Friday, 27 December 2019

ಭಜಿಸಿ ಬದುಕಿರೋ ದಿವ್ಯ ಪಾದಕೆರಗಿರೊಭಕುತಿಯಿತ್ತು ankita tande varadagopala vittala

ಭಜಿಸಿ ಬದುಕಿರೋ ದಿವ್ಯ ಪಾದಕೆರಗಿರೊಭಕುತಿಯಿತ್ತು ಪೊರೆವೊ ಭೂತರಾಜರೆಂಬರಾ ||ಪ||

ಭಾವ ಶುದ್ಧದಿ ಓದಿ ಗ್ರಂಥಸಾರವಾ ವಾದಿರಾಜರ ಕೂಡಿ ತಾನು ವ್ಯಾಸ ಮುನಿಯಲಿ ||1||

ಅಷ್ಟ ಮಂದಿಯಾ ಅಮೃತವೃಷ್ಟಿಗರೆವರೂ ಶ್ರೀ ಕೃಷ್ಣಮಹಿಮೆಯ ತಾವು ಕೂಡಿ ಪಾಡೊರೊ||2||

ತಂದೆ ಎಂಬೊದೂ ತಾನು ಒಂದನರಿಯದೆ ನಿಂದೆ ಮಾಡಿ ತಾನೆ ಬಲುಕುಂದಿಗಳುಕುವಾ ||3||

ಶಿಷ್ಟ ಜನರೊಳು ಇವನೇ ಶ್ರೇಷ್ಠವೇನಿದೂ ಸಿಟ್ಟಿನಿಂದ ಬೈದು ಬಹು ಕಷ್ಟಬಡುವನೊ ||4||

ಛಂಡಿ ಮನುಜನೇ ಪ್ರಚಂಡ ತಪಶಿಯೋಕೆಂಡ ತುಳಿದು ವ್ಯರ್ಥ ನೀನು ದಂಡಕಳುಕುವಿ ||5||

ಏನು ಪೇಳಲಿ ಇನ್ನೇನು ಹೇಳಲೀe್ಞÁನ ಶೂನ್ಯನಂತೆ ಶಿಕ್ಕಿ ನುಡಿಯ ಬ್ಯಾಡೆಲೋ ||6||

ಖುಲ್ಲ ಕೇಳೆಲೋ ಎಲೋ ಘಲ್ಲ ತೊಡದಿರೋನಿಗಮವೆಲ್ಲ ಪೇಳಿಸುವಾ ಕಲ್ಲಿನಿಂದಲೇ ||7||

ಶರಣು ಪೊಕ್ಕೆನೊ ಸ್ವಾಮಿ ಮರೆಯ ಪೊಕ್ಕೆನೊ ಕರುಣ ಮಾಡಿರೀ ಕಂಣು ತೆರೆದು ನೋಡಿರೀ ||8||

ಭೂತ ಹರಣವಾ ತಾಳೋ ಭೀತಿಗೊಳಿಸುತಾ ಪಾಪ ಪೋಪುದೂ ಯನ್ನ ಪಾದ ಸೋಂಕಲೂ||9||

ಭೀತಿಗೊಳಿಸುತಾನೇಕ ಭೂತ ಪ್ರೇತಕೇರಾಜನಾಗಿ ನೀನು ಭೂತ ಪ್ರೇತ ಗಣದೊಳು ||10||

ನಂದಿವಾಹನಾಪದಕೆ ಮುಂದೆ ಬಾಹುವೀ ಯನ್ನ ಕಂದ ನೀನು ನಾನೇ ಭಾವಿ ಮಂದಜಾಸನಾ ||11||

ಪಂಚವೃಂದದೀ ಸದ್ವøಂದ ಪೂಜ್ಯನಾ ದ್ವಂದ್ವ ಪೊಂದಿ ತಾನು ಸ್ವಾನಂದ ಪಡೆದನೂ ||12||

ಸ್ವಾದಿನಿಲಯನಾ ಬಲು ಪ್ರೀತಿ ಪಡೆದು ತಾ ತ್ರಿಶೂಲ ಧರಿಸಿದಾ ಭಾವಿ ಶೂಲ ರಮಣನೂ ||13||

ಪ್ರಾಣ ಪತಿಯನಾ ರೇಣು ಪಾದ ಫಣಿಯಲೀ ಪ್ರಾಣಿನಿಡದನಾ ಅವನ ಪ್ರಾಣ ಸೆಳೆವನಾ||14||

ಎಂತು ಪೇಳಲೀ ಇವರ ಅಚಿಂತ್ಯಮಹಿಮೆಯಾ ಶಾಂತಮೂರುತಿ ಶಶಿಕಾಂತ ಕೀರುತೀ||15||

ದೂಷಜನರನಾ ಬಲು ಘಾಸಿಗೊಳಿಸಿದಾ ಶಕ್ತಿದಾಯಕ ತಂದೆವರದಗೋಪಾಲವಿಠಲನು ||16||
*******

No comments:

Post a Comment