..
kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru
ಹರಿಯು ದಾಸರಿಗೆ ಒಲಿದ ಸ್ತೋತ್ರ
ನೀನಾಗಿ ನೀಎನಗೆ ಒಲಿಯೋ ಸರ್ವೇಶ ಪ
ದೀನ ವತ್ಸಲ ವೇಧಪಿತ ಶ್ರೀದ ಶ್ರೀಶ ಅ.ಪ
ಕರಿಯಂತೆ ನಿನ್ನರಿತು ಕರೆಯಲರಿಯೆನು ನಾನು |
ನಾರಿಯಂತೆ ಸವಿದು ಕೊಡಲರಿಯೆ ಪಣ್ಣು ||
ತರುಗಳಂತೆ ತಪಸ್ಸು ಸಂಸ್ಮರಣೆ ನಾನರಿಯೆ
ಕರುಣಾಭ್ಧಿ ನೀನೇ ಪೊರೆ ಎನ್ನ ಶ್ರೀಹರಿಯೆ 1
ಹೇಮ ಕಾಮಿನಿ ಭೂಮಿ ಸಾಧನಕ್ಕೊದಗಬೇಕು |
ಮಮ ಅಹಂಕಾರ ದುಷ್ಟದಿ ರತಿ ಸಾಕು ||
ಭೂಮನಿನಗೆ ಪ್ರಿಯ ಸೇವೆಯಾಗಲಿ ಸರ್ವ |
ವಾಙ್ಮನೋ ಕಾಯ ಕ್ರಿಯೆಗಳು ದೇವ ದೇವ 2
ಎನ್ನ ಸರ್ವಾಭೀಷ್ಟಗಳು ಸಿಧ್ಧಿ ಆಗುವವು |
ನಿನ್ನ ಔದಾರ್ಯ ಕೃಪೆಯಿಂದ ಎಂದೆಂದೂ ||
ನಿನ್ನಧೀನವು ನಾನುರಕ್ಷಕನು ನೀ ಶ್ರೀಶ ||
ಎನ್ನುವದೊಂದೇ ಬಲ್ಲೆ ಪ್ರಸನ್ನ ಶ್ರೀನಿವಾಸ 3
***
No comments:
Post a Comment