ಕಾಖಂಡಕಿ ಶ್ರೀ ಕೃಷ್ಣದಾಸರು
ನಂಬಿ ಭಜಿಸಿರೈಯ್ಯಾ ಶರಣರು ಪ
ನಂಬಿ ಭಜಿಸಿರೈಯ್ಯಾ ಶರಣರು|ಅಂಬುಧಿವಾಸ ಶ್ರೀ ದೇವನಾ| ಹಂಬಲ ಬಿಡಿ ಅನ್ಯ ಮಾರ್ಗದಾ| ಅಂಬುಜಾಂಬಕ ಪರದೈವನು ಗಡಾ| 1
ತ್ರಿಮೂರ್ತಿಯೊಳು ಮಿಗಿಲಾರೆಂದು ನೋಡಾ| ಲಾ ಮುನಿಯಮರರು ಕಳುಹಲು| ಪರದೈವವೆಂದನು ಗಡಾ|2
ದೇವಾ|ಸುರರೆಲ್ಲ ತವಕದಿ ಕುಳಿತಿರೇ| ಇಂದಿರೆ ಬಂದು|ಹರಿಗೆ ಮಾಲೆಯ ಹಾಕಿದಳು ಗಡಾ 3
ಶ್ರೀ ಚರಣವ ತೊಳೆಯಲು| ಸುರನದಿ ಬರೆ| ಮೃಢ ಶಿರಸದಿ ಧರಿಸಿದ ಗಡಾ4
ಮೂರಕ ಮೂರ ಮೂರುತಿಯಾಗಿ ಗುಣ| ಮೂರಕದೂರವದೆನಿಸುವಾ| ಸಾರಿದವರಾ ಕಾವಾ ಮಹಿಪತಿಸುತ| ಸಾರಥಿಯಾಗಿ ರಕ್ಷಾಪ ಗಡಾ5
***
No comments:
Post a Comment