..
kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru
ಶ್ರೀ ಶೇಷ ಚಂದ್ರಿಕಾರ್ಯರ ಸ್ತೋತ್ರ
ಶೇಷಚಂದ್ರಿಕಾ ಆರ್ಯರೇ ಶರಣು ಶೇಷಚಂದ್ರಿಕಾ
ಶೇಷಶಾಯಿ ನಿರ್ದೋಷ ಗುಣಾಂಬುಧಿ ಶ್ರೀಶಗೆ -
ಪ್ರಿಯ ರಘುನಾಥ ಯತೀಂದ್ರ -
ಇಂದಿರಾ ಸಹ ಹಂಸ ಬೋಧಿತ ಪ
ಮಂದಜಭವ ಸನಕಾದ್ಯರ ವಂಶಜಾ
ನಂದ ಮುನೀಂದ್ರ ಪರಂಪರ ಲಕ್ಷ್ಮಿ
ನಾರಾಯಣ ಯೋಗೀಂದ್ರ ಸಂಜಾತ ಶೇಷಚಂದ್ರಿಕಾರ್ಯರೇ 1
ಭೈಷ್ಮಿ ಮೈಥಿಲಿ ಈಶ ಶ್ರೀ ಕೃಷ್ಣ ರಾಮನ್ನ
ತೋಷಿಸಿ ತಂತ್ರ ಸುಸಾರದಿ ಅರ್ಚಿಸಿ
ಭಾಷ್ಯ ದೀಪಿಕಾರ್ಯ ತತ್ ಶಿಷ್ಯ ಶಿಷ್ಯ ಜಗನ್ನಾಥ
ಯತಿ ಸಂಸೇವಿತ ಕಾವೇರಿ ನರ -
ಸಿಂಹ ಕ್ಷೇತ್ರದಿ ಇಷ್ಟ ಶೇಷಚಂದ್ರಿಕಾ ಆರ್ಯರೇ ಶರಣು 2
ಬಂಧು ಭಯದಿಂದ ಹೊರನಿಂದೆ ಮಂದನ್ನ
ದಯದಿಂದ ಒಳಕರತಂದು ಸದನುಸಂಧಾನ
ಒದಗಿಸಿ ಅರವಿಂದಜ ತಾತ
ಪ್ರಸ್ನನ ಶ್ರೀನಿವಾಸ ಪ್ರಿಯಕರ ನರಾಂಶ ಸಂಯತ ಗುರುವರ -
ಮಹಂತ ಶರಣು - 3
***
No comments:
Post a Comment