Thursday, 5 December 2019

ನಾರಾಯಣಾಯ ನಮೋ purandara vittala ಗಜೇಂದ್ರ ಮೋಕ್ಷ NARAYANAAYA NAMO GAJENDRA MOKSHA

 ರಾಗಮಾಲಿಕೆ ಖಂಡಛಾಪುತಾಳ
1st Audio by Mrs. Nandini Sripad




ಶ್ರೀಪುರಂದರದಾಸಕೃತ ಗಜೇಂದ್ರಮೋಕ್ಷ 

ರಾಗಗಳು ಭೌಳಿ ಮೋಹನ ಕಲ್ಯಾಣಿ ಅಭೇರಿ ಸಿಂಧುಭೈರವಿ ಕಲಾವತಿ ಬಿಲಹರಿ ಹಿಂದೋಳ ಆರಭಿ ಸಾವೇರಿ ಕೇದಾರಗೌಳ
ರಾಗಮಾಲಿಕೆ, ಖಂಡಛಾಪುತಾಳ

 ರಾಗ ಭೌಳಿ           ಖಂಡಛಾಪುತಾಳ 

ನಾರಾಯಣಾಯ ನಮೋ ನಾಗೇಂದ್ರಶಯನಾಯ ।
ನಾರದಾದ್ಯಖಿಳಮುನಿನಮಿತಚರಣಾಂಭೋಜ ॥ ಪ ॥
ಸಾರಿದರೆ ಪೊರೆವ ಕಂಸಾರಿ ರಕ್ಷಿಪುದಿಂದು ।
ಕಾರುಣ್ಯದಿಂದೊಲಿದು ಹರಿಯೇ ॥ ಅ ಪ ॥

ಪಾಂಡ್ಯದೇಶದೊಳಗೆ ಇಂದ್ರದ್ಯುಮ್ನನೆಂಬ ಭೂ - ।
ಮಂಡಲಾಧಿಪನು ವೈರಾಗ್ಯದಲಿ ಹರಿಪಾದ - ।
ಪುಂಡರೀಕಧ್ಯಾನಪರನಾಗಿ ತಪದೊಳಿರೆ ।
ಚಂಡತಾಪಸ ಅಗಸ್ತ್ಯ ।
ಹಿಂಡುಶಿಷ್ಯರವೆರಸಿ ಬರಲು ಸತ್ಕರಿಸದಿರೆ ।
ಕಂಡು ಗಜಯೋನಿಯೊಳು ಜನಿಸು ಪೋಗೆನುತಲು - ।
ದ್ದಂಡ ಶಾಪವನಿತ್ತು ಮುನಿಪೋಗುತಿರಲತ್ತ ।
ಶುಂಡಾಲನಾದನರಸ ॥ 1 ॥

 ರಾಗ  ಮೋಹನ 

ಕ್ಷೀರಸಾಗರದಡಿಯ ಐದು ಯೋಜನದ ವಿ - ।
ಸ್ತಾರದಲಿ ವರತ್ರಿಕೂಟಾದ್ರಿ ಶೃಂಗತ್ರಯದಿ ।
ರಾರಾಜಿಸುತಲಿಪ್ಪ ರಜತ ತಾಮ್ರಧ್ವಜದ ।
ಮೇರುಸಮಗಾಂಭೀರ್ಯದಿ ।
ಪಾರಿಜಾತಾಂಭೋಜ ತುಲಸಿ ಮಲ್ಲಿಗೆ ಜಾಜಿ ।
ಸೌರಭದೊಳಶ್ವತ್ಥ ಪೂಗಪುನ್ನಾಗ ಜಂ - ।
ಬೀರಾದಿ ತರುಗುಲ್ಮ ಖಗಮೃಗಗಳೆಸೆವಲ್ಲಿ ।
ವಾರಣೇಂದ್ರನು ಮೆರೆದನು ॥ 2 ॥

 ರಾಗ  ಕಲ್ಯಾಣಿ 

ಆನೆ ಹೆಣ್ಣಾನೆ ಮರಿಯಾನೆ ಸಹಿತಲಾ - ।
ಕಾನನವನಲೆಯುತಾ ಬೇಸಿಗೆಯ ಬಿಸಿಲಿನಲಿ ।
ತಾ ನೀರಡಿಸಿ ಬಂದುದೊಂದು ಸರಸಿಗೆ ಸಲಿಲಾ ।
ಪಾನಾಭಿಲಾಷೆಯಿಂದ ।
ನಾನಾ ಪ್ರಕಾರದಲಿ ಜಲಕ್ರೀಡೆಯಾಡುತಿರೆ ।
ಏನಿದೆತ್ತಣ ರಭಸಮೆಂದುಗ್ರಕೋಪದಿಂ ।
ಆ ನೆಗಳೆ ಬಾಯ್ತೆರೆದು ನುಂಗಿತೊಂದಂಘ್ರಿಯನು ।
ಏನೆಂಬೆನಾಕ್ಷಣದೊಳು ॥ 3 ॥

 ರಾಗ  ಅಭೇರಿ 

ಒತ್ತಿ ಹಿಡಿದೆಳೆಯುತಿರೆ ಎತ್ತಣದಿದೇನೆನುತ ।
ಮತ್ತಗಜರಾಜ ಅವಡೊತ್ತಿ ಘೀಳಿಡುತಲಿ ಎಳೆ - ।
ದೊತ್ತಿ ದಂಡೆಗೆ ತರಲು ಮತ್ತೆ ನಡುಮಡುವಿನೊಳ ।
ಗೆಳೆದೆತ್ತುದಾ ನೆಗಳೆ ।
ಇತ್ತಂಡವಿತ್ತು ಕಾದುತ್ತ ಸಾವಿರ ವರುಷ ।
ವಿಸ್ತರಿಸಿತೇನೆಂಬೆ ಮತ್ತಾಗಜೇಂದ್ರಗೆ ।
ಸತ್ವ ತಗ್ಗಿತು ತನ್ನ ಚಿತ್ತದಲೆ ಧ್ಯಾನಿಸುತ ।
ಮತ್ತಾರು ತನಗೆನುತಲಿ ॥ 4 ॥

 ರಾಗ  ಸಿಂಧುಭೈರವಿ 

ಬಂದುದಾ ಸಮಯದಲಿ ಹಿಂದೆ ಮಾಡಿದ ಪುಣ್ಯ - ।
ದಿಂದ ದಿವ್ಯಜ್ಞಾನ ಕಣ್ದೆರೆದು ಕೈಮುಗಿದು ।
ವಂದಿಸುತ ಮನದೊಳರವಿಂದನಾಭಾಚ್ಯುತ ಮು -।
ಕುಂದ ಮುನಿವೃಂದವಂದ್ಯ ।
ಇಂದಿರಾರಮಣ ಗೋವಿಂದ ಕೇಶವ ಭಕ್ತ - ।
ಬಂಧು ಕರುಣಾಸಿಂಧು ತಂದೆ ನೀ ಸಲಹೆನ್ನ ।
ಬಂದು ಸಿಲುಕಿದೆನು ಬಲುದಂದುಗದ ಮಾಯಾಪ್ರ - । ಬಂಧದಿಂ ನೆಗಳೆಯಿಂದ ॥ 5 ॥

 ರಾಗ  ಕಲಾವತಿ 

ಪರಮಾತ್ಮ ಪರಿಪೂರ್ಣ ಪರಮೇಶ ಪರತತ್ವ ।
ಪರತರ ಪರಂಜ್ಯೋತಿ ಪರಮಪಾವನಮೂರ್ತಿ ।
ಉರುತರ ಪರಬ್ರಹ್ಮ ಆನಂದ ಪರಮೇಷ್ಠಿ ।
ಪರಾತ್ಪರ ಪರಮಪುರುಷ ।
ನಿರುಪಮ ನಿಜಾನಂದ ನಿರ್ಭಯ ನಿರಾವರಣ ।
ನಿರವಧಿಕ ನಿರ್ಗುಣ ನಿರಂಜನ ನಿರಾಧಾರ ।
ನಿರವದ್ಯ ನಿಸ್ಸಂಗ ನಿಶ್ಚಿಂತ್ಯ ನಿತ್ಯನೆ ।
ನೋಯಿಸದೆ ಸಲಹೆನ್ನ ಹರಿಯೇ ॥ 6 ॥

 ರಾಗ  ಬಿಲಹರಿ 

ಇಂತೆನುತ ಮೂರ್ಛೆಯಲಿ ಕಂಪಿತಕಂಠಧ್ವನಿಯೊ - ।
ಳಂತರಾತ್ಮಕನ ನೆನೆಯುತ್ತ ಅಳುತಿರಲತ್ತ - ।
ನಂತಮಹಿಮನು ಕೇಳಿ ಕರುಣದಿಂದಾಕ್ಷಣಾ ।ನಂತಶಯನದಿಂದೆದ್ದನು ।
ಸಂತಸದಿ ಸಿರಿಸಹಿತ ಗರುಡವಾಹನನಾಗಿ ।
ಚಿಂತೆ ಬೇಡೇಳೆನುತ ಅಭಯಹಸ್ತವನಿತ್ತೇ - ।
ಕಾಂತಭಕ್ತನ ಬಳಿಗೆ ಬಂದೆರಡು ಕೈಗಳಿಂ ।
ದಂತಿರಾಜನನು ನೆಗಹಿದ ॥ 7 ॥

 ರಾಗ  ಹಿಂದೋಳ 

ನೆಗಳೆಬಾಯನು ಚಕ್ರದಲಿ ಸೀಳಿ ಕರಿವರನ ।
ಉಗುವ ಕರುಣದಲಿ ಮೈದಡಹಲ್ಕೆ ಗಜಜನ್ಮ ।
ತೆಗೆದುದಾಕ್ಷಣದಿ ಮಣಿಮಕರಕುಂಡಲದಿಂದ ।
ಮಿಗೆ ಶೋಭಿಸುತಲೆಸೆದನು ।
ವಿಗಡ ದೇವಲಋಷಿಯ ಶಾಪದಲಿ ಬಿದ್ದಿಳೆಗೆ ।
ಮಿಗೆ ನಕ್ರನಾಗಿ ಹೂಹೂ ಎಂಬ ಗಂಧರ್ವ ।
ನಗಧರನ ಕಂಡು ನಿಜಗತಿಗೈದುದಮರರೊಳ್ - ।
ಮಿಗೆ ಮೆರೆದನೋಲೈಸುತ ॥ 8 ॥

 ರಾಗ  ಆರಭಿ 

ಮಣಿಮಯ ಕಿರೀಟಕುಂಡಲ ಹಾರಕೌಸ್ತುಭದಿ ।
ಮಿನುಗುತಿಹ ವೈಜಯಂತಿ ಭೂಷಣಾವಳಿಯ ।
ಫಣೆಯ ಕಸ್ತೂರಿತಿಲಕ ನಾಮದಿಂದೆಸೆವುತಿಹ ।
ವರಶಂಖಚಕ್ರದಿಂದ ॥
ಝಣಝಣಿತ ನೂಪುರದ ದಂತಪಂಕ್ತಿಯ ಕೃಪೇ - ।
ಕ್ಷಣದ ಸಿರಿಮೊಗದ ಪೀತಾಂಬರಾಲಂಕೃತದಿ ।
ಮಣಿದು ಜಯಜಯವೆಂಬ ಸುರಸಿದ್ಧಸಾಧ್ಯ ಸಂ - ।
ದಣಿಯೊಳಗೆ ಹರಿ ಮೆರೆದನು ॥ 9 ॥

 ರಾಗ  ಸಾವೇರಿ 

ಹರಿಸ್ತುತಿಯಗೈದಂಘ್ರಿಗೆರಗಲಾ ಭೂಪನಾ - ।
ದರದಿಂದ ಸತ್ಕರಿಸಿ ಶರಧಿಶ್ವೇತದ್ವೀಪ ।
ಗಿರಿ ಶೃಂಗ ವಾರಾಹಿ ತರು ಶೇಷ ವಾಲ್ಮೀಕಿಮುನಿ ।
ಧರಣಿ ಧ್ರುವ ಲಕ್ಷ್ಮಿಯು ।
ಹರ ಗಿರಿಜೆ ವಿಧಿ ವಾಣಿ ನಾರದ ಪ್ರಹ್ಲಾದ ।
ಗರುಡ ಗೋ ವಿಪ್ರ ಋಷಿ ಗಂಗಾರ್ಕ ಚಂದ್ರಾಗ್ನಿ ।
ಸಿರಿವತ್ಸ ಶಂಖಚಕ್ರಾದ್ಯವತಾರಗಳ ।
ಸ್ಮರಿಸುವವರ ಕಾಯ್ವೆನೆಂದಾ ॥ 10 ॥

 ರಾಗ  ಕೇದಾರಗೌಳ 

ಆವನಿದನುದಯಕಾಲದಲೆದ್ದು ನಿಜಭಕ್ತಿ - ।
ಭಾವಶುದ್ಧಿಗಳಿಂದ ಪೇಳಿ ಕೇಳ್ವರೋ ಅವರ ।
ಸಾವಿರಜನ್ಮಗಳ ಸಂಚಿಘರಾಶಿಗಳು ।
ತಾವೇ ಹತವಾದವೆಂದು ।
ಶ್ರೀವಾಸುದೇವನಾಜ್ಞಾಪಿಸಿ ಗಜೇಂದ್ರಸಹಿ - ।
ತಾವಿಹಂಗಾಧಿಪನೇರಿ ವೈಕುಂಠಕ್ಕೆ ।
ದೇವ ಬಿಜಯಂಗೈದ ಪುರಂದರವಿಟ್ಠಲ ನ ।
ಸೇವಕರಿಗಿದು ಚಿತ್ರಮೆ ॥ 11 ॥
****


ರಾಗ ಭೌಳಿ    ಖಂಡಛಾಪುತಾಳ (raga tala may differ in audio)

Narayanaya namo nagendra shayanaya Naradadyakhila muni namita padambhoja
Seridare poreva kamsari raksipanemma Kaarunyadinda olidu||

Pandya deshadolu indradyumnanemba bhumandaladhipanu vairagyadali
Haripada pundarika dhyanaparanagi tapadolire chandatapa sanaka satya
Hindu shisyaruverasi baralu satkarisadire kandugra kopadim gajanagi
Janisal uddanda papavanittu muni tirugalattalai shandalanadanarasa||1||

Ksira sagaradaleradiraidu yojanada mereyali vara trikutadri shrnga
Trayadi raraajisuva tamra rajita kancanadinda narayanamshadinda
Parijatambhoja poga punnaga jambhira taru
Gulma shaka mrugagalesevalli varanendranu meredanu||2||

Ane hennane mariyanegala sahitalli kaananadi tolutta besageya
Pisilalli tanu neeridisi bandondu sarasiya tatake panabhilaseyinda naana
Prakaaradim jala krideyaadutira lenidettana rabhasavendugra kopadim
A negalu bai teredu nungitondanghriyanu enembenaksanadolu ||3||

Otti pidideleyutire ettanadidenenuta matta ibharajaneladotti
Noduttanghri etti tandanu tadige matte nadu maduvinolu attale tiruge
Negale ittanadindu kaadidaru savira varusa uttarisitenemba mattaa
Gajendrarange sattava taggidu tanna manadolage cintisidu mattaru gatiyenutali ||4||

Banduda samayadali hinde madida punyadinda divya jnana kanneredu
Manadolaravinda naabhacyuta mukunda madhava krsna nikhila muni vrnda vandya
Indiraramana govinda keshva bhaktabandu karunssindhu tande ni gatiyenage
Indu silkidenu balu dandugada mayaprabandhagane negalininda||5||

Paramaatma paramesha paratatva paripujya paratara paramjyoti parama
Pavana murti paramesti parabrahma parama paramakasha paripurna paramapurusa
Nirupama nijananda nirlaya nirakara niravadhika nirguna niranjana nairadhara
Niravadya nissanga nishcinta nikhilesha irade ni salahendanu||6||

Intenuta murccheyali gupta kanda svarada kanta nadu nirolage teli mulugutalire
Acintya mahimanu keli karunadinda mahananda shayanadoleddanu
Santavidutude mudiya garudanaerade bandu cinte bedenutabhaya hastavanukoduta
Shrikanta bhaktana balige bahdedada kaiyinda tantravarananu negahida||7||

Negala bayanu cakradali sili karivarana oguva karanadali madadahalke gaja
Janma tegeduda ksanage manimukuta kundaladinda nagadharanu Olaisida
Vikatadevala muniya shapadali dharuniyolage nakranagi huhu emba gandharva
Maguli puravanu kandu nija gatige aididanu kamalaksamike meredanu||8||

Manimukuta kundala padaka hara kadaga kankana kaustubhojvalangada
Vaijayanti bhusana shankha cakra gade padma dharissida hasta paneya kasturi
Tilakada jhana jhanipa nupurada dantapanktiya krpeksanada sirimogada pitambarada
Murutige manidu jaya jaya jaya emba sura narara sandaniyinde hari meradanu ||9||

Hari hari enuttanghrigeregalibhavaranadaradindalettuli kel magane ninenna
Viraje shuravaridhiya surapanahipatiyennu para janmani lakumiya paramesti
Bhavara manu munigalanu dharaniyanu tarani shashi navashakti visnu
Dharmavatarapara varagada shankha cakrambhujagalanu smarisuvara kayvenenda||10||

Avavanidanutayadalleddu bhaktiyali bhava shuddhiyali ta heli koluvano avana
Ghavaliya pariharisisu-jnanavive dehavasanadalenutali
Shri vasudevanajnyapisi gajendra sahita vihankadhi-pananeri vaikunthakke
Deva pijayangaida purandara vittalana sevakarigidu cittave||11||
***

pallavi

nArAyaNAya namO nAgEndra shayanAya nradAdyakhiLa muni namita pAdAmbhOja sEridare poreva kamsAri rakSipanemma kAruNyadinda olidu

caraNam 1

pANDya dEshadoLu indradyumnanemba bhUmaNDalAdhipanu vairAgyadali
haripAda puNDarIka dhyAnaparanAgi tapadoLire caNDatApa sanaka satya
hiNDu shiSyaruverasi baralu satkarisadire kaNDugra kOpadim gajanAgi
janisaluddaNDa pApavanittu muni tirugalattalai shaNDAlanAdanarasa

caraNam 2

kSIra sAgaradaleraDIraidu yOjanada mereyali vara trikUTAdri shrngatrayadi
rArAjisuva tAmra rajitakAncanadinda nArAyaNAmshadinda pArijAtAmbhOja
poga punnAga jambhIra taru gulma shAkA mrgagaLesevalli vAraNEndranu meredanu

caraNam 3

Ane heNNAne mariyAnegaLa sahitalli kAnanadi toLutta bEsageya
pisilalli tAnu nIraDisi bandondu sarasiya taTake pAnAbhilASeyinda nAnA
prakAradim jala krIDeyADutira lEnidettaNa rabhasavendugra kOpadim
A negaLu bAi teredu nungitondanghriyanu EnembenAkSaNadoLu

caraNam 4

otti piDideLeyutire ettaNadidEnenuta matta ibharAjaneLaDotti
nODuttanghri etti tandanu taDige matte naDu maDuvinoLu attale tiruge
negaLe ittaNadindu kAdidaru sAvira varuSa uttarisitEnemba mattA
gajEndrarange sattava taggidu tanna manadoLage cintisidu mattAru gatiyenutali

caraNam 5

bandudA samayadali hinde mADida puNyadinda divya jnAna kaNNeredu
manadoLaravinda nAbhAcyuta mukunda mAdhava krSNa nikhila muni vrnda vandya
indirAramaNa gOvinda kEshva bhaktabandu karuNSsindhu tande nI gatiyenage
indu silkidEnu balu dandugada mAyAprabandhagane negaLininda

caraNam 6

paramAtma paramEsha paratatva paripUjya paratara paramjyOti parama
pAvana mUrti paramESTi parabrahma parama paramAkAsha paripUrNa paramapuruSa
nirupama nijAnanda nirlaya nirAkAra niravadhika nirguNa niranjana nairAdhAra
niravadya nissanga nishcinta nikhilEsha irade nI salahendanu

caraNam 7

intenuta mUrccheyali gupta kaNDa svarada kAnta naDu nIroLage tEli muLugutalire
acintyA mahimanu kELi karuNadindA mahAnanda shayanadoLeddanu
santaviDutuDe muDiya garuDanaErade bandu cinte bEDenutabhaya hastavanukoDuta
shrIkAnta bhaktana baLige bahdeDada kaiyinda tantravarananu negahida

caraNam 8

negaLa bAyanu cakradali sILi karivarana oguva karaNadali madaDahalke gaja
janma tegedudA kSaNage maNimukuTa kuNDaladinda nagadharanu Olaisida
vikaTadEvala muniya shApadali dhAruNiyoLage nakranAgi hUhU emba gandharva
maguLi puravanu kaNDu nija gatige aididanu kamalAkSamike meredanu

caraNam 9

maNimukuTa kuNDala padaka hAra kaDaga kankaNa kaustubhOjvalAngada
vaijayanti bhUSaNa shankha cakra gade padma dharissida hasta paNeya kastUri
tilakadA jhaNa jhaNipa nUpurada dantapanktiya krpEkSaNada sirimogada pItAmbarada
mUrutige maNIdu jaya jaya jayA emba sura narara sandaNiyinde hari meradanu

caraNam 10

hari hari enuttanghrigeregalibhavaranAdaradindalettuli kEL magane nInenna
viraje shuravaridhiyA surapanahipatiyennu para janmanI lakumiya paramESTi
bhavara manu munigaLanu dharaNiyanu taraNi shashi navashakti viSNu
dharmavatArapara varagadA shankha cakrAmbhujagaLanu smarisuvara kAvenenda

caraNam 11

AvAvanidanutayadalleddu bhaktiyali bhAva shuddhiyali tA hELi koLuvano avana ghAvaLiya
pariharisisu-jnAnavIve dEhAvasAnadalenutali shrI vAsudEvanAjnyApisi gajendra sahitA vihankAdhi-
pananEri vaikuNThakke dEva pijayangaida purandara viTTalana sEvakarigidu cittave
***
ಶ್ರೀಪುರಂದರದಾಸಕೃತ ಗಜೇಂದ್ರಮೋಕ್ಷ gajendra moksha by p.dasa

ನಾರಾಯಣಾಯ ನಮೋ ನಾಗೇಂದ್ರಶಯನಾಯ ।
ನಾರದಾದ್ಯಖಿಳಮುನಿನಮಿತಚರಣಾಂಭೋಜ ॥ ಪ ॥
ಸಾರಿದರೆ ಪೊರೆವ ಕಂಸಾರಿ ರಕ್ಷಿಪುದಿಂದು ।
ಕಾರುಣ್ಯದಿಂದೊಲಿದು ಹರಿಯೇ ॥ ಅ ಪ ॥

ಪಾಂಡ್ಯದೇಶದೊಳಗೆ ಇಂದ್ರದ್ಯುಮ್ನನೆಂಬ ಭೂ - ।
ಮಂಡಲಾಧಿಪನು ವೈರಾಗ್ಯದಲಿ ಹರಿಪಾದ - ।
ಪುಂಡರೀಕಧ್ಯಾನಪರನಾಗಿ ತಪದೊಳಿರೆ ।
ಚಂಡತಾಪಸ ಅಗಸ್ತ್ಯ ।
ಹಿಂಡುಶಿಷ್ಯರವೆರಸಿ ಬರಲು ಸತ್ಕರಿಸದಿರೆ ।
ಕಂಡು ಗಜಯೋನಿಯೊಳು ಜನಿಸು ಪೋಗೆನುತಲು - ।
ದ್ದಂಡ ಶಾಪವನಿತ್ತು ಮುನಿಪೋಗುತಿರಲತ್ತ ।
ಶುಂಡಾಲನಾದನರಸ ॥ 1 ॥

 ರಾಗ  ಮೋಹನ 

ಕ್ಷೀರಸಾಗರದಡಿಯ ಐದು ಯೋಜನದ ವಿ - ।
ಸ್ತಾರದಲಿ ವರತ್ರಿಕೂಟಾದ್ರಿ ಶೃಂಗತ್ರಯದಿ ।
ರಾರಾಜಿಸುತಲಿಪ್ಪ ರಜತ ತಾಮ್ರಧ್ವಜದ ।
ಮೇರುಸಮಗಾಂಭೀರ್ಯದಿ ।
ಪಾರಿಜಾತಾಂಭೋಜ ತುಲಸಿ ಮಲ್ಲಿಗೆ ಜಾಜಿ ।
ಸೌರಭದೊಳಶ್ವತ್ಥ ಪೂಗಪುನ್ನಾಗ ಜಂ - ।
ಬೀರಾದಿ ತರುಗುಲ್ಮ ಖಗಮೃಗಗಳೆಸೆವಲ್ಲಿ ।
ವಾರಣೇಂದ್ರನು ಮೆರೆದನು ॥ 2 ॥

 ರಾಗ  ಕಲ್ಯಾಣಿ 

ಆನೆ ಹೆಣ್ಣಾನೆ ಮರಿಯಾನೆ ಸಹಿತಲಾ - ।
ಕಾನನವನಲೆಯುತಾ ಬೇಸಿಗೆಯ ಬಿಸಿಲಿನಲಿ ।
ತಾ ನೀರಡಿಸಿ ಬಂದುದೊಂದು ಸರಸಿಗೆ ಸಲಿಲಾ ।
ಪಾನಾಭಿಲಾಷೆಯಿಂದ ।
ನಾನಾ ಪ್ರಕಾರದಲಿ ಜಲಕ್ರೀಡೆಯಾಡುತಿರೆ ।
ಏನಿದೆತ್ತಣ ರಭಸಮೆಂದುಗ್ರಕೋಪದಿಂ ।
ಆ ನೆಗಳೆ ಬಾಯ್ತೆರೆದು ನುಂಗಿತೊಂದಂಘ್ರಿಯನು ।
ಏನೆಂಬೆನಾಕ್ಷಣದೊಳು ॥ 3 ॥

 ರಾಗ  ಅಭೇರಿ 

ಒತ್ತಿ ಹಿಡಿದೆಳೆಯುತಿರೆ ಎತ್ತಣದಿದೇನೆನುತ ।
ಮತ್ತಗಜರಾಜ ಅವಡೊತ್ತಿ ಘೀಳಿಡುತಲಿ ಎಳೆ - ।
ದೊತ್ತಿ ದಂಡೆಗೆ ತರಲು ಮತ್ತೆ ನಡುಮಡುವಿನೊಳ ।
ಗೆಳೆದೆತ್ತುದಾ ನೆಗಳೆ ।
ಇತ್ತಂಡವಿತ್ತು ಕಾದುತ್ತ ಸಾವಿರ ವರುಷ ।
ವಿಸ್ತರಿಸಿತೇನೆಂಬೆ ಮತ್ತಾಗಜೇಂದ್ರಗೆ ।
ಸತ್ವ ತಗ್ಗಿತು ತನ್ನ ಚಿತ್ತದಲೆ ಧ್ಯಾನಿಸುತ ।
ಮತ್ತಾರು ತನಗೆನುತಲಿ ॥ 4 ॥

 ರಾಗ  ಸಿಂಧುಭೈರವಿ 

ಬಂದುದಾ ಸಮಯದಲಿ ಹಿಂದೆ ಮಾಡಿದ ಪುಣ್ಯ - ।
ದಿಂದ ದಿವ್ಯಜ್ಞಾನ ಕಣ್ದೆರೆದು ಕೈಮುಗಿದು ।
ವಂದಿಸುತ ಮನದೊಳರವಿಂದನಾಭಾಚ್ಯುತ ಮು -।
ಕುಂದ ಮುನಿವೃಂದವಂದ್ಯ ।
ಇಂದಿರಾರಮಣ ಗೋವಿಂದ ಕೇಶವ ಭಕ್ತ - ।
ಬಂಧು ಕರುಣಾಸಿಂಧು ತಂದೆ ನೀ ಸಲಹೆನ್ನ ।
ಬಂದು ಸಿಲುಕಿದೆನು ಬಲುದಂದುಗದ ಮಾಯಾಪ್ರ - । ಬಂಧದಿಂ ನೆಗಳೆಯಿಂದ ॥ 5 ॥

 ರಾಗ  ಕಲಾವತಿ 

ಪರಮಾತ್ಮ ಪರಿಪೂರ್ಣ ಪರಮೇಶ ಪರತತ್ವ ।
ಪರತರ ಪರಂಜ್ಯೋತಿ ಪರಮಪಾವನಮೂರ್ತಿ ।
ಉರುತರ ಪರಬ್ರಹ್ಮ ಆನಂದ ಪರಮೇಷ್ಠಿ ।
ಪರಾತ್ಪರ ಪರಮಪುರುಷ ।
ನಿರುಪಮ ನಿಜಾನಂದ ನಿರ್ಭಯ ನಿರಾವರಣ ।
ನಿರವಧಿಕ ನಿರ್ಗುಣ ನಿರಂಜನ ನಿರಾಧಾರ ।
ನಿರವದ್ಯ ನಿಸ್ಸಂಗ ನಿಶ್ಚಿಂತ್ಯ ನಿತ್ಯನೆ ।
ನೋಯಿಸದೆ ಸಲಹೆನ್ನ ಹರಿಯೇ ॥ 6 ॥

 ರಾಗ  ಬಿಲಹರಿ 

ಇಂತೆನುತ ಮೂರ್ಛೆಯಲಿ ಕಂಪಿತಕಂಠಧ್ವನಿಯೊ - ।
ಳಂತರಾತ್ಮಕನ ನೆನೆಯುತ್ತ ಅಳುತಿರಲತ್ತ - ।
ನಂತಮಹಿಮನು ಕೇಳಿ ಕರುಣದಿಂದಾಕ್ಷಣಾ ।ನಂತಶಯನದಿಂದೆದ್ದನು ।
ಸಂತಸದಿ ಸಿರಿಸಹಿತ ಗರುಡವಾಹನನಾಗಿ ।
ಚಿಂತೆ ಬೇಡೇಳೆನುತ ಅಭಯಹಸ್ತವನಿತ್ತೇ - ।
ಕಾಂತಭಕ್ತನ ಬಳಿಗೆ ಬಂದೆರಡು ಕೈಗಳಿಂ ।
ದಂತಿರಾಜನನು ನೆಗಹಿದ ॥ 7 ॥

 ರಾಗ  ಹಿಂದೋಳ 

ನೆಗಳೆಬಾಯನು ಚಕ್ರದಲಿ ಸೀಳಿ ಕರಿವರನ ।
ಉಗುವ ಕರುಣದಲಿ ಮೈದಡಹಲ್ಕೆ ಗಜಜನ್ಮ ।
ತೆಗೆದುದಾಕ್ಷಣದಿ ಮಣಿಮಕರಕುಂಡಲದಿಂದ ।
ಮಿಗೆ ಶೋಭಿಸುತಲೆಸೆದನು ।
ವಿಗಡ ದೇವಲಋಷಿಯ ಶಾಪದಲಿ ಬಿದ್ದಿಳೆಗೆ ।
ಮಿಗೆ ನಕ್ರನಾಗಿ ಹೂಹೂ ಎಂಬ ಗಂಧರ್ವ ।
ನಗಧರನ ಕಂಡು ನಿಜಗತಿಗೈದುದಮರರೊಳ್ - ।
ಮಿಗೆ ಮೆರೆದನೋಲೈಸುತ ॥ 8 ॥

 ರಾಗ  ಆರಭಿ 

ಮಣಿಮಯ ಕಿರೀಟಕುಂಡಲ ಹಾರಕೌಸ್ತುಭದಿ ।
ಮಿನುಗುತಿಹ ವೈಜಯಂತಿ ಭೂಷಣಾವಳಿಯ ।
ಫಣೆಯ ಕಸ್ತೂರಿತಿಲಕ ನಾಮದಿಂದೆಸೆವುತಿಹ ।
ವರಶಂಖಚಕ್ರದಿಂದ ॥
ಝಣಝಣಿತ ನೂಪುರದ ದಂತಪಂಕ್ತಿಯ ಕೃಪೇ - ।
ಕ್ಷಣದ ಸಿರಿಮೊಗದ ಪೀತಾಂಬರಾಲಂಕೃತದಿ ।
ಮಣಿದು ಜಯಜಯವೆಂಬ ಸುರಸಿದ್ಧಸಾಧ್ಯ ಸಂ - ।
ದಣಿಯೊಳಗೆ ಹರಿ ಮೆರೆದನು ॥ 9 ॥

 ರಾಗ  ಸಾವೇರಿ 

ಹರಿಸ್ತುತಿಯಗೈದಂಘ್ರಿಗೆರಗಲಾ ಭೂಪನಾ - ।
ದರದಿಂದ ಸತ್ಕರಿಸಿ ಶರಧಿಶ್ವೇತದ್ವೀಪ ।
ಗಿರಿ ಶೃಂಗ ವಾರಾಹಿ ತರು ಶೇಷ ವಾಲ್ಮೀಕಿಮುನಿ ।
ಧರಣಿ ಧ್ರುವ ಲಕ್ಷ್ಮಿಯು ।
ಹರ ಗಿರಿಜೆ ವಿಧಿ ವಾಣಿ ನಾರದ ಪ್ರಹ್ಲಾದ ।
ಗರುಡ ಗೋ ವಿಪ್ರ ಋಷಿ ಗಂಗಾರ್ಕ ಚಂದ್ರಾಗ್ನಿ ।
ಸಿರಿವತ್ಸ ಶಂಖಚಕ್ರಾದ್ಯವತಾರಗಳ ।
ಸ್ಮರಿಸುವವರ ಕಾಯ್ವೆನೆಂದಾ ॥ 10 ॥

 ರಾಗ  ಕೇದಾರಗೌಳ 

ಆವನಿದನುದಯಕಾಲದಲೆದ್ದು ನಿಜಭಕ್ತಿ - ।
ಭಾವಶುದ್ಧಿಗಳಿಂದ ಪೇಳಿ ಕೇಳ್ವರೋ ಅವರ ।
ಸಾವಿರಜನ್ಮಗಳ ಸಂಚಿಘರಾಶಿಗಳು ।
ತಾವೇ ಹತವಾದವೆಂದು ।
ಶ್ರೀವಾಸುದೇವನಾಜ್ಞಾಪಿಸಿ ಗಜೇಂದ್ರಸಹಿ - ।
ತಾವಿಹಂಗಾಧಿಪನೇರಿ ವೈಕುಂಠಕ್ಕೆ ।
ದೇವ ಬಿಜಯಂಗೈದ ಪುರಂದರವಿಟ್ಠಲ ನ ।
ಸೇವಕರಿಗಿದು ಚಿತ್ರಮೆ ॥ 11 ॥
***********


ಪಿಬತ ಭಾಗವತಂ ರಸಮಾಲಯಂ|
✍ಗಜೇಂದ್ರನು ಸರೋವರದಲ್ಲಿ ಮೊಸಳೆಯ ಬಾಯಿಗೆ ಸಿಕ್ಕಿ ಬಲು ಬಳಲಿದ.ಸಾವಿರ ವರುಷಗಳ ಕಾಲ ಅವರಿಬ್ಬರ ನಡುವೆ ಜಗಳ ನಡೆದಿದೆ.
ಮೊಸಳೆ ತಾನು ಹಿಡಿದ ಪಟ್ಟನ್ನು ಬಿಡುತ್ತಾ ಇಲ್ಲ.ಇತ್ತ ಬಲಶಾಲಿಯಾದ ಗಜರಾಜನು ಅದರಿಂದ ಬಿಡಿಸಿಕೊಂಡು ಹೋಗುವ ಪ್ರಯತ್ನ ಸಹ ಮಾಡುತ್ತಾ ಇದ್ದಾನೆ.
ಅವನ ಜೊತೆಯಲ್ಲಿ ಬಂದ ಅವನ ಬಂಧು ಬಾಧವರು,ಹೆಂಡತಿ ,ಮಕ್ಕಳು ಸಹ ಅದರ ಕೈಯಿಂದ ಬಿಡಿಸಲು ಸಹ ಸಾಧ್ಯ ವಾಗಲಿಲ್ಲ.
ಕೊನೆಯಲ್ಲಿ ಭಗವಂತನ ಹೊರತುಪಡಿಸಿ ಇನ್ನಾರು ಕಾಯುವರಿಲ್ಲ ಎನ್ನುವ ಜ್ಞಾನ ಅವನಿಗೆ ಬರುತ್ತದೆ.
ತಕ್ಷಣ  ಸರೋವರದಲ್ಲಿ ಇದ್ದ ಒಂದು ಕಮಲವನ್ನೆ ಭಗವಂತ ನಿಗೆ ಸಮರ್ಪಣೆ ಮಾಡಿದ.
"ನಾರಾಯಣಾಖಿಲಗುರೋ ಭಗವಾನ್ ನಮಸ್ತೇ" ಎಂದು ಮೊರೆ ಇಟ್ಟ.
ತಕ್ಷಣ ವೈಕುಂಠದಿಂದ ಭಗವಂತನ ಆಗಮನ .ತನ್ನ ಸುದರ್ಶನ ಚಕ್ರದಿಂದ ಮೊಸಳೆಯ ಬಾಯಿಯಲ್ಲಿ ಬಿದ್ದು ಒದ್ದಾಡುವ ಗಜೇಂದ್ರ ನ ರಕ್ಷಣಾ ಮಾಡುತ್ತಾನೆ.
ಮೊದಲಿಗೆ ಉದ್ದಾರ ಮಾಡಿದ್ದು ಮೊಸಳೆಗೆ.
ನಂತರದಲ್ಲಿ ಗಜೇಂದ್ರ ನಿಗೆ.
ಇದರ ಹಿನ್ನೆಲೆ ಇಷ್ಟೇ.
ನಾವು ಭಗವಂತನ ಭಕ್ತರು ಯಾರು ಇದ್ದಾರೋ ಅವರ ಪಾದವನ್ನು ಗಟ್ಟಿಯಾಗಿ ಹಿಡಿದಾಗ,ಅವರಲ್ಲಿ ಶರಣು ಹೋದಾಗ, ತನ್ನ ಭಕ್ತರ ಪಾದ ಹಿಡಿಯುವ ನಮಗೆ ರಕ್ಷಣಾ ಮಾಡುವನು ಎನ್ನುವದು ಇಲ್ಲಿ ಭಗವಂತ ಸೂಚನೆ ಕೊಟ್ಟ.
"ಈ ಸಂಸಾರವೆಂಬ ಸಮುದ್ರದಲ್ಲಿ ಗಜರಾಜರಂತೆ ಜೀವಿಯು ಕಾಮ ಕ್ರೋಧಾದಿಗಳೆಂಬ ಮೊಸಳೆಯ ಬಾಯಿಗೆ ಸಿಕ್ಕ ಜೀವಿಯು ತನ್ನ ಹೃದಯಕಮಲವೆಂಬ ಹೂ ಅಂದರೆ ಮನಸ್ಸು ಅವನಿಗೆ ಅರ್ಪಣೆ ಮಾಡಿದರೆ ಅವನ ಉದ್ದಾರ ಖಚಿತವಾಗಿ ಆಗುತ್ತದೆ ಎಂಬುದು ಇಲ್ಲಿ ಸೂಚನೆ. 
ಮತ್ತು 
ಗಜೇಂದ್ರ ಮೋಕ್ಷ ವನ್ನು ಪ್ರಾತಃ ಕಾಲದಲ್ಲಿ ಯಾರು ಪಠಣೆಮಾಡುವರೋ ಅವರಿಗೆ ಅಂತ್ಯಕಾಲದಲ್ಲಿ ತನ್ನ ನಾಮಸ್ಮರಣೆಯನ್ನು ಅವರ ಸ್ಮೃತಿಯಲ್ಲಿ ಬರುವಂತೆ ಮಾಡುವೆ ಎಂದು ವಚನವನ್ನು ಸಹ ನೀಡಿದ.
ಹಾಗಾಗಿ ನಿತ್ಯ ಪ್ರಾತಃ ಕಾಲದಲ್ಲಿ ಗಜೇಂದ್ರ ಮೋಕ್ಷ ವು ಪಠಣೆ ಮಾಡಲು ಯುಕ್ತ ವಾಗಿದೆ.
ಸಂಸ್ಕೃತ ಬಾರದವರಿಗೆ ಶ್ರೀ ವಾದಿರಾಜತೀರ್ಥ ಗುರುಗಳು ಮತ್ತು ಅನೇಕ ಹರಿದಾಸರು ರಚಿಸಿದ ಗಜೇಂದ್ರ ಮೋಕ್ಷ ಪಾರಾಯಣ ಮಾಡಬಹುದು.
ಉದಯಕಾಲದಲ್ಲಿ ಗಜೇಂದ್ರ ಮೋಕ್ಷ ಕತೆ ನಿತ್ಯ ಕೇಳುವ ಭಾಗ್ಯ,ಮತ್ತು ಸಮಯವನ್ನು ಕಾಲ ನಿಯಾಮಕನಾದ ಆ ಶ್ರೀ ಹರಿಯು  ನಮಗೆಲ್ಲಾ ನಿತ್ಯ ದಲ್ಲಿ ಕೊಡಲಿ ಎಂದು ಪ್ರಾರ್ಥನೆ ಮಾಡುತ್ತಾ..
🙏ಶ್ರೀ ಕೃಷ್ಣಾರ್ಪಣಮಸ್ತು🙏
ಮರಣವನೊಲ್ಲೆ ಜನನವ ನೊಲ್ಲೆ|ದುರಿತ ಸಂಸಾರ ಕೋಟಲೆಯ ನಾನೊಲ್ಲೆ|
ಕರುಣದಿ ಕರುಗಳ ಕಾಯ್ದ ಗೋವಳ ನಿನ್ನ|ಚರಣ ಕಮಲದ ಸ್ಮರಣೆಯೊಳಿರಿಸೆನ್ನ|
🙏ಶ್ರೀ ಕಪಿಲಾಯನಮಃ🙏
******

ನಾರಾಯಣಾಯ ನಮೋ ನಾಗೇಂದ್ರಶಯನಾಯ
ನಾರದಾದ್ಯಖಿಳ ಮುನಿನಮಿತ ಚರಣಾಂಭೋಜ
ಸಾರಿದರೆ ಪೊರೆವ ಕಂಸಾರಿ ರಕ್ಷಿಪುದಿಂದು ಕಾರುಣ್ಯದಿಂದ ಒಲಿದು ||pa||

ಪಾಂಡ್ಯದೇಶದೊಳು ಇಂದ್ರದ್ಯುಮ್ನನೆಂಬ ಭೂ
ಮಂಡಲಾಧಿಪನು ವೈರಾಗ್ಯದಲಿ ಹರಿಪಾದ
ಪುಂಡರೀಕನ ಧ್ಯಾನದಿಂ ಮಹಾತಪದೊಳಿರೆ ಚಂಡತಾಪಸ ಅಗಸ್ತ್ಯಹಿಂಡು ಶಿಷ್ಯರವೆರಸಿ ಬರಲು ಸತ್ಕರಿಸದಿರೆ
ಕಂಡು ಗಜಯೋನಿಯಲಿ ಜನಿಸು ಹೋಗೆನುತ ಉದ್ದಂಡ ಶಾಪವನಿತ್ತು
ಮುನಿ ಪೋದನಾಕ್ಷಣದಿ ಶುಂಡಾಲನಾದನರಸ ||1||

ಕ್ಷೀರಸಾಗರತಡಿಯ ಐದು ಯೋಜನದ
ವಿಸ್ತಾರದಲಿ ವರತ್ರಿಕೂಟಾದ್ರಿ ಶೃಂಗತ್ರಯದ ರಾರಾಜಿಸುತಲಿಪ್ಪ
ರಜತ ತಾಮ್ರಧ್ವಜದ ಮೇರುಸಮ ಗಾಂಭೀರ್ಯದಿ
ಪಾರಿಜಾತಾಂಭೋಜ ತುಳಸಿ ಮಲ್ಲಿಗೆ ಜಾಜಿ
ಸೌರಭದೊಳಶ್ವತ್ಥಪೂಗ ಪುನ್ನಾಗ
ಜಂಬೀರಾದಿ ತರುಗುಲ್ಮ ಖಗ ಮೃಗಗಳೆಸೆವಲ್ಲಿ ವಾರಣೇಂದ್ರನು
ಮೆರೆದನು ||2||

ಆನೆ ಹೆಣ್ಣಾನೆ ಮರಿಯಾನೆಗಳ ಸಹಿತ ಆ
ಕಾನನದಿ ನಲಿಯುತ್ತ ಬೇಸಿಗೆಯ ಬಿಸಿಲಿನಲಿ
ತಾ ನೀರಡಿಸಿ ಬಂದುದೊಂದು ಸರಸಿಗೆ ಸಲಿಲಪಾನಾಭಿಲಾಷೆಯಿಂದ
ನಾನಾ ಪ್ರಕಾರದಲಿ ಜಲಕ್ರೀಡೆಯಾಡುತಿರೆ
ಏನಿದೆತ್ತಣ ರಭಸನೆಂದುಗ್ರಕೋಪದಿಂದಾ
ನೆಗಳು ಬಾಯ್ತೆರೆದು ನುಂಗಿಕೊಂಡಂಘ್ರಿಯನು ಏನೆಂಬೆನಾಕ್ಷಣದೊಳು ||3||

ಒತ್ತಿ ಹಿಡಿದೆಳೆಯುತಿರೆ ಎತ್ತಣದಿದೇನೆನುತ
ಮತ್ತಗಜರಾಜ ಅವುಡೊತ್ತಿ ಘೀಳಿಡುತಲೆಳದೊತ್ತಿ
ತಂದುದು ದಡಕೆ ಮತ್ತೆ
ನಡುಮಡುವಿನೊಳಗೆತ್ತೆಳೆದುದಾ ನೆಗಳವು
ಇತ್ತಂಡವಿತ್ತು ಕಾದಿತ್ತು ಸಾವಿರ ವರುಷ
ವಿಸ್ತರಿಸಿತೇನೆಂಬೆ ಮತ್ತಾ ಗಜೇಂದ್ರಂಗೆ
ಸತ್ವ ತಗ್ಗಿತು ತನ್ನ ಚಿತ್ತದೊಳು ಧ್ಯಾನಿಸುತ ಮತ್ತಾರು ಗತಿಯೆನುತಲಿ||4||

ಬಂದುದಾ ಸಮಯದಲಿ ಹಿಂದೆ ಮಾಡಿದ ಸುಕೃತದಿಂದ
ದಿವ್ಯಜ್ಞಾನ ಕಣ್ದೆರದು ಕೈಮುಗಿದು
ವಂದಿಸಿದ ಮನದೊಳರವಿಂದನಾಭಾಚ್ಯುತ ಮುಕುಂದ ಮುನಿವೃಂದವಂದ್ಯ
ಇಂದಿರಾರಮಣ ಗೋವಿಂದ
ಕೇಶವ ಭಕ್ತ
ಬಂಧು ಕರುಣಾಸಿಂಧು ತಂದೆ ನೀ ಸಲಹೆನ್ನ
ಬಂದು ಸಿಲುಕಿದೆನು ಬಲು ದಂದುಗದ ಮಾಯಾ ಪ್ರಬಂಧದಿಂ ನೆಗಳಿನಿಂದ.||5||

ಪರಮಾತ್ಮ ಪರಿಪೂರ್ಣ ಪರಮೇಶ ಪರತತ್ತ್ವ
ಪರತರ ಪರಂಜ್ಯೋತಿ ಪರಮಪಾವನ ಮೂರ್ತಿ
ಉರುತರಾ ಪರಬ್ರಹ್ಮ ಆನಂದ ಪರಮೇಷ್ಠಿ ಪರಾತ್ಪರ ಪರಮಪುರುಷ
ನಿರುಪಮ ನಿಜಾನಂದ ನಿರ್ಭಯ ನಿರಾವರಣ
ನಿರವಧಿಕ ನಿರ್ಗುಣ ನಿರಂಜನ ನಿರಾಧಾರ
ನಿರವೇದ್ಯ ನಿಸ್ಸಂಗ ನಿಶ್ಚಿಂತ್ಯ ನಿತ್ಯನೇ ನೋಯಿಸದೆ
ಸಲಹೆನ್ನನು ||6||

ಇಂತೆನುತ ಮೂರ್ಛೆಯಲಿ ಗುಪಿತ ಕಂಠಧ್ವನಿಯೊಳಂತರಾತ್ಮಕನ
ನೆನೆಯುತ್ತಳುತ್ತಿರಲಿತ್ತನಂತ
ಮಹಿಮನು ಕೇಳಿ ಕರುಣದಿಂದಾಕ್ಷಣಾನಂತಶಯನದಲೆದ್ದನು
ಸಂತಪಿಸಿ ಸಿರಿಮುಡಿಯು ಗರುಡವಾಹನನಾಗಿ
ಚಿಂತೆ ಬೇಡೇಳೆನುತ ಅಭಯಹಸ್ತವನಿತ್ತೇ
ಕಾಂತ ಭಕ್ತನ ಬಳಿಗೆ ಬಂದೆರಡು
ಕೈಯಿಂದ ದಂತಿವರನನುನೆಗೆಹಿದ||7||

ನೆಗಳ ಬಾಯನು ಚಕ್ರದಲಿ ಸೀಳಿ ಕರಿವರನ
ಉಗುವ ಕರುಣದಲಿ ಮೈದಡಹಲ್ಕೆ ಗಜ ಜನ್ಮ ತೆಗುದುದಾಕ್ಷಣದಿ ಮಣಿಮಕರಕುಂಡಲದಿಂದ ಮಿಗೆ ಶೋಭಿಸುತಲೆಸೆದನು
ವಿಗಡ ದೇವಲ ಋಷಿಯ ಶಾಪದಲಿ ಬಿದ್ದಿಳೆಗೆ ಮಿಗೆ ನಕ್ರನಾಗಿ ಹೂಹೂ ಎಂಬ ಗಂಧರ್ವ
ಅಘಹರನ ಕಂಡು ನಿಜಗತಿಗೈದುದಮರರೋಳ್ ಮಿಗೆ
ಮೆರೆದುದೋಲೈಸುತ||8||

ಮಣಿಮಯ ಕಿರೀಟಕುಂಡಲ ಹಾರಕೌಸ್ತುಭದ
ಮಿನುಗುತಿಹ ವೈಜಯಂತಿಯ ಛೂಷಣಾಂಗದ
ಫಣೆಯ ಕಸ್ತೂರಿ ತಿಲಕ ನಾಮದಿಂದೆಸೆವುತಿಹ ವರ ಶಂಖ ಚಕ್ರದಿಂದ
ಝಣಿಝಣಿತ ನೂಪುರದ ದಂತ ಪಂಕ್ತಿಯ ಕೃಪೇ
ಕ್ಷಣದ ಸಿರಿಮೊಗದ ಪೀತಾಂಬರಾಲಂಕೃತ್ಯದ
ಮಣಿದಾ ಜಯ ಜಯವೆಂಬ ಸುರಸಿದ್ಧ ಸಾಧ್ಯ ಸಂದಣಿಯೊಳಗೆ ಹರಿ ಮೆರೆದನು ||9||

ಹರಿಸ್ತುತಿಯ ಗೈದಂಘ್ರಿಗೆರಗಲಾ ಭೂಪನಾದರದಿಂದ
ಸತ್ಕರಿಸಿ ಶರಧಿ ಶ್ವೇತದೀಪ
ಗಿರಿಶೃಂಗ ವಾರಾಶಿ ತರುಶೇಷ ವಾಲ್ಮೀಕಿ ಮುನಿ ಧರಣಿ ಧ್ರುವ ಲಕ್ಷ್ಮಿಯು
ಹರ ಗಿರಿಜೆ ವಿಧಿ ವಾಣಿ ನಾರದ ಪ್ರಹಲ್ಲಾದ
ಗರುಡ ಗೋ ವಿಪ್ರ ಋಷಿ ಗಂಗಾರ್ಕ ಚಂದ್ರಾಗ್ನಿ
ಸಿರಿವತ್ಸ ಶಂಖ ಚಕ್ರಾದಿಯವತಾರಗಳ ಸ್ಮರಿಸುವರ ಕಾಯ್ವೆನೆಂದ||10||

ಆವನಿದನುದಯಕಾಲದೊಳೆದ್ದು ನಿಜ ಭಕ್ತಿ
ಭಾವ ಶುದ್ಧಗಳಿಂದ ಪೇಳಿ ಕೇಳುವ ಜನರಘಾವಳಿಯ ಪರಿಹರಿಸಿ ಸುಜ್ಞಾನ ಪದವಿತ್ತು ದೇಹವಸಾನದೊಳಗೆ
ಶ್ರೀ ವಾಸುದೇವನಾಜ್ಞಾಪಿಸಿ ಗಜೇಂದ್ರ ಸಹಿತಾ ವಿಹಂಗಾಧಿಪನನೇರಿ ವೈಕಂಠಕ್ಕೆ
ದೇವ ಬಿಜಯಂಗೈದ ಶ್ರೀಹರಿ
ಪುರಂದರವಿಠಲನು ಸೇವಕರಿಗಿತು ಚಿತ್ತವೆ  ||11||
***

ಗಜೇಂದ್ರ ಮೋಕ್ಷದ ಪೌರಾಣಿಕ ಕಥೆ

ಹಿಂದಿನ ಜನ್ಮದಲ್ಲಿ ಗಜೇಂದ್ರನು ಪಾಂಡ್ಯವಂಶದಲ್ಲಿ ದ್ರಾವಿಡ ದೇಶದ ರಾಜನಾಗಿದ್ದನು. ಅವನಿಗೆ "ಇಂದ್ರದ್ಯುಮ್ನ" ಎಂಬ ಹೆಸರಿದ್ದು ಭಗವಂತನ ಶ್ರೇಷ್ಠ ಉಪಾಸಕನಾಗಿದ್ದನು. ಮಹಾರಾಜನು ತನ್ನ ರಾಜ್ಯ ವೈಭವಗಳನ್ನು ತ್ಯಜಿಸಿ ತಪಸ್ವಿಯಾದನು. ಅವನ ಆಶ್ರಮವು ಮಲಯ ಪರ್ವತದಲ್ಲಿತ್ತು. ಒಂದು ದಿನ ಅವನು ಸ್ನಾನ ಮತ್ತು ಬೆಳಗಿನ ನಿತ್ಯ ಆಚರಣೆಗಳನ್ನು ಮುಗಿಸಿ ಪ್ರಾರ್ಥನೆಗಾಗಿ ಕುಳಿತನು. ಭಗವಂತನ ಮೇಲೆ ತನ್ನ ಮನಸ್ಸನ್ನು ಕೇಂದ್ರೀಕರಿಸಿ, ಏಕಾಗ್ರಚಿತ್ತದಿಂದ ಭಗವಂತನ ಆರಾಧನೆಯಲ್ಲಿ ತೊಡಗಿದನು.

ಅದೇ ವೇಳೆಯಲ್ಲಿ ದೈವಸಂಕಲ್ಪದಿಂದ ಪರಮ ತಪಸ್ವಿ ಅಗಸ್ತ್ಯ ಮುನಿ ತನ್ನ ಶಿಷ್ಯರೊಂದಿಗೆ ಅದೇ ಸ್ಥಳಕ್ಕೆ ಬರುತ್ತಾರೆ. ಇಂದ್ರದ್ಯುಮ್ನನು ತಪಸ್ವಿ ಅಗಸ್ಥ್ಯ ಮಹರ್ಷಿ ಮತ್ತು ಆತನ ಶಿಷ್ಯರಿಗೆ ಅತಿಥಿಸೇವೆಗಳನ್ನು ಮಾಡದೇ ಏಕಾಂತದಲ್ಲಿ, ಮೌನವಾಗಿ ಹಲವು ಸಮಯ ಧ್ಯಾನನಿರತನಾಗಿರುವುದನ್ನು ಕಂಡು ಅಗಸ್ತ್ಯ ಮುನಿಗಳು ಕ್ರೋಧಗೊಳ್ಳುತ್ತಾರೆ.

ಈ ಕೋಪದಿಂದ ಅಗಸ್ತ್ಯ ಮಹರ್ಷಿಯು “ಈ ರಾಜನು ತನ್ನ ಹಿರಿಯರು ಮತ್ತು ಗುರುಗಳು ಕಲಿಸಿಕೊಟ್ಟ ವಿದ್ಯೆಗನುಗುಣವಾಗಿ ವರ್ತಿಸದೆ ತನ್ನ ದುರಹಂಕಾರದಿಂದ ಪ್ರಭಾವಿತನಾಗಿ ಸ್ವೇಚ್ಛೆಯಿಂದ ವರ್ತಿಸುತ್ತಿದ್ದಾನೆ. ಬ್ರಾಹ್ಮಣರನ್ನು ಅವಮಾನಿಸಿದ ಕಾರಣ ಅವನಿಗೆ ಘೋರ ಅಜ್ಞಾನಮಯ ಆನೆಯ ಜನ್ಮವು ದೊರೆಯಲಿ” ಎಂದು ಶಾಪವನ್ನು ಕೊಟ್ಟು ಹೋಗುತ್ತಾರೆ.

ಇದು ತನ್ನ ಪ್ರಾರಬ್ಧವೆಂದೇ ಭಾವಿಸಿ ರಾಜರ್ಷಿಯು ಅಗಸ್ತ್ಯರು ನೀಡಿದ ಶಾಪವನ್ನು ಸ್ವೀಕರಿಸಿದನು. ಪ್ರಸ್ತುತ ಸನ್ನಿವೇಶದಲ್ಲಿ ರಾಜನು ಜ್ಞಾನಿಯು ಮತ್ತು ಧಾರ್ಮಿಕನಾಗಿದ್ದನು. ಶಾಪಗ್ರಸ್ತನಾಗಿ ಮುಂದೆ ಆನೆಯ ಜನ್ಮತಾಳಿದಾಗ, ಅವನ ಜೀವನದಲ್ಲಿ ಈ ಜ್ಞಾನದ ಪಾತ್ರ ಪ್ರಮುಖವೆನಿಸುತ್ತದೆ.

ಹೂಹೂ ಮತ್ತು ಮೊಸಳೆಯ ಅವತಾರ

ಋಷಿ ದೇವಲನ ಶಾಪದಿಂದಾಗಿ ಮೊಸಳೆಯ ರೂಪತಾಳಿ ಭಗವಂತನ ಸ್ಪರ್ಶಮಾತ್ರದಿಂದ ತನ್ನ ತೇಜೋಮಯ ನಿಜಸ್ವರೂಪ ಪಡೆದ ಗಂಧರ್ವರಲ್ಲಿ ಉತ್ತಮನೆನಿಸಿರುವನು ಹುಹೂ ಎಂಬುವವನು.

ಕಥೆ

ಒಮ್ಮೆ ಹುಹೂ ತನ್ನ ಪತ್ನಿಯರೊಂದಿಗೆ ಸರೋವರದಲ್ಲಿ ಜಲಕ್ರೀಡೆಯಲ್ಲಿ ಮಗ್ನನಾಗಿದ್ದನು. ಅದೇ ಸಮಯಕ್ಕೆ ಅಲ್ಲಿಗೆ ಸ್ನಾನಕ್ಕಾಗಿ ಬಂದ ಋಷಿ ದೇವಲರನ್ನು ಕಂಡು ಹುಹೂ ಹುಡುಗಾಟಿಕೆಯ ಮನೊಭಾವನೆಯಿಂದ ನೀರಿನೊಳಗಿನಿಂದ ಋಷಿಯ ಕಾಲನ್ನು ಎಳೆದುಬಿಡುವನು. ಇದರಿಂದ ಕ್ರೋಧಗೊಂಡ ಋಷಿ ದೇವಲನು ತಪೋಭಂಗಕ್ಕೆ ಕಾರಣನಾದ ಹುಹೂವಿಗೆ ”ನನ್ನ ಕಾಲನ್ನು ಎಳೆದೆಯಲ್ಲವೆ...? ಇದೋ, ನೀನು ಮೊಸಳೆಯ ಜನ್ಮವೆತ್ತಿ ಜೀವನವಿಡೀ ಕಾಲನ್ನು ಎಳೆಯುತ್ತಲಿರು” ಎಂದು ಶಾಪ ನೀಡುವರು. ಹುಹೂವಿಗೆ ತಾನು ಮಾಡಿದ ತಪ್ಪಿನ ಅರಿವಾಗಿ ಪ್ರಾಯಶ್ಚಿತ್ತ ಮಾರ್ಗವನ್ನು ಬೇಡಿದನು. ದೇವಲ ಋಷಿಯು ಕ್ಷಮೆ ತೋರಿ ಅವನ ಶಾಪ ವಿಮೋಚನೆಯ ವಿಧಾನವನ್ನು ತೋರಿಸುವರು. “ನೀನು ಈ ಸರೋವರದಲ್ಲಿ ಬಹಳ ವರ್ಷ ವಾಸವಾಗಿರುವೆ. ಒಮ್ಮೆ ಆನೆಗಳ ಹಿಂಡಿನ ಒಡೆಯನು ತನ್ನ ಸಹಚರರೊಂದಿಗೆ ಇಲ್ಲಿಗೆ ಬರುವನು. ಆ ಕ್ಷಣದಿ ನೀನು ಅವನ ಕಾಲನ್ನು ಹಿಡಿಯಬೇಕು ಮತ್ತು ಯಾವುದೇ ಕಾರಣಕ್ಕೂ ಕಾಲನ್ನು ಬಿಡಬಾರದು. ಆಗ ಸಾಕ್ಷಾತ್ ಶ್ರೀಮನ್ನಾರಾಯಣನೇ ಬಂದು ನಿನ್ನನ್ನು ಶಾಪಮುಕ್ತನಾಗಿ ಮಾಡುವನು”

ಗಂಧರ್ವನಾದ ಹೂಹೂ ಋಷಿಗೆ ಪ್ರದಕ್ಷಿಣಾ ರೂಪದಿ ನಮಸ್ಕಾರಗಳನ್ನು ಅರ್ಪಿಸುತ್ತಾ ಮೊಸಳೆಯ ರೂಪ ತಾಳಿದನು.

ಮೋಕ್ಷ

ಕ್ಷೀರಸಾಗರದ ಮಧ್ಯದಲ್ಲಿ ಪ್ರಕೃತಿ ಸೌಂದರ್ಯದ ಗಣಿಯಂತೆ ತ್ರಿಕೂಟ ಪರ್ವತವಿತ್ತು. ಆ ಪರ್ವತದಲ್ಲಿ ಮಂದಾರ, ಪಾರಿಜಾತ, ಪಾಟಲ, ಅಶೋಕ, ಚಂಪಕ ಮುಂತಾದ ಫಲಪುಷ್ಪ ಸಮೃದ್ಧವಾದ ವೃಕ್ಷಗಳಿಂದ ತುಂಬಿದ್ದ "ಋತುಮಾನ" ಎಂಬ ದ್ಯಾನವೊಂದಿತ್ತು. ವರುಣದೇವನ ಆಸ್ತಿಯಾಗಿದ್ದ ಈ ಉದ್ಯಾನದೊಳಗೆ ಬೃಹತ್ ಸ್ಫಟಿಕ ಜಲ ಸರೋವರವೊಂದರಲ್ಲಿ ಬಗೆಬಗೆಯ ನೀಲ, ಶ್ವೇತ, ರಕ್ತವರ್ಣದ ಕಮಲಪುಷ್ಪಗಳು ರಾರಾಜಿಸುತ್ತಿದ್ದವು.

ಆ ಪರ್ವತದಲ್ಲಿ ಬೃಹದಾಕಾರದ ಆನೆಯೊಂದು ತನ್ನ ಪರಿವಾರದೊಂದಿಗೆ ವಾಸವಾಗಿತ್ತು. "ಇಂದ್ರದ್ಯುಮ್ನನೇ" ಆ ಆನೆಯ ರೂಪವಾಗಿದ್ದನು. ಸಿಂಹ, ಹುಲಿ, ಕಾಡುಹಂದಿ ಸೇರಿದಂತೆ ಇತರೆ ಎಲ್ಲಾ ಪ್ರಾಣಿಗಳು ಹೆದರಿ ಪಲಾಯನ ಮಾಡುವಷ್ಟು ಪ್ರಚಂಡವಾದ ಬಲಶಾಲಿಯಾದ ಪ್ರಾಣಿಯಾಗಿತ್ತು.

ಗ್ರೀಷ್ಮ ಕಾಲದಲ್ಲಿ ಒಮ್ಮೆ ಬಹುದೂರ ಕ್ರಮಿಸಿ ಬಂದ ಆನೆ ಹಿಂಡು ದಾಹದಿಂದ ಬಳಲುತ್ತಿದ್ದಾಗ ಗಜರಾಜ ಪುಷ್ಪಗಂಧವನ್ನು ಆಘ್ರಾಣಿಸಿ ಅನತಿದೂರದಲ್ಲಿ ಸರೋವರವಿದೆಯೆಂದು ತಿಳಿದನು. ಸಪರಿವಾರನಾಗಿ ಗಂಧದ ಬೆನ್ನತ್ತಿ ಕಮಲದ ಹೂಗಳು ತುಂಬಿದ್ದ ಬಹುದೊಡ್ಡ  ಸರೋವರವನ್ನು ತಲುಪಿದನು.

ಸುದೀರ್ಘ ಪ್ರಯಾಣದಿಂದಾಗಿ ದಣಿದು ಹಸಿವಿನಿಂದ ಬಳಲಿದ್ದ ಆನೆಗಳು ಉತ್ಸಾಹದಿಂದ ಸರೋವರವನ್ನು ಪ್ರವೇಶಿಸಿ ನೀರು ಕುಡಿದವು. ದಾಹ ನೀಗಿದ ನಂತರವೂ ಹೊರಬರಲು ಇಚ್ಛಿಸದೆ ಸಾವಕಾಶವಾಗಿ ಈಜತೊಡಗಿದವು. ಕಾಲದ ಗಮನವಿಲ್ಲದೆ ಮುಂಬರುವ ವಿಪತ್ತಿನ ಕಲ್ಪನೆಯಿಲ್ಲದೆ ಗಜರಾಜನು ತನ್ನ ಒಡನಾಡಿಗಳ ಸಂಗದಲ್ಲಿ ಆನಂದಿಸುತ್ತಿದ್ದನು.

ವಿಧಿಲಿಖಿತದಂತೆ ಅದೇ ಸರೋವರದಲ್ಲಿದ್ದ ಮೊಸಳೆಯೊಂದು ಆ ಮಹಾಗಜದ ಕಾಲನ್ನು ತನ್ನ ಬಲಿಷ್ಠ ದವಡೆಯಿಂದ ಸೆಳೆಯಿತು. ಎಷ್ಟು ಪ್ರಯತ್ನಿಸಿದರೂ ಬಂಧನದಿಂದ ಪಾರಾಗುವುದು ಅಸಾಧ್ಯವಾಯಿತು. ಬಹಳ ಕಾಲ ಹೋರಾಡಿದ ನಂತರ ತನ್ನ ಶ್ರಮವೆಲ್ಲವೂ ವ್ಯರ್ಥ ಎಂಬ ಅರಿವು ಮೂಡಿತು ಮಾತ್ರವಲ್ಲ, ಅದರ ಅಹಂಕಾರ ನುಚ್ಚುನೂರಾಗಿ ಹೋಯಿತು.

ಗಜೇಂದ್ರ ಮೋಕ್ಷ

"ನನ್ನನ್ನೇ ನಾನು ರಕ್ಷಿಸಿಕೊಳ್ಳಲು ಸಾಧ್ಯವಿಲ್ಲದ ಈ ಪರಿಸ್ಥಿತಿಯಲ್ಲಿ ನನ್ನ ಪರಿವಾರದವರು ನನ್ನನ್ನು ಹೇಗೆ ರಕ್ಷಿಸಿಯಾರು..? ಈ ವಿಪತ್ತಿನಿಂದ ನನ್ನನ್ನು ಪಾರುಮಾಡಲು ಯಾರಿಗೂ ಸಾಧ್ಯವಿಲ್ಲ. ನನ್ನ ಮುಂದಿರುವುದು ಈಗ ಒಂದೇ ದಾರಿ. ಯಾವ ಪರಮಾತ್ಮನಿಗೆ ನಾವುಗಳು ಸಂಪೂರ್ಣವಾಗಿ ಶರಣಾಗುತ್ತೇವೆಯೋ ಯಮನೂ ಕೂಡಾ ಆತನಿಂದ ದೂರವಿರುತ್ತಾನೆ. ಅದರಂತೆ ಆ ಶ್ರೀಮನ್ನಾರಾಯಣನನ್ನು ಭಕ್ತಿಪೂರ್ವಕವಾಗಿ ತದೇಕಚಿತ್ತದಿಂದ ನಾನು ಪ್ರಾರ್ಥಿಸುತ್ತೇನೆ"

ಹೀಗೆ ದೃಢಚಿತ್ತನಾಗಿ ಆ ಮಹಾಗಜೇಂದ್ರನು ಭಗವಂತನನ್ನು ಸ್ತುತಿಸಿದ ಸ್ತೋತ್ರವೇ “ಗಜೇಂದ್ರಮೋಕ್ಷ ಸ್ತೋತ್ರ”

* ನೀನೇ ಸನಾತನನು. 
* ನೀನೇ ಪುರುಷನು. 
* ನೀನೇ ಪುರುಷನಿಂದಾದ ಪ್ರಕೃತಿಯು.
* ಜ್ಯೋತಿಯ ಆಕರಗಳಿಗೆ ಅತೀತನಾಗಿರುವ ಜ್ಯೋತಿಯು.
* ಪ್ರಳಯದ ಅಂತ್ಯದಲ್ಲುಳಿಯುವ ತಾಮಸದ ಕಾರ್ಗಡಲ  ಅಂಚಿನಲ್ಲಿಹನು‌. 
* ಪುರಾತನದಿಂದ ಉದಯಿಸುವ ನವಸೃಷ್ಟಿಗೆ ಜೀವದಾತನು.
* ಜನ್ಮ ಕರ್ಮಾದಿಗಳಿಂದ ಮುಕ್ತನು ನೀನು. 
* ಗುಣ – ನಾಮ ಪ್ರತ್ಯೇಕತೆಯಿರದವನು.
* ಮನೋಬುದ್ಧ್ಯಹಂಕಾರ ಚಿತ್ತಾತೀತನು.
* ಜ್ಞಾನಿಗಳು ಅರಿವಿಗೆ ನಿಲುಕದ ನಿನ್ನಲ್ಲಿ ಒಂದಾಗಿ ನಿನ್ನನ್ನು ಭಾವಿಸಿಹರು.
* ಇಂದ್ರಿಯಗಳ ಮತ್ತವುಗಳ ಸ್ವಭಾವ ದ್ರಷ್ಟನು.
* ನೀನೇ ಪುರಾತನ-ಸನಾತನ-ನಿತ್ಯ, ಆದ್ಯಂತವಿರದ, ಭೂತ- ಭವಿಷ್ಯವಿರದ ಅನಂತ.
* ನೀನೇ ಗುಣಾತೀತ, ನಿರ್ಗುಣ.
* ನಿನಗೆ ಶರಣಾದ ಜೀವಿಗಳ ಅವಿದ್ಯೆಯು ಹರಿದು ನಿಸ್ಸಂಶಯವಾಗಿ ನೀನೆಂಬ ಪರಮಸತ್ಯವನ್ನು ಹೊಂದುವರು.
 ಹೀಗೆ ಗಜರಾಜನು ಶ್ರೀ ನಾರಾಯಣನ ಅನುಗ್ರಹವನ್ನು ಬೇಡುತ್ತಾನೆ –

ಕರುಣಾಮಯನಾದ ಶ್ರೀಮನ್ನಾರಾಯಣನು ಆ ಪ್ರಾಣಿಯ ಸ್ಥಿತಿಯ‌ನ್ನು ಕಂಡು ಕರುಣೆಗೊಳಗಾಗಿ ಆ ಸರೋವರದ ದಡದಲ್ಲಿ ತನ್ನ ಗರುಡ ವಾಹನದೊಂದಿಗೆ ಪ್ರತ್ಯಕ್ಷನಾದನು. ಗಜರಾಯನು ಶಿರಬಾಗಿ ತನ್ನ ಸೊಂಡಿಲಿನಿಂದ ವಂದನೆಯನ್ನು ಮತ್ತು ಕಮಲವನ್ನು ಅರ್ಪಿಸುತ್ತಾ ನಾರಾಯಣ ದೇವನಿಗೆ ನಮಿಸಿತು.

ದಯಾಮಯನಾದ ಶ್ರೀಹರಿಯು ಮೊಸಳೆಯನ್ನು ತನ್ನ ಸುದರ್ಶನ ಚಕ್ರದಿಂದ ಸಂಹರಿಸಿ ಗಜನು ಅರ್ಪಿಸಿದ ಕಮಲಪುಷ್ಪವನ್ನು ಆನಂದದಿಂದ ಸ್ವೀಕರಿಸಿದನು.

ಮೊಸಳೆಯ ಕಳೇಬರದಿಂದ ದಿವ್ಯ ಗಂಧರ್ವರೂಪವೊಂದು ಹೊರ ಹೊಮ್ಮಿತು. ಶಾಪಮುಕ್ತನಾದ ಗಂಧರ್ವನಾದ ಹುಹೂ ದೇವೋತ್ತಮನನ್ನು ನಮಿಸಿದನು. ಗಜರೂಪನಾದರೂ ಇಂದ್ರದ್ಯುಮ್ನನ ಅಂತಃಸತ್ವವು ಭಗವದ್ಭಕ್ತಿಯಲ್ಲಿ ಮಿಂದಿದ್ದುದರಿಂದ ಪೂರ್ವಜನ್ಮದ ಸ್ಮರಣೆಯಿತ್ತು. ಹೀಗಾಗಿ ಕ್ಷುದ್ರಜೀವಿಯಾಗಿಯೂ ಸಂಕಷ್ಟ ಒದಗಿದಾಗ ಭಗವನ್ನಾಮಸ್ಮರಣೆ ಮಾಡಲು ಸಾಧ್ಯವಾಯಿತು. ಇಂದ್ರದ್ಯುಮ್ನನಿಗೆ ಶಾಪದಿಂದಲೂ ಭವಾಸಾಗರದಿಂದಲೂ ಮುಕ್ತಿ ದೊರೆಯಿತು. ಶ್ರೀಮನ್ನಾರಾಯಣನ ಸೇವಕನಾಗಿ ಅವನೊಂದಿಗೆ ಗರುಡವನ್ನೇರಿ ವೈಕುಂಠಕ್ಕೆ ತೆರಳಿದನು.

ಕಥಾ ನೀತಿ

ಈ ಕಥೆಯು  ಅನೇಕ ರೀತಿಯಲ್ಲಿ ನಮಗೆ  ಜೀವನಪಾಠವನ್ನು ಬೋಧಿಸುತ್ತದೆ.

* ಹಲವು ಬಾರಿ ಎದುರಾಗುವ ಸನ್ನಿವೇಶಗಳು ನಮ್ಮ ನಿಯಂತ್ರಣವನ್ನು ಮೀರಿರುತ್ತವೆ. ಆ ಕ್ಷಣದಿ ಅಗಸ್ತ್ಯ ಮುನಿಯ ಶಾಪವನ್ನು ಇಂದ್ರದ್ಯುಮ್ನನು ಸ್ವೀಕರಿಸಿದಂತೆ ನಾವುಗಳು ಕೂಡಾ  “ಇದು ಭಗವದಿಚ್ಛೆ” ಎಂಬ ಅಭಿಪ್ರಾಯದಿಂದ ಸ್ವೀಕರಿಸಬೇಕು.

ಹಾಗೇ ಗುರು ಸ್ಥಾನದಲ್ಲಿರುವ ಜ್ಞಾನಿಗಳನ್ನು ಅನುಸರಿಸದೆ ಅವರಿಗೆ ತೊಂದರೆಯುಂಟು ಮಾಡುವುದು ಹುಹೂವಿಗಾದ ಅನುಭವದಂತೆ ಜೀವನದ ದಿಕ್ಕು ತಪ್ಪಿಸಬಹುದು.
ಅತಿಶಯ ಭಗವದ್ಭಕ್ತಿಯ ಫಲವಾಗಿ ಜೀವಿಗೆ ಜನ್ಮಾಂತರದ ಜ್ಞಾನಪ್ರಾಪ್ತಿ ಸಾಧ್ಯ. ಈ ಕಥೆಯಲ್ಲಿ ಎದ್ದು ಕಾಣುವಂತೆ ಶ್ರೀಮನ್ನಾರಾಯಣನು ತನ್ನ ಭಕ್ತರ ಪಾಲಿಗೆ ಅಪ್ರತಿಮ ದಯಾಮಯಿ.

ಫಲಶ್ರುತಿ

ಮಹರ್ಷಿಗಳು ಹೇಳಿರುವಂತೆ ಯಾರು ಈ ಕಥೆಯನ್ನು ಕೇಳುತ್ತಾರೋ ಅಥವಾ ಓದುತ್ತಾರೋ ಅವರ ದುಃಸ್ವಪ್ನ, ಮನೋವಿಕಾರಗಳು ನಾಶವಾಗಿ ಇಹದಲ್ಲಿ ಭೋಗಭಾಗ್ಯವೂ ಸ್ವರ್ಗಪ್ರಾಪ್ತಿಯೂ ಉಂಟಾಗುತ್ತದೆ.

ಬೆಳಗಿನ ವೇಳೆಯಲ್ಲಿ ಯಾರು ಈ ಕಥೆಯಲ್ಲಿನ ಪರ್ವತ- ಸರೋವರ – ವನಾದಿಗಳಲ್ಲಿ ವಿಷ್ಣುವಿನ ಸ್ವರೂಪವನ್ನೇ ಕಾಣುತ್ತಾರೋ ಅವರ ಪಾಪಕ್ಷಯವಾಗುವುದು. ಯಾರು ಗಜೇಂದ್ರಮೋಕ್ಷಸ್ತೋತ್ರದ ಪಾರಾಯಣವನ್ನು ಕೇಳುತ್ತಾರೋ ಅಥವಾ ಓದುವರೋ ಅದರ ಫಲವಾಗಿ ಅಂತ್ಯಕಾಲದಲ್ಲಿ ಅವರಿಗೆ ವಿಷ್ಣುವಿನ ಸ್ಮರಣೆಯ ಪುಣ್ಯಪ್ರಾಪ್ತಿಯಾಗುವುದು.
****


No comments:

Post a Comment