Wednesday, 4 August 2021

ಭೂತ ಹಿಡಿದ್ಯದ ಭೂತ ಹಿಡಿದದ್ಯೆನ್ನ ankita krishna vittala

 ರಾಗ - : ತಾಳ -

ರಾಗ - : ತಾಳ -

ಶ್ರೀಮತಿ ಲಕ್ಷ್ಮೀ ಮಂಗಳವಾಡೆ ಅವರ ಧ್ವನಿಯಲ್ಲಿ

ಭೂತ ಹಿಡಿದ್ಯದ ಭೂತ ಹಿಡಿದದ್ಯೆನ್ನ l

ಸಂರಕ್ಷಣೆ ಮಾಡಿ ಮಹದ್ಭೂತ ll ಪ ll

ಕಾಮನ ಬಿಡಿಸಿತು ಕಾಮನಟ್ಟುಳಿ ಬಿಡಿಸಿತು l

ಕಾಮನವಳ ಸಹ ವಂದೇ ಆಪೋಶನ ಮಾಡಿತು l

ನಾ ಮಾಡುವದೇನು ತನ್ನ ನಾಮ ನೆನಿ ಅಂತದ ಯನ್ನ ಭಾಗ್ಯ l

ಸ್ವಾಮಿನೇ ಕಾಯಬೇಕು ದಾರಿಂದೇನಾಗುವದೊ ll 1 ll

ಕದರುಂಡಲಗಿಹನುಮ ಪೊಂಪಾ ವಿರೂಪಾಕ್ಷ l

ಇಂದ್ರಾದಿ ಸಕಲ ದೇವತಿಗಳು ಕೇಳಿರೊ l

ಮಂದಿಯೊಳಗೆ ಲಜ್ಜೆ ಬಿಡಿಸಿ ಕುಣಿಸತದ l

ಮುಂದೇನು ಗತಿಯನ್ನ ಸಂರಕ್ಷಣೆ ಮಾಡಿರೊ ll 2 ll

ಕಶ್ಯಪಾದಿ ಸಮಸ್ತ ಮುನಿಗಳು ಕಾಯಿರೊ l

ವಿಶ್ವವಂದ್ಯ ಗಣಪ ಧನಪ ನೀವೆನಗೆ ಬುದ್ಧಿ ವಿದ್ಯ ಕಲಿಸಿರೊ ಮ l

ನುಷೋತ್ತಮರೆಲ್ಲರು ಉಪಾಯ ತಿಳಿಸಿರೊ ಪಶುಪತಿ ಸಖ l

ಕೃಷ್ಣವಿಟ್ಠಲ ಶ್ರೀನಿವಾಸನೆಂಬೀ ಮಹದ್ಭೂತಯನ್ನ ಕೈವಳ l

ಗ ಸಿಗೊ ಹಾಗ ಸರ್ವರು ಅನುಗ್ರಹ ಮಾಡಿರಯ್ಯ ll 3 ll

***

No comments:

Post a Comment