Sunday, 1 August 2021

ದೇವ ಪಾಲಿಸೋ ಎನ್ನಾ ನಿಜ ಭಾವದಿ ರಕ್ಷಿಸೆನ್ನಾ ankita shanti

 ..

kruti by shantibai dasaru ಶಾಂತಿಬಾಯಿ ದಾಸರು


ದೇವಾ ಪಾಲಿಸೋ ಎನ್ನಾ ನಿಜ ಭಾವದಿ ರಕ್ಷಿಸೆನ್ನಾ

ದೇವಾ ಪದಸೇವಾ ಸುಖವೀವಾ ನಿಜಭಾವದಿ

ಕಾವುದೆನ್ನನು ನೀನೂ ಪ


ಗಜರಾಜ ಪಶುವಾ ಹಿಂದೆ ಭಜಿಪಾಗತಾ ನೀನೇ ಕಾಯ್ದೆ

ಸುಜನ ಮನವಿ ಹರಿಭಜನೆಯೊಳ್ ಗಜನೀಗೆ

ನಿಜದಾಪದವ ತೋರಿದೇ 1


ಮಂದವಾಗಿಹೇ ನಾನು ನಿಜಾನಂದದೊಳ್ ಇಡೋ ನೀನು

ದ್ವಂದ್ವ ನಿದ್ರ್ವಂದ್ವ ಸ್ವಾನಂದ ಆನಂಧದಿ

ಛಂದದೀ ಸಲಹೊ ನೀನು 2


ಚಿಂತೆಗಳೆಲ್ಲ ತೊರಿಸೊ ನಿಶ್ಚಿಂತ ಪದದೊಳ್ ಪಾಲಿಸೊ

ಶಾಂತ ವಿಶ್ರಾಂತ ಮಹಂತ ಅನಂತನೇ

ಶಾಂತಿ ಪದದೊಳ್ ಇರಿಸೊ 3

***


No comments:

Post a Comment