Tuesday, 19 November 2019

ಹರಿಶರಣು ಮಧ್ವಗುರು ಶರಣೆಂಬೋದೆ ankita prasannavenkata

by ಪ್ರಸನ್ನವೆಂಕಟದಾಸರು
ಹರಿಶರಣು ಮಧ್ವಗುರು ಶರಣೆಂಬೋದೆ ಬೀಜ ಮಂತ್ರ ಇಹಪರಕಿದೆ ಸಾಧನವೆಂದು ನಂಬಿಬಿಟ್ಟೆ ಹಲವು ತಂತ್ರ ಪ.

ಹರಿಕೊಡದಾರು ಕೊಡುವರಿಲ್ಲ ನರರನು ಬೇಡಲ್ಯಾಕೆ ಶ್ರೀಹರಿಕೊಟ್ಟರುಂಟು ಹಗಲಿರುಳು ಒಣಹಂಬಲ್ಯಾಕೆ1

ಇದು ನನ್ನದದು ನನ್ನದೆಂದು ಬರಿದೆ ಹೊತ್ತು ಹೋಯಿತಲ್ಲ ಶ್ರೀಪದುಮನಾಭನ ಕೃಪೆ ಭಕುತಿದಾರಿಯ ಹೊಂದಿ ಪಡೆಯಲಿಲ್ಲ 2

ಎರವಿನ ಸತಿಸುತ ಪಶು ಧಾನ್ಯ ಒಂದೊಂದಾಗ್ಯಗಲುವಾಗ ಗತಹರುಷನಾಗಿ ರಂಗನಂಘ್ರಿಯ ಮರೆದುಂಡೆನಿರಯಭೋಗ3

ಕರ್ಮತ್ರಯಗಳು ಕರಗವೆ ಶ್ರೀನಿವಾಸನೊಲುಮೆಯಿಂದ ದುಷ್ಕರ್ಮಾರಣ್ಯವು ಸುಟ್ಟು ಹೋಗದೆ ನಾಮಾಗ್ನಿಯಿಂದ 4

ಬೇಡಿದುದೀವ ಪ್ರಸನ್ವೆಂಕಟೇಶನ ಬೇಡಬೇಕು ಅವನಹಾಡುತ ಹೊಗಳುತ ಜನ್ಮಾಯುಷ್ಯವ ಹೋಗಾಡಬೇಕು 5
*******

No comments:

Post a Comment