by ಪ್ರಸನ್ನವೆಂಕಟದಾಸರು
ಪಾಲಿಸೊ ಪಾಲನ ಶೀಲ ಶ್ರೀಲೋಲ
ಪಾಲಿಸೊ ಪಾಲನಶೀಲ ll ಪ ll
ಈಶ ಪರೇಶ ನಿರ್ದೋಶ ಸ್ಮಿತಹಾಸ ನಿ
ರಾಶ ಅಘನಾಶ ಘನಶಾಮೆನ್ನಾಶ ll 1 ll
ಮಿತ್ರ ಜಿತಗಾತ್ರ ಶತಪತ್ರಾಯತ ನೇತ್ರ ಧ
ರಿತ್ರೀಕಳತ್ರ ಶ್ರೀ ಪೋತ್ರಿ ಪವಿತ್ರ ll 2 ll
ಕರುಣಾರಸಾರ್ಣವ ಸ್ವರ್ಣಗಿರಿ ಪೂರ್ಣ ಶುಭ
ಅರುಣಾಬ್ಜಚರಣ ಪ್ರಸನ್ವೆಂಕಟ ಭರಣ ll 3 ll
***
ಪಾಲಿಸೊಪಾಲನಶೀಲ ಶ್ರೀಲೋಲಪಾಲಿಸೊ ಪಾಲನಶೀಲ ಪ.
ಈಶ ಪರೇಶ ನಿರ್ದೋಷ ಸ್ಮಿತಹಾಸ ನಿರಾಶ ಅಘನಾಶ ಘನಶಾಮೆನ್ನಾಶ 1
ಮಿತ್ರಜಿತಗಾತ್ರ ಶತಪತ್ರಾಯತ ನೇತ್ರ ಧರಿತ್ರೀಕಳತ್ರ ಶ್ರೀ ಪೋತ್ರಿ ಪವಿತ್ರ 2
ಕರುಣಾರಸಾರ್ಣವ ಸ್ವರ್ಣಗಿರಿ ಪೂರ್ಣಶುಭಅರುಣಾಬ್ಜಚರಣ ಪ್ರಸನ್ವೆಂಕಟಭರಣ3
********
No comments:
Post a Comment