Friday, 15 November 2019

ಮರೆಯದಿರು ಮನವೆ ಮಾಧವನ ankita prasannavenkata

by ಪ್ರಸನ್ನವೆಂಕಟದಾಸರು
ರಾಗ - : ತಾಳ - 

ಮರೆಯದಿರು ಮನವೆ ಮಾಧವನ ನಮ್ಮ
ದುರಿತ ದಾರಿದ್ರ್ಯವನು ಹರಿಸಿ ಹೊರೆವವನ ll ಪ ll

ಆಳರಿತು ಊಳಿಗವ ಕೊಂಡುಂಡು ದಣಿವಂತೆ 
ಮೇಲಾಗಿ ಜೀವವನು ಕೊಡುವ ದೇವನ 
ಕಾಲ ಕಾಲಕೆ ಮಾಳ್ಪ ನಡೆತಪ್ಪು ನುಡಿತಪ್ಪು
ಆಲೋಚಿಸದೆ ಕರುಣಿಸುವ ಕರುಣನ ll ೧ ll

ಮೂಢನಾಗಲಿ ಮತಿಯುಳ್ಳ ನರನಾಗಲಿ 
ಪಾಡಿದಾಕ್ಷಣ ಭೃತ್ಯನೆಂದು ಒಲಿದು 
ಕೂಡಿಕೊಂಬುವ ದೊರೆಗಳಿಲ್ಲ ಹರಿಯಲ್ಲದಾ 
ನಾಡಾಡಿ ಬಣಗು ಕಲ್ಲುಗಳ ಬೇಡಿ ll ೨ ll

ಮುನ್ನಾರು ಅನ್ಯದೇವರ ಭಜಿಸಿ ಭವಗೆದ್ದ 
ರಿನ್ನಾರು ಹರಿಯೊಲುಮೆಯಲಿ ದಣಿದರು 
ನಿನ್ನ ಗುರುಗಳಿಂದರಿತು ನೆರೆನಂಬು ಪ್ರ
ಸನ್ನ ವೆಂಕಟಪತಿಯ ಪಾದವನಜವ ll ೩ ll
**

ಮರೆಯದಿರು ಮನವೆ ಮಾಧವನ ನಮ್ಮದುರಿತದಾರಿದ್ರ್ರ್ಯವನು ಹರಿಸಿ ಹೊರೆವವನ ಪ.

ಆಳರಿತು ಊಳಿಗವ ಕೊಂಡುಂಡು ದಣಿವಂತೆಮೇಲಾಗಿ ಜೀವವನು ಕೊಡುವ ದೇವನಕಾಲಕಾಲಕೆ ಮಾಳ್ಪ ನಡೆತಪ್ಪು ನುಡಿತಪ್ಪುಆಲೋಚಿಸದೆ ಕರುಣಿಸುವ ಕರುಣನ 1

ಮೂಢನಾಗಲಿ ಮತಿಯುಳ್ಳ ನರನಾಗಲಿಪಾಡಿದಾಕ್ಷಣ ಭೃತ್ಯನೆಂದು ಒಲಿದುಕೂಡಿಕೊಂಬುವ ದೊರೆಗಳಿಲ್ಲ ಹರಿಯಲ್ಲದಾನಾಡಾಡಿಬಣಗುಕಲ್ಲುಗಳ ಬೇಡಿ2

ಮುನ್ನಾರು ಅನ್ಯದೇವರ ಭಜಿಸಿ ಭವಗೆದ್ದರಿನ್ನಾರು ಹರಿಯೊಲುಮೆಯಲಿ ದಣಿದರುನಿನ್ನ ಗುರುಗಳಿಂದರಿತು ನೆರೆನಂಬು ಪ್ರಸನ್ನ ವೆಂಕಟಪತಿಯ ಪಾದವನಜವ 3
*******

No comments:

Post a Comment