Wednesday, 13 November 2019

ಪೃಕ್ಷದಶ್ವ ಪಾಲಿಪುದೆನ್ನ ಈ ದುರ್ವಿಷಯ ankita pranesha vittala

by ಪ್ರಾಣೇಶದಾಸರು
ಪೃಕ್ಷದಶ್ವ ಪಾಲಿಪುದೆನ್ನ ಈ ದು |ರ್ವಿಷಯ ತ್ಯಜಿಸಿ ಶ್ರೀ ಕೃಷ್ಣನ್ನ ||ಅಸಮ ಪಾದಾಬ್ಜ ಭಜಿಸುವಂತೆ ಪ್ರತಿದಿನ |ಹಸನಾದ ಜ್ಞಾನ ಪ್ರೇರಿಸೊ ಭಕ್ತ ಸುರತರು ಪ

ಪರಿಸರ ಕೃಷ್ಣೇಶ ಗಂಧ ವಹಸಿರಿವಲ್ಲಭ ಪದಾರವಿಂದಭೃಂಗ|ಪುರುಹೂತಮುಖ ಸುರವೃಂದ ವಂದ್ಯ |ಗಿರಿಜಾ ಪಾಲಕ ಶತಾನಂದ||ಆಹಾ||ಎರಡು ಹತ್ತೊಂದು ಸಾವಿರದಾರುನೂರ್ಜಪಸರುವ ಜೀವರೊಳಗೆ ಇರುಳು ಹಗಲು ಮಾಳ್ಪ 1

ನಾಗಾದಿ ದಶರೂಪ ಧರ ತಲೆಬಾಗುವೆ ನಿನಗೆ ಉದಾರ ವಿಕ್ರ-ಮಾಘಕಾನನವೈಶ್ವಾನರ, ಹೇ ಸ-ದಾಗತಿ ಕುಜನ ಕುಠಾರಾ ||ಆಹಾ||ಮಾಗಧರಿಪುಹೊತ್ತು ಹೋಗುತಲಿದೆ ಈಗ |ಭಾಗವತರ ಸಂಗಜಾಗುಮಾಡದಲೀಯೋ 

 ಶ್ರೀ ಮಾರುತ ಯಾತುಧಾನ ಸಂಹರನೆ ಹೇಮಾತರಿಶ್ವ|ಪ್ರಾಣೇಶ ವಿಠಲನ ದೂತ ಚತು-ರಾನನ ಪದಯೋಗ್ಯವಾತ||ಆಹಾ||ಕ್ಷೋಣಿಯೊಳೆನ್ನಂಥ ಹೀನರಿಲ್ಲವೊ ಪಾಪ |ಕ್ಷೀಣಿಸಿ ಸಲಹೋ ಸುಶೇಣಾದಿಸೂದನ 3
********

No comments:

Post a Comment