Thursday, 5 December 2019

ನೀನೊಲಿದರೇನಾಹುದು ಶ್ರೀಹರಿಯೆ purandara vittala

ಪುರಂದರದಾಸರು
ನೀನೊಲಿದರೇನಾಹುದು ಶ್ರೀಹರಿಯೆ - |ಮುನಿಯೆ ನೀನೆಂತಾಹುದು ಪ

ವಾಲಿಬಲ್ಲಿದ ವಾನರರಿಗೆ - ಶ್ರೀಹರಿಯೆನೀ ಮುನಿದು ಎಚ್ಚವನ ಕೊಂದೆ |ಮೇಲೆ ಕಿಷ್ಕಿಂಧೆಯ ಪುರದ ಸುಗ್ರೀವನವಾಲಿಯ ಪದದಲ್ಲಿಟ್ಟೆ 1

ಮೂರು ಲೋಕವನಾಳುವ - ರಾವಣನಊರ ಬೂದಿಯ ಮಾಡಿದೆ |ವಾರಿಧಿಯ ಒಳಗಿಪ್ಪ ಲಂಕೆಯ ವಿಭೀಷಣಗೆಸ್ಥಿರಪಟ್ಟವನು ಕಟ್ಟಿದೆ 2

ಪನ್ನಗವನುದ್ಧರಿಸಿದೆ - ಕೌರವರ -ಹನ್ನೊಂದಕ್ಷೋಣಿ ಬಲವ |ಛಿನ್ನಛಿದ್ರವ ಮಾಡಿ ಅವರನ್ನು ಮಡುಹಿದೆಪಾಂಡವರ ಪದವಿಯಲಿಟ್ಟೆ 3

ಹಿರಣ್ಯಕನು ಸುತನ ಕೊಲಲು - ಆಗ ನೀಕರುಣದಿಂದೋಡಿ ಬಂದೆ |ಮರಣವೈದಿಸಿ ಪಿತನತರಳ ಪ್ರಹ್ಲಾದನನುಶರಣರೊಳು ಸರಿಮಾಡಿದೆ 4

ಭಾಷೆ ಪಾಲಿಪನೆನುತಲಿ - ನಾ ಬಹಳಆಸೆ ಮಾಡುತಲಿ ಬಂದೆ |ಶೇಷಗಿರಿವಾಸ ಪುರಂದರವಿಠಲ ದಾರಿದ್ರ್ಯನಾಶಮಾಡೆನ್ನ ಸಲಹೊ 5
********

No comments:

Post a Comment