ಪುರಂದರದಾಸರು
ರಕ್ಷಿಸೋ ಲೋಕನಾಯಕನೆ ನೀ ಎನ್ನ ರಕ್ಷಿಸೋ ಲೋಕನಾಯಕನೇ ಪ
ಎಷ್ಟೆಷ್ಟು ಜನ್ಮ ಕಳೆದೆನೋ ಇನ್ನೆಷ್ಟೆಷ್ಟು ಜನ್ಮ ಪಡೆವೆನೋ ||ಕಷ್ಟವ ಪಡಲಾರೆ ಕೃಷ್ಣ ಕೃಪೆಯನಿಟ್ಟುಇಷ್ಟವ ಪಾಲಿಸು ಇಭರಾಜವರದನೆ 1
ಬಾಲತನದಿ ಬಹು ಬೆಂದೆನೋ ನಾನಾಲೀಲೆಯಿಂದಲಿಕಾಲಕಳೆದೆನೋ ||ಲೋಲಲೋಚನ ಎನ್ನ ಮೊರೆಯ ಕೇಳುತ ಬೇಗಜಾಲವ ಮಾಡದೆ ಪಾಲಿಸೈ ನರಹರಿ 2
ಮುದುಕನಾಗಿ ಚಿಂತೆಪಡುವೆನೋ ನಾಕದಡು ದುಃಖವ ಪಡಲಾರೆನೋ ||ಸದರವಲ್ಲವು ಶ್ರೀಪುರಂದರವಿಠಲಮುದದಿಂದ ರಕ್ಷಿಸೊ ಖಗರಾಜಗಮನ 3
********

No comments:
Post a Comment