ಕಾಖಂಡಕಿ ಶ್ರೀ ಕೃಷ್ಣದಾಸರು
ಬಾರೋ ಬಾರೋ ಬಾರೋ ರಂಗಾ | ಬಾರೋ ಶುಭಾಂಗಾ| ವರಶೌರಿ ಪರೋಪರಿದೋರ್ವಲೀಲೆ | ವೀರ ದೀರ ಶೂರುದಾರಿ ವಾರಿಜಾರಿ ವಂಶಜಾ ಪ
ಉತ್ಸಹದಗೆ ತ್ಯಾವಿನಾ | ವತ್ಸವ ಗಾಯಿದೇ ಪ್ರಾಣಾ | ಪರ ಸಂಹಾರಾ | ಮತ್ಸ್ಯಾವ ತಾರಾ | ಸಿರಿ ವತ್ಸ ಚಿತ್ಸ್ವರೂಪನೇ 1
ಕಾಯಜಕೋಟಿ ಲಾವಣ್ಯಾ | ಕಯಾದು ಸುತಪಾಲನಾ | ತ್ರಯಭುವನ ವ್ಯಾಪಕಾ | ತೃಯಾಕ್ಷ ಸಖಾ | ದಯ ತೋಯಧಿ ಶ್ರೀ ಯದುನಾಯಕನೇ | ತೋಯಜಾಯತಾಕ್ಷಾಕ್ಷಯ ಪಯಧೀಯ ವಾಸನೇ 2
ಮಂದಮತಿಯೆಂದು ನೋಡೋ | ಕುಂದನನಾರಿಸಬ್ಯಾಡೋ | ಬಂದು ಕೊಡೋ ಮಹಿಪತಿಯಾ | ನಂದನ ಪ್ರಿಯಾ | ಎಂದೆಂದಿಗೆ ಸದ್ವಂದ ರಕ್ಷಕ ಶ್ರೀ - ನಂದ ಕಂದ ಇಂದಿರೇಶಾನಂದನೀವಾ ನಂದನೆ 3
***
No comments:
Post a Comment