..
ನಾನು ಸಜ್ಜನನಾದೊಡೆಹೀನವಿಷಯಂಗಳಿಗೆ ಎರಗುವೆನೇನಯ್ಯ ಪ.
ಚಿತ್ತವÀ ಪುರುಷೋತ್ತಮನಲ್ಲಿಡದೆಉತ್ತಮರಾದವರೊಡನಾಡದೆತತ್ವವಿಚಾರವೊಂದರಿಯದೆ ನಾನು-ನ್ಮತ್ತರಸಂಗವ ಮಾಡುವೆನೇನಯ್ಯ1
ನಿರುತವು ಪರನಿಂದೆಗಳ ಮಾಡುತಲಿಗುರುಹಿರಿಯರನು ವಿಚಾರಿಸದೆಗುರುವೆ ದೈವವೆಂದರಿಯದೆ ನಾನುಪರರ ಒಡವೆಯನು ಬಯಸುವೆನೇನಯ್ಯ 2
ಹೇಯಶರೀರವ ಪೋಷಿಸುವೆನೆಂದು-ಪಾಯವನು ಮಾಡಿ ನಾ ಬಳಲುತಿಹೆರಾಯರು ಮಾಡಿದ ಶರಣರ ಹೊರೆವಹಯವದನ ನಿನ್ನ ನಾ ಮರೆತಿಹೆನೇನಯ್ಯ 3
***
No comments:
Post a Comment