Tuesday 19 November 2019

ಹರಿಹರಿಧ್ಯಾನಿಸೊ ಲಕ್ಷ್ಮೀವರನ ಧ್ಯಾನಿಸೊ ankita govinda

by ಗೋವಿಂದದಾಸ
ಹರಿಹರಿಧ್ಯಾನಿಸೊ ಲಕ್ಷ್ಮೀವರನ ಧ್ಯಾನಿಸೊ ಪ

ಉರಗಶಯನನಾಗಿಘೋರಶರಧಿಯನ್ನು ಮಧಿಸಿರುವಸುರರಿಗಮೃತವೆರೆದ ನಮ್ಮ ಗರುಡಗಮನ ತಾನುಅ.ಪ

ದಂಡಧರಗೆ ಸಿಲುಕಿ ನರಕ ಕೊಂಡದಲ್ಲಿ ಮುಳುಗಲ್ಯಾಕೆಪುಂಡರೀಕನಯನ ಪಾಂಡುರಂಗನೆನ್ನದೇಶುಂಡಲಾಪುರಾದಿ ಪಾಲ ಪಾಂಡುಪುತ್ರ ಧರ್ಮರಾಯಕಂಡು ನಮಿಸಿ ಪೂಜೆಗೈದ ಅಂಡಜವಾಹನನೆಂದು1

ಬಾಯಬಡಿಕನಾಗಿ ಸರ್ವ ನ್ಯಾಯ ತಪ್ಪಿ ಮಾತನಾಡಿಕಾಯಬೆಳೆಸಿ ತಿರುಗಿ ಬಂದೆ ಸಾಯಲಾ ಕಥೆವಾಯುತನಯ ವಂದ್ಯಚರಣಕಾಯಜಛೆಂದೆರಗಿದವಗೆಆಯುಧವರೇಣ್ಯ ಸರ್ವಸಹಾಯವ ಮಾಡುವಾ2

ಕಂದ ಅಬಲ ವೃದ್ಧರೆಂದು ಬಂಧು ಜನರು ಭಾಗ ಕಿರಿದುಕಂದುಕುಂದುರೋಗಿ ಸ್ತ್ರೀಯರೆಂದು ಭೇದವೊಇಂದಿರೇಶಗಿಲ್ಲ ನರರು ಒಂದೇ ಮನದಿ ಧ್ಯಾನಿಸಿದರೆಸುಂದರಾಂಗಮೂರ್ತಿಗೋವಿಂದ ಪೊರೆಯುವಾ3
*******

No comments:

Post a Comment