Tuesday, 1 June 2021

ಮಾನಹೀನನಿಗೆ ಇಲ್ಲದ ಅಭಿಮಾನವ್ಯಾತಕೋ ankita hanumesha vittala

ಮಾನಹೀನನಿಗೆ ಇಲ್ಲದ ಅಭಿಮಾನವ್ಯಾತಕೋ

ನಾನೇ ಬ್ರಹ್ಮನೆನ್ವನ ಮುಖ ನೊಡ್ವದ್ಯಾತಕೋ ಪ


ಹರಿಯೇ ಸರ್ವಪರಾ ಎನ್ನದವನ ಜ್ಞಾನವ್ಯಾತಕೋ

ತಾರತಮ್ಯವರಿಯದವನಾಚಾರ್ಯವ್ಯಾತಕೋ 1


ಆಶೆಯನು ಬಿಡದವಗೆ ಸನ್ಯಾಸವ್ಯಾತಕೋ

ಭಾಷೆ ಹೀನನಾದವನ ವಿಶ್ವಾಸವ್ಯಾತಕೋ 2


ಹರಿಯ ಜರಿದು ಹರಾಪರನೆನ್ವನ ಜನ್ಮವ್ಯಾತಕೋ

ವರದ ಶ್ರೀ ಹನುಮೇಶ ವಿಠಲ ಒಲಿವನ್ಯಾತಕೋ 3

****


No comments:

Post a Comment