ಕಾಖಂಡಕಿ ಶ್ರೀ ಕೃಷ್ಣದಾಸರು
ಸುಖದಕ್ಕಿತೇ | ಸುಖದಕ್ಕಿತು ಗುರುದಯ ಲೆಕ್ಕಾ ಪ
ಕಂಡವರ ಮಾತಿಗೆ ಮನವಿಟ್ಟು ಜಗದೊಳು | ಹಿಂಡದೈವಕ ಬಾಯಿದೆರುತ್ತಿದ್ದೆನೆ | ಮಂಡಿಯ ಮ್ಯಾಲೆನ್ನಾ ಕರವಿಟ್ಟು ಹೊಳೆವಾ ಪಿಂಡಾಂಡದಿ ಗಂಡನ ತೋರಿದನಕ್ಕ 1
ಇಲ್ಲೆಂಬ ಸಂಶಯ ಹೋಯಿತು ಒಳಹೊರ | ಗೆಲ್ಲೆಲ್ಲಿ ನೋಡಲು ತಾನಾದನೇ | ಫುಲ್ಲನಾಭನ ಕೂಡಿ ತನುಭಾವ ಮರದು | ಕೈವಲ್ಯ ಮಂದಿರ ಸಾರಿದೆನಕ್ಕಾ 2
ಏನ ಹೇಳಲಿ ಆಡು ತಾಡುತಾ ಯಡಹಿನಿ | ಧಾನವ ಕಂಡಂತಾಯಿತೇ | ಮಾನುಭಾವರಸಾದ ತಂದೆ ಮಹಿಪತಿ | ತಾನೊಲಿದೆನ್ನನುದ್ಧರಿಸಿದನಕ್ಕಾ 3
***
No comments:
Post a Comment