Monday, 2 August 2021

ಶ್ರೀವೇಣುಗೋಪಾಲಕೃಷ್ಣಮೂರ್ತೇ ಕಾವುದೀತನ ನಿನ್ನ ದಾಸನೆಂದನವರತ ankita uragadrivasa vittala

ಶ್ರೀ ವೇಣುಗೋಪಾಲಕೃಷ್ಣಮೂರ್ತೇ ಪ


ಕಾವುದೀತನ ನಿನ್ನ ದಾಸನೆಂದನವರತ ಅ.ಪ


ಕಾಯದಿಂದಲಿ ನಿನ್ನ ಚರಣಸೇವೆಯ ಮಾಡಿ

ತೋಯಜಾಂಬಕ ನಿನ್ನ ನಾಮ ವಾಚಿಸುತ

ಜೀಯ ನಿನ್ನಯ ಮೂರ್ತಿ ಮಾನಸದಿ ಧೇನಿಸುತ

ಈ ಉಪಾಸನೆಯನ್ನನವರತ ಕೊಡು ದೇವ 1


ಲೌಕಿಕದಲ್ಲಿದ್ದರು ಲೋಕೈಕನಾಥನೆ

ಏಕಾಂತದಲಿ ನಿನ್ನ ನೆನಪು ಒಂದಿರಲಿ

ಮಾಕಳತ್ರನೆ ನಿನ್ನ ಸಕಲಮಂಗಳವಿತ್ತು

ಲೋಕದೊಳು ನಿನ್ನ ಭಕುತರೊಳಿಡು ಇನ್ನು 2


ಪವನಾಂತರಾತ್ಮ ಶ್ರೀ ವೇಂಕಟೇಶಾತ್ಮಕ

ಶ್ರೀ ವೇಣುಗೋಪಾಲಕೃಷ್ಣಮೂರುತೇ

ಭಾವಶುದ್ಧನಮಾಡಿ ಶ್ರೀವರನ ದಾಸರ

ಸೇವೆಯನು ಕೊಟ್ಟು ಭವದುಃಖವನೆ ಹರಿಸೊ3

****


No comments:

Post a Comment