Friday, 6 December 2019

ಮೆಚ್ಚನಯ್ಯ ಹರಿ ಒಪ್ಪನಯ್ಯ purandara vittala

ರಾಗ ಯದುಕುಲಕಾಂಭೋಜ ಆದಿ ತಾಳ 

ಮೆಚ್ಚನಯ್ಯ ಹರಿ ಒಪ್ಪನಯ್ಯ ||ಪ||
ರಚ್ಚೆಮುಚ್ಚೆ ಮಾಡಿ ಹರಿಯ ಮೆಚ್ಚಿಸುವೆನೆಂದರೆ ||ಅ||

ಊರೆಲ್ಲರು ಅರಿಯುವಂತೆ ಅರುಣೋದಯದಲ್ಲಿ ಎದ್ದು
ನೀರೊಳಗಿನ ಕಪ್ಪೆಯಂತೆ ಮುಳುಗಿ ಮುಳುಗಿ ಎಳುವವರ ||

ಚರ್ಮವ ತೊಳೆದಿಟ್ಟು ಗೋಪಿಚಂದನ ರೇಖೆಯ ಬರೆದು
ಹೆಮ್ಮೆ ವೇಷದಿಂದ ಕುಣಿದು ಡಂಭಕತನದವರ ||

ಪಟ್ಟೆ ಮಡಿಯನುಟ್ಟುಕೊಂಡು ಪೆಟ್ಟಿಗೆ ಹರವಿಟ್ಟುಕೊಂಡು
ಕೊಟ್ಟೆ ಎತ್ತಿನ ಘಂಟೆಯಂತೆ ನುಡಿವುತಿಹರ ಮಂತ್ರವನ್ನು ||

ಮನವನೊಂದು ಕಡೆಯಲಿಟ್ಟು ತನುವನಡ್ಡ ಕೆಡಹಿಕೊಂಡು
ಮರದ ಮೇಲಿನ ಕೋತಿಯಂತೆ ಮಾಡುವ ನಮಸ್ಕಾರವನ್ನು ||

ದೇವಾರಾಧನೆಯೆಂದು ಬ್ರಾಹ್ಮಣರುಂಡು ದಣಿಯಲಿಲ್ಲ
ನರಿನಾಯಿ ಕರೆದು ತಂದು ನಾಯಿಬಾಯಿ ತೊಳೆವರ ||

ಹರಟೆಗಾಗಿ ಹರಸಿಕೊಂಡು ತಿರುಪತಿ ಯಾತ್ರೆಗೆ ತೆರಳಿ
ಮುಡುಪು ಕಟ್ಟಿಕೊಂಡು ಹೋಗಿ ಬಿಡದಿ ಹಾಕಿ ಮಿಡುಕುವರ ||

ಮನವನೊಂದು ಕಡೆಯಲಿಟ್ಟು ತನುವನಡ್ಡ ಕೆಡಹಿಕೊಂಡು
ಪುರಂದರವಿಠಲನ್ನ ಒಲಿದು ಪೂಜೆಯ ಮಾಡುವರ ||
***

pallavi

meccanayya hari oppanayya

anupallavi

racce mucce mADi hariya meccisuvenendare

caraNam 1

Urellaru arivante aruNOdayadalli eddu nIroLagina kappeyante muLugi muLugi eLuvavara

caraNam 2

carmava toLadiTTu gOpicandana rEkheya baredu hemme vESadinda kuNidu Dambhakatanadavara

caraNam 3

paTTe maDiyanuTTu koNDu pettige haraviTTukoNDu koTTe ettina khaNTeyante nuDivutihara mantravannu

caraNam 4

manavanondu kaDeyaliTTu tanuvanaDDa keDahi koNDu marada mElina kOdiyante mADuva namaskAravannu

caraNam 5

dEvArAdhaneyendu brAhmaNaruNDu daNiyalilla naranAyi karedu tandu nAyi bAyi toLedavara

caraNam 6

haraTegAgi harasi koNDu tirupati yAtrege teraLi muDupu kaTTikoNDu hOgi biDadi hAki miDuluvara

caraNam 7

manavanondu kaDeyaliTTu tanuvanaDDa keDahi koNDu purandara viTTalanna olidu pUjeya mDuvara
***

No comments:

Post a Comment