha gurutalpagamana balu kapata vyasana
Bahiravag dvesha paradaragamana vi-
Vahagala manisuva papakintalu melu ||1||

Ganganadiyalli snana pranava Acamana
Hingadale gayatrimantra mauna
Tunga dana dharma vruttikshetra ratuna
Bangarayittadhika bahala punya melu ||2||

Hasyavirodha mada matsara parakarya
Dasyadali kedisuva sathana lobi
Vaisvadevahita atithigala nindya ra
Hasya duruva balu papakintalu melu ||3||

Tirthayatre veda bagavata purana
Sarthakyavada pravacana sastra
Prarthane stotragita sara prabandha
Artha peluva balu punyakintalu melu ||4||

Mitragnagaralaprayoga garbinivadha
Gotrasamsarga balu pranahimsa
Kshetra apahara kshudravani nijaka-
Latradi droha balu papakintalu melu ||5||

Vedadi kara sarvadalli gayasraddha
Budhara samagama sat sravana
Adityacamdra uparaga parvani nana-
Radhaneyali balu punyakimtalu melu ||6||

Avava papa punyagaladara kimkaravu
Devana nenesidantha neneyadantha
Jivarolagobba muktanu obba tamayogya
Kaivalyapati namma vijayaviththala preraka ||7||
***

pallavi

hariya maredudakinta pApavilla hari smaraNeyindadhika puNya mattondilla

caraNam 1

gOhatya surApAna kanakataskara sujana drOha gurutalpa gamana balu kapaTa vyasana
bAhira vAgdvEsha paradAra gamana vivAhagLa mANIsuva pApakintalu mElu

caraNam 2

gangA nadiyalli snAna praNava Acamana hingadale gAyatrI mantra mauna
tungadAna dharama vratti kSEtra ratuna bangArayittadhika bahaLa puNya mElu

caraNam 3

hAsya virOdha mada matsara para kArya dAsyadali keDisuva shaThanalObhi
vaishva dEvAhita atithigaLa nindyara hasya dUruva balu pApakinralu mElu

caraNam 4

tIrtha yAtra vEda bhAgavata purANa sArthakhyavAda pravacana shAstra
prArthane stOtra gIta sAra prabandha atha pEluva balu puNya kintalu mElu

caraNam 5

mitraghnya garaLa prayOga garbhiNi vada gOtra samsarga balu prANa himsa
kSEtra apahAra kSudravANi nija kaLatradi drOha balu pApakintalu mElu

caraNam 6

vEdAdi karma sarvadalli gayA shAddha bhUdhara samAgama sat shravaNA
Aditya candra uparAga parvaNi nAnArAdhaneyele balu puNyakintalu mElu

caraNam 7

AvAva pApa puNyagaLadara kinkaravu dEvana nensidantha neneyadantha
jIvaroLagobba muktanu obba tamayOgya kaivalyapati namma vijayaviThala prErakA
***



ಹರಿಯ ಮರೆದುದಕಿಂತ ಪಾಪವಿಲ್ಲ
ಹರಿಸ್ಮರಣೆಯಿಂದಧಿಕ ಪುಣ್ಯ ಮತ್ತೊಂದಿಲ್ಲ ।।ಪ॥

ಗೋಹತ್ಯ ಸುರಾಪಾನ ಕನಕತಸ್ಕರ ಸುಜನ-
ದ್ರೋಹ ಗುರುತಲ್ಪಗಮನ ಬಲು ಕಪಟ ವ್ಯಸನ
ಬಾಹಿರವಾಗ್ ದ್ವೇಷ ಪರದಾರಗಮನ ವಿ-
ವಾಹಗಳ ಮಾಣಿಸುವ ಪಾಪಕಿಂತಲು ಮೇಲು ।।೧।।

ಗಂಗಾನದಿಯಲ್ಲಿ ಸ್ನಾನ ಪ್ರಣವ ಆಚಮನ
ಹಿಂಗದಲೆ ಗಾಯತ್ರಿಮಂತ್ರ ಮೌನ
ತುಂಗ ದಾನ ಧರ್ಮ ವೃತ್ತಿಕ್ಷೇತ್ರ ರತುನ
ಬಂಗಾರಯಿತ್ತಧಿಕ ಬಹಳ ಪುಣ್ಯ ಮೇ।|೨।।

ಹಾಸ್ಯವಿರೋಧ ಮದ ಮತ್ಸರ ಪರಕಾರ್ಯ
ದಾಸ್ಯದಲಿ ಕೆಡಿಸುವ ಶಠನ ಲೋಭಿ
ವೈಶ್ವದೇವಾಹಿತ ಅತಿಥಿಗಳ ನಿಂದ್ಯ ರ
ಹಸ್ಯ ದೂರುವ ಬಲು ಪಾಪಕಿಂತಲು ಮೇಲು ।।೩।।

ತೀರ್ಥಯಾತ್ರೆ ವೇದ ಭಾಗವತ ಪುರಾಣ
ಸಾರ್ಥಕ್ಯವಾದ ಪ್ರವಚನ ಶಾಸ್ತ್ರ
ಪ್ರಾರ್ಥನೆ ಸ್ತೋತ್ರಗೀತ ಸಾರ ಪ್ರಬಂಧ
ಅರ್ಥ ಪೇಳುವ ಬಲು ಪುಣ್ಯಕಿಂತಲು ಮೇಲು ।।೪।।

ಮಿತ್ರಘ್ನಗರಳಪ್ರಯೋಗ ಗರ್ಭಿಣಿವಧ
ಗೋತ್ರಸಂಸರ್ಗ ಬಲು ಪ್ರಾಣಹಿಂಸಾ
ಕ್ಷೇತ್ರ ಅಪಹಾರ ಕ್ಷುದ್ರವಾಣಿ ನಿಜಕ-
ಳತ್ರಾದಿ ದ್ರೋಹ ಬಲು ಪಾಪಕಿಂತಲು ಮೇಲು ।।೫।।

ವೇದಾದಿ ಕರ ಸರ್ವದಲ್ಲಿ ಗಯಾಶ್ರಾದ್ಧ
ಭೂಧರ ಸಮಾಗಮ ಸತ್ ಶ್ರವಣಾ
ಆದಿತ್ಯಚಂದ್ರ ಉಪರಾಗ ಪರ್ವಣಿ ನಾನಾ-
ರಾಧನೆಯಲಿ ಬಲು ಪುಣ್ಯಕಿಂತಲು ಮೇಲು  ।।೬।।

ಆವಾವ ಪಾಪ ಪುಣ್ಯಗಳದರ ಕಿಂಕರವು
ದೇವನ ನೆನೆಸಿದಂಥ ನೆನೆಯದಂಥ
ಜೀವರೊಳಗೊಬ್ಬ ಮುಕ್ತನು ಒಬ್ಬ ತಮಯೋಗ್ಯ
ಕೈವಲ್ಯಪತಿ ನಮ್ಮ ವಿಜಯವಿಠ್ಠಲ ಪ್ರೇರಕಾ.  ।।೭।।
***

No comments:

Post a Comment