ಯಾಚಕರು ಪರರ ಸಂಕಟ ಬಲ್ಲರೆ ।।ಪ।।
ಭೂಚಕ್ರದೊಳು ಗಾಳಿಯಂತೆ ತಿರುಗಲು ಬಿಡರು ।।ಅ.ಪ।।
ಕೌಪೀನವನೆ ಧರಿಸಿ ಮುಖವ ಡೊಂಕನೆ ಮಾಡಿ
ಕೋಪದಿಂದಲಿ ಕರವೆತ್ತಲ್ಯಾಕೋ
ವಾಪಿ ಕೂಪವ ಮೀರಿ ಸಮುದ್ರ ದಾಟಿ ತಾ
ರೂಪಾಂತರವ ತಾಳಿ ಮನೆ ಮನೆ ಪೊಕ್ಕರು ಬಿಡರು ।।೧।।
ವಿಷವ ಸವಿದುಂಡು ಮಹಾಮಡುವ ಪ್ರವೇಶಿಸಿ
ವಸುಧೆಯೊಳು ತಿರಿಕೆಬೇಡಿ ತಿಂದರು
ಬೆಸನೆ ವನವನ ತಿರುಗಿ ಅಜ್ಞಾತವಾಗಿ ಮಾ-
ನಸದಲ್ಲಿ ಇದ್ದುಗ್ರಕರ್ಮಮಾಡಲು ಬಿಡರು ।।೨।।
ಜುಟ್ಟು ಜನಿವಾರ ಕಿತ್ತುಕೊಂಡು ಯತಿಯಾಗಿ
ಕಟ್ಟಕಡೆಯಲಿ ಗೃಹಸ್ಥಧರ್ಮ ತೊರೆದು
ಹುಟ್ಟುಗತಿಯಿಲ್ಲೆನುತ ಕೃಷ್ಣ ಕೃಷ್ಣಾ ವಿಜಯ
ವಿಠಲನ ಪಾದಕ್ಕೆ ಮೊರೆಯಿಟ್ಟರೂ ಬಿಡರು ।।೩।।
***
Yachakaru parara sankata ballare ||pa||
Bucakradolu galiyante tirugalu bidaru ||a.pa||
Kaupinavane dharisi mukava Donkane madi
Kopadindali karavettalyako
Vapi kupava miri samudra dati ta
Rupantarava tali mane mane pokkaru bidaru ||1||
Vishava savidundu mahamaduva pravesisi
Vasudheyolu tirikebedi tindaru
Besane vanavana tirugi aj~jatavagi ma-
Nasadalli iddugrakarmamadalu bidaru ||2||
Juttu janivara kittukondu yatiyagi
Kattakadeyali gruhasthadharma toredu
Huttugatiyillenuta krushna krushna vijaya
Vithalana padakke moreyittaru bidaru ||3||
***
No comments:
Post a Comment