Thursday, 5 December 2019

ಸುವ್ವಿ ಸುವ್ವಾಲಿ ಸುವ್ವಿ ಸಾಧ್ವಿಯರು ರಾಘವೇಂದ್ರರ ankita pranesha vittala SUVVI SUVVALI SUVVI SAADHVIYARU RAGHAVENDRARA

by ಪ್ರಾಣೇಶದಾಸರು
ಸುವ್ವಿ ಸುವ್ವಾಲಿ |ಸುವ್ವಿ ಸಾಧ್ವಿಯರು ರಾಘವೇಂದ್ರರ ಪಾಡಿ ಪ

ಅಂದಿನ ಕಾಲದ ಮಧ್ವಶಾಸ್ತ್ರವ ಮನಕೆ ತಂದು |ಅಂದದಿ ಟಿಪ್ಪಣಿ ಮಾಡಿದ ದೇವರಾರು | ಸುವ್ವಿ ||ಅಂದು ವಾದಿಸುವ ಜನರನ್ನು ಬಾಯಿ ಮುಚ್ಚಿಸಿದ |ಚಂದಿರ ವದನೆ ಈತನಮ್ಮ ಗುರುವು | ಸುವ್ವಿ 1

ಇವರ ಚರಿತೆಯನ್ನು ತೋರಿದಷ್ಟು ತುತಿಸುವೆ |ಕಿವಿಗೊಟ್ಟು ಕೇಳುವದುಬುಧಜನರು | ಸುವ್ವಿ ||ಪವನಾಂಶರಿವರು ಕವಲಿಲ್ಲ ಖ್ಯಾತರಾಗಿ |ಅವನಿಯ ಸುರರಿಂದರ್ಚನೆಗೊಂಗುವರು | ಸುವ್ವಿ 2

ಅಷ್ಟಾಕ್ಷರ ಮಂತ್ರವನು ತಪ್ಪದಲೆ ನಿತ್ಯವಾಗಿ |ನಿಷ್ಠೆಯಿಂದ ಭಜಿಸಲು ಭೂತ ಭಯವು | ಸುವ್ವಿ ||ಕುಷ್ಠರೋಗ ಕ್ಷಯ ಪಾಂಡು ಜ್ವರ ಸನ್ನಿ ಮೊದಲಾದ |ಅಷ್ಟುಪದ್ರವಾಕ್ಷಣ ಬಿಟ್ಟು ಓಡುವುದು | ಸುವ್ವಿ 3

ಮೃತ್ತಿಕೆಮಾಲೆಅಂಗಾರದಿವ್ಯ ಮಂತ್ರಾಕ್ಷತೆಯು |ಹತ್ತಿರವಿರಲು ಕ್ಲೇಶವ ಲೇಶ ಕಾಣರು | ಸುವ್ವಿ ||ಎತ್ತ ಹೋದರು ಜನರಿಗೆ ಜಯಪ್ರದ ತೋರುವದು |ಕತ್ತಲಿಲ್ಲ ಶತಸಿದ್ಧ ಮತ್ತೇನುಕೇಳಿ| ಸುವ್ವಿ 4

ಪಂಡಿತರು ಮೊದಲಾಗಿಹಸ್ತಿಉಷ್ಟ್ರ ಕುದುರೆಯ |ಹಿಂಡುಗಳು ತೃಷೆಯಿಂದ ಬಳಲುತಿರೆ | ಸುವ್ವಿ ||ದಂಡ ಜಗತಿಗೂರಿ ತೋಯ ತೆಗಿಸಿಯವನೀ |ಮಂಡಲದೊಳಗೆ ಪೆಸರಾದರಿವರು | ಸುವ್ವಿ 5

ಕಟ್ಟಲಿಯ ಭತ್ತದೊಳು ಭೂಪದಳಯುಕ್ತ ಬರ |ಲಿಟ್ಟುಕೊಂಡು ಉಣಿಸಿ ಉತ್ತಮ ವರವ | ಸುವ್ವಿ ||ಕೊಟ್ಟು ಕಳಿಸಿದ ಮೇಲೆ ಆವು ಕೊಂಚಿಯಾಗಲಿಲ್ಲ |ಗಟ್ಟಿ ಸಂಕಲ್ಪರಿವರು ಮುನಿವರರು | ಸುವ್ವಿ 6

ವಿಪ್ರರೆಲ್ಲರು ಹೇಳಿಸಿ ಕಟ್ಟಿಸಿದ ಸದನವ |ಥಟ್ಟನೆ ಕೆಡಿಸಿ ಭೂಪ ಮೆಚ್ಚುವಂದದಿ | ಸುವ್ವಿ ||ನೆಪ್ಪು ಧರೆಗಾಗಲೆಂದುಗುರುಸುಧೀಂದ್ರ ಕುಮಾರ |ಸರ್ಪನ ತೋರಿಸಿ ಸುಪ್ರಖ್ಯಾತರಾದರು | ಸುವ್ವಿ 7

ದ್ವಿಜರ ಸ್ತೋಮವು ಬಾಯಿ ಬಿಡುತಿರೆ ದಯದಿಂದ |ನಿಜಕಾಷ್ಟವಿಳೆಗೆ ನಿಲ್ಲಿಸಿ ಮರವ | ಸುವ್ವಿ ||ಸೃಜಿಸಿ ಪಲ್ಲವ ಫಲಯುಕ್ತವಾಗಿ ತೋರಿಸಿದ |ಭಜಿಸಿರಿವರನ್ನು ಮಕ್ಕಳು ಬೇಡುವವರು | ಸುವ್ವಿ 8

ಮುತ್ತಿನ ಮಾಲಿಕೆನೃಪಭಕ್ತಿಯಿಂದ ಕೊಡಲಾಗಿ |ಸಪ್ತಜಿಹ್ವಗುಣಿಸಿದ ಸರ್ವರು ನೋಡಿ | ಸುವ್ವಿ ||ಮತ್ತೆ ಬೇಡಲು ಪಾವಕನಿಗೆ ಪ್ರಾರ್ಥನೆಯ ಮಾಡಿ |ಮತ್ರ್ಯಪಗೆ ಇತ್ತರು ಮೊದಲಂತೆಯೆ ತಂದು | ಸುವ್ವಿ 9

ಹಿಂದೆ ಮಾಡಿದ ದುಷ್ಕರ್ಮ ತೀರ ಬಂದದನು ನೋಡಿ |ಬಂದಾಕ್ಷಣದಲ್ಲಿ ಅವನ ವಿಚಾರಿಸಿ | ಸುವ್ವಿ ||ಇಂದಿರೇಶನ ಕಾರುಣ್ಯ ಬಲದಿಂದ ಜನನೋಡೆ |ಸಂದೇಹವಿಲ್ಲದೆ ಸುಲೋಕವನಿತ್ತರು | ಸುವ್ವಿ 10

ತುಂಗಾತೀರ ಮಂತ್ರಾಲಯದಲ್ಲಿಶ್ರಾವಣಬಹುಳ |ಮಂಗಳ ಬಿದಿಗಿಯಲ್ಲಿ ನಿವಾಸವಾದರು | ಸುವ್ವಿ ||ಶೃಂಗಾರ ವೃಂದಾವನ ದ್ವಾದಶನಾಮ ಶ್ರೀ ಮುದ್ರೆಯು |ಕಂಗಳುಸಾಲವು ನೋಡ ಹೊದ್ದ ಶಾಠಿಯ | ಸುವ್ವಿ 11

ಅಂಧಕಬಧಿರಕುಂಟ ನಾನಾ ರೋಗಿಗಳು ಮತ್ತೆ |ಕಂದ ವಜ್ರ್ಯ ಮೊದಲಾದವರಿಗೆಕಾಮ್ಯ| ಸುವ್ವಿ ||ತಂದುಕೊಡುವರು ಬೇಗ ಇತರ ಸಂಶಯವಿಲ್ಲ |ಮಂದಭಾಗ್ಯರಿಗೆ ಇವರ ಸೇವೆ ದೊರೆಯದೇ || ಸುವ್ವಿ 12

ಕೌತುಕವೇನೆನ್ನಲಿ ಮುಂಜಿ ವಿವಾಹ ಮಾಡಿಸುವರು |ಚಾತುರ್ಮಾಸದೊಳಗೆ ಗ್ರಹಗಳಸ್ತವಾಗೆ | ಸುವ್ವಿ ||ಧಾತಾ ಪಿತ ನಿಲಯವಿದೇನೋಯೆಂದು ತೋರುವದು |ಪ್ರೀತಿಯುಳ್ಳ ಭಕ್ತರಿಗೆ ಅಧಮರಿಗಲ್ಲ | ಸುವ್ವಿ 13

ಪಾಡ್ಯ ಪೂರ್ವಾರಾಧನೆ ಉತ್ತರಾರಾಧನೆಗೆ |ಒಡ್ಡಿಬರುವುದು ಎಂಟು ದಿಕ್ಕುಗಳಿಂದ ಜನವು | ಸುವ್ವಿ ||ಕಡ್ಡಿಹಿಡಿಯದಂಥ ಸಂದಣಿಯೊಳು ಸನ್ಮುಹೂರ್ತದಿ |ದೊಡ್ಡ ರಥವೇರಿ ಮಠವ ಸುತ್ತುವರು | ಸುವ್ವಿ 14

ಇಷ್ಟೇಯೆನ್ನಲು ವಶವಲ್ಲ ಮಹಿಮೆಗಳಿನ್ನೂ ಉಂಟು |ನಷ್ಟ ಮಾಡುವರು ದುರ್ಮತ ದಾರಿದ್ರ್ಯವ | ಸುವ್ವಿ ||ಸೃಷ್ಟಿಗೊಡೆಯ ಪ್ರಾಣೇಶ ವಿಠ್ಠಲನೆಂದು ಪೇಳ್ವರು |ಎಷ್ಟು ಪೇಳಿದರೂ ಎನ್ನಿಂದಲಿ ತೀರದು | ಸುವ್ವಿ 15
***

ಸುವ್ವಿ ಸುವ್ವಾಲಿ | ಸುವ್ವಿ ಸಾಧ್ವಿಯರು ರಾಘವೇಂದ್ರರ ಪಾಡಿ | ಸುವ್ವಿ ಸಾಧ್ವಿಯರು ರಾಘವೇಂದ್ರರ ಪಾಡಿ | ಸುವ್ವಿ ಸುವ್ವಾಲಿ ||ಪ||

ಅಂದಿನ ಕಾಲದ ಮಧ್ವಶಾಸ್ತ್ರವ ಮನಕೆ ತಂದು | ಅಂದದಿ ಟಿಪ್ಪಣಿ ಮಾಡಿದ ದೇವರಾರು | ಸುವ್ವಿ ||
ಅಂದು ವಾದಿಸುವ ಜನರನ್ನು ಬಾಯಿ ಮುಚ್ಚಿಸಿದ | ಚಂದಿರ ವದನೆ ಈತನಮ್ಮ ಗುರುವು | || ಸುವ್ವಿ || 1 ||

ಇವರ ಚರಿತೆಯನ್ನು ತೋರಿದಷ್ಟು ತುತಿಸುವೆ | ಕಿವಿಗೊಟ್ಟು ಕೇಳುವದು ಬುಧ ಜನರು | ಸುವ್ವಿ ||
ಪವನಾಂಶರಿವರು ಕವಲಿಲ್ಲ ಖ್ಯಾತರಾಗಿ | ಅವನಿಯ ಸುರರಿಂದರ್ಚನೆಗೊಂಬುವರು || ಸುವ್ವಿ || 2 ||

ಅಷ್ಟಾಕ್ಷರ ಮಂತ್ರವನು ತಪ್ಪದಲೆ ನಿತ್ಯವಾಗಿ | ನಿಷ್ಠೆಯಿಂದ ಭಜಿಸಲು ಭೂತ ಭಯವು | ಸುವ್ವಿ ||
ಕುಷ್ಠರೋಗ ಕ್ಷಯ ಪಾಂಡು ಜ್ವರ ಸನ್ನಿ ಮೊದಲಾದ | ಅಷ್ಟುಪದ್ರವಾಕ್ಷಣ ಬಿಟ್ಟು ಓಡುವುದು || ಸುವ್ವಿ || 3 ||

ಮೃತ್ತಿಕೆ ಮಾಲೆ ಅಂಗಾರ ದಿವ್ಯ ಮಂತ್ರಾಕ್ಷತೆಯು | ಹತ್ತಿರವಿರಲು ಕ್ಲೇಶವ ಲೇಶ ಕಾಣರು | ಸುವ್ವಿ ||
ಎತ್ತ ಹೋದರು ಜನರಿಗೆ ಜಯಪ್ರದ ತೋರುವದು | ಕತ್ತಲಿಲ್ಲ ಶತಸಿದ್ಧ ಮತ್ತೇನು ಕೇಳಿ || ಸುವ್ವಿ || 4 ||

ಪಂಡಿತರು ಮೊದಲಾಗಿ ಹಸ್ತಿ ಉಷ್ಟ್ರ ಕುದುರೆಯ | ಹಿಂಡುಗಳು ತೃಷೆಯಿಂದ ಬಳಲುತಿರೆ | ಸುವ್ವಿ ||
ದಂಡ ಜಗತಿಗೂರಿ ತೋಯ ತೆಗಿಸಿಯವನೀ | ಮಂಡಲದೊಳಗೆ ಪೆಸರಾದರಿವರು || ಸುವ್ವಿ || 5 ||

ಕಟ್ಟಲಿಯ ಭತ್ತದೊಳು ಭೂಪದಳಯುಕ್ತ ಬರ | ಲಿಟ್ಟುಕೊಂಡು ಉಣಿಸಿ ಉತ್ತಮ ವರವ | ಸುವ್ವಿ ||
ಕೊಟ್ಟು ಕಳಿಸಿದ ಮೇಲೆ ಆವು ಕೊಂಚಿಯಾಗಲಿಲ್ಲ | ಗಟ್ಟಿ ಸಂಕಲ್ಪರಿವರು ಮುನಿವರರು || ಸುವ್ವಿ || 6 ||

ವಿಪ್ರರೆಲ್ಲರು ಹೇಳಿಸಿ ಕಟ್ಟಿಸಿದ ಸದನವ | ಥಟ್ಟನೆ ಕೆಡಿಸಿ ಭೂಪ ಮೆಚ್ಚುವಂದದಿ | ಸುವ್ವಿ ||
ನೆಪ್ಪು ಧರೆಗಾಗಲೆಂದು ಗುರು ಸುಧೀಂದ್ರ ಕುಮಾರ | ಸರ್ಪನ ತೋರಿಸಿ ಸುಪ್ರಖ್ಯಾತರಾದರು || ಸುವ್ವಿ || 7 ||

ದ್ವಿಜರ ಸ್ತೋಮವು ಬಾಯಿ ಬಿಡುತಿರೆ ದಯದಿಂದ | ನಿಜಕಾಷ್ಟವಿಳೆಗೆ ನಿಲ್ಲಿಸಿ ಮರವ | ಸುವ್ವಿ ||
ಸೃಜಿಸಿ ಪಲ್ಲವ ಫಲಯುಕ್ತವಾಗಿ ತೋರಿಸಿದ | ಭಜಿಸಿರಿವರನ್ನು ಮಕ್ಕಳು ಬೇಡುವವರು || ಸುವ್ವಿ || 8 ||

ಮುತ್ತಿನ ಮಾಲಿಕೆ ನೃಪ ಭಕ್ತಿಯಿಂದ ಕೊಡಲಾಗಿ | ಸಪ್ತಜಿಹ್ವಗುಣಿಸಿದ ಸರ್ವರು ನೋಡಿ | ಸುವ್ವಿ ||
ಮತ್ತೆ ಬೇಡಲು ಪಾವಕನಿಗೆ ಪ್ರಾರ್ಥನೆಯ ಮಾಡಿ | ಮತ್ರ್ಯಪಗೆ ಇತ್ತರು ಮೊದಲಂತೆಯೆ ತಂದು || ಸುವ್ವಿ 9 ||

ಹಿಂದೆ ಮಾಡಿದ ದುಷ್ಕರ್ಮ ತೀರ ಬಂದದನು ನೋಡಿ | ಬಂದಾಕ್ಷಣದಲ್ಲಿ ಅವನ ವಿಚಾರಿಸಿ | ಸುವ್ವಿ ||
ಇಂದಿರೇಶನ ಕಾರುಣ್ಯ ಬಲದಿಂದ ಜನನೋಡೆ | ಸಂದೇಹವಿಲ್ಲದೆ ಸುಲೋಕವನಿತ್ತರು || ಸುವ್ವಿ || 10 ||

ತುಂಗಾತೀರ ಮಂತ್ರಾಲಯದಲ್ಲಿ ಶ್ರಾವಣ ಬಹುಳ | ಮಂಗಳ ಬಿದಿಗಿಯಲ್ಲಿ ನಿವಾಸವಾದರು | ಸುವ್ವಿ ||
ಶೃಂಗಾರ ವೃಂದಾವನ ದ್ವಾದಶನಾಮ ಶ್ರೀ ಮುದ್ರೆಯು | ಕಂಗಳು ಸಾಲವು ನೋಡ ಹೊದ್ದ ಶಾಠಿಯ || ಸುವ್ವಿ || 11 ||

ಅಂಧಕ ಬಧಿರ ಕುಂಟ ನಾನಾ ರೋಗಿಗಳು ಮತ್ತೆ | ಕಂದ ವಜ್ರ್ಯ ಮೊದಲಾದವರಿಗೆ ಕಾಮ್ಯ | ಸುವ್ವಿ ||
ತಂದುಕೊಡುವರು ಬೇಗ ಇತರ ಸಂಶಯವಿಲ್ಲ | ಮಂದಭಾಗ್ಯರಿಗೆ ಇವರ ಸೇವೆ ದೊರೆಯದೇ || ಸುವ್ವಿ || 12 ||

ಕೌತುಕವೇನೆನ್ನಲಿ ಮುಂಜಿ ವಿವಾಹ ಮಾಡಿಸುವರು | ಚಾತುರ್ಮಾಸದೊಳಗೆ ಗ್ರಹಗಳಸ್ತವಾಗೆ | ಸುವ್ವಿ ||
ಧಾತಾ ಪಿತ ನಿಲಯವಿದೇನೋಯೆಂದು ತೋರುವದು | ಪ್ರೀತಿಯುಳ್ಳ ಭಕ್ತರಿಗೆ ಅಧಮರಿಗಲ್ಲ || ಸುವ್ವಿ || 13 ||


ಪಾಡ್ಯ ಪೂರ್ವಾರಾಧನೆ ಉತ್ತರಾರಾಧನೆಗೆ | ಒಡ್ಡಿ ಬರುವುದು ಎಂಟು ದಿಕ್ಕುಗಳಿಂದ ಜನವು | ಸುವ್ವಿ ||
ಕಡ್ಡಿ ಹಿಡಿಯದಂಥ ಸಂದಣಿಯೊಳು ಸನ್ಮುಹೂರ್ತದಿ | ದೊಡ್ಡ ರಥವೇರಿ ಮಠವ ಸುತ್ತುವರು || ಸುವ್ವಿ || 14 ||

ಇಷ್ಟೇಯೆನ್ನಲು ವಶವಲ್ಲ ಮಹಿಮೆಗಳಿನ್ನೂ ಉಂಟು | ನಷ್ಟ ಮಾಡುವರು ದುರ್ಮತ ದಾರಿದ್ರ್ಯವ | ಸುವ್ವಿ ||
ಸೃಷ್ಟಿಗೊಡೆಯ ಪ್ರಾಣೇಶ ವಿಠ್ಠಲನೆಂದು ಪೇಳ್ವರು | ಎಷ್ಟು ಪೇಳಿದರೂ ಎನ್ನಿಂದಲಿ ತೀರದು || ಸುವ್ವಿ || 15 ||
***

Suvvi suvvali | suvvi sadhviyaru raghavendrara paadi | suvvi sadhviyaru raghavendrara paadi | Suvvi suvvali ||pa||

Andina kalada madhvasastrava manake tandu | andadi tippani madida devararu | suvvi ||
Andu vadisuva janarannu bayi muccisida | chandira vadane Itanamma guruvu | suvvi || 1 ||

Ivara cariteyannu toridashtu tutisuve | kivigottu keluvadubudhajanaru | suvvi ||
Pavanamsarivaru kavalilla kyataragi | avaniya surarindarchanegonguvaru | suvvi || 2 ||

Ashtakshara mantravanu tappadale nityavagi | nishtheyinda Bajisalu buta Bayavu | suvvi ||
Kushtharoga kshaya pandu jvara sanni modalada | ashtupadravakshana bittu oduvudu | suvvi || 3 ||

Mruttikemale^^angaradivya mantrakshateyu | hattiraviralu klesava lesa kanaru | suvvi ||
Etta hodaru janarige jayaprada toruvadu | kattalilla Satasiddha mattenukeli| suvvi || 4 ||

Panditaru modalagihasti^^ushtra kudureya | hindugalu trusheyinda balalutire | suvvi ||
Danda jagatiguri toya tegisiyavani | mandaladolage pesaradarivaru | suvvi || 5 ||

Kattaliya battadolu bupadalayukta bara | littukondu unisi uttama varava | suvvi ||
Kottu kalisida mele Avu konciyagalilla | gatti sankalparivaru munivararu | suvvi || 6 ||

Viprarellaru helisi kattisida sadanava | thattane kedisi bupa meccuvandadi | suvvi ||
Neppu dharegagalendugurusudhindra kumara | sarpana torisi suprakyataradaru | suvvi || 7 ||

Dvijara stomavu bayi bidutire dayadinda | nijakashtavilege nillisi marava | suvvi ||
Srujisi pallava palayuktavagi torisida | Bajisirivarannu makkalu beduvavaru | suvvi || 8 ||

Muttina malikenrupabaktiyinda kodalagi | saptajihvagunisida sarvaru nodi | suvvi ||
Matte bedalu pavakanige prarthaneya madi | matryapage ittaru modalanteye tandu | suvvi || 9 ||

Himnde madida dushkarma tira bandadanu nodi | bandakshanadalli avana vicarisi | suvvi ||
Indiresana karunya baladinda jananode | sandehavillade sulokavanittaru | suvvi || 10 ||

Tungatira mantralayadallisravanabahula | mangala bidigiyalli nivasavadaru | suvvi ||
Srungara vrundavana dvadasanama sri mudreyu | kangalusalavu noda hodda sathiya | suvvi || 11 ||

Andhakabadhirakunta nana rogigalu matte | kanda vajrya modaladavarigekamya| suvvi ||
Tandukoduvaru bega itara samsayavilla | mandabagyarige ivara seve doreyade || suvvi || 12 ||

Kautukavenennali munji vivaha madisuvaru | chaturmasadolage grahagalastavage | suvvi ||
Dhata pita nilayavidenoyendu toruvadu | pritiyulla Baktarige adhamarigalla | suvvi || 13 ||

Padya purvaradhane uttararadhanege | oddibaruvudu entu dikkugalinda janavu |

suvvi kaddihidiyadantha sandaniyolu sanmuhurtadi | dodda rathaveri mathava suttuvaru | suvvi || 14 ||

Ishteyennalu vasavalla mahimegalinnu untu | nashta maduvaru durmata daridryava | suvvi ||

srushtigodeya pranesha vitthalanendu pelvaru | eshtu pelidaru ennindali tiradu | suvvi || 15 ||

***

ಸುವ್ವಿ ಸುವ್ವಾಲಿ |ಸುವ್ವಿ ಸಾಧ್ವಿಯರು ರಾಘವೇಂದ್ರರ ಪಾಡಿ

ಪಅಂದಿನ ಕಾಲದ ಮಧ್ವಶಾಸ್ತ್ರವ ಮನಕೆ ತಂದು |ಅಂದದಿ ಟಿಪ್ಪಣಿ ಮಾಡಿದ ದೇವರಾರು | ಸುವ್ವಿ ||
ಅಂದು ವಾದಿಸುವ ಜನರನ್ನು ಬಾಯಿ ಮುಚ್ಚಿಸಿದ |ಚಂದಿರ ವದನೆ ಈತನಮ್ಮ ಗುರುವು | ಸುವ್ವಿ ||

ಇವರ ಚರಿತೆಯನ್ನು ತೋರಿದಷ್ಟು ತುತಿಸುವೆ |ಕಿವಿಗೊಟ್ಟು ಕೇಳುವದುಬುಧಜನರು | ಸುವ್ವಿ ||ಪವನಾಂಶರಿವರು ಕವಲಿಲ್ಲ ಖ್ಯಾತರಾಗಿ |ಅವನಿಯ ಸುರರಿಂದರ್ಚನೆಗೊಂಗುವರು | ಸುವ್ವಿ ||

ಅಷ್ಟಾಕ್ಷರ ಮಂತ್ರವನು ತಪ್ಪದಲೆ ನಿತ್ಯವಾಗಿ |ನಿಷ್ಠೆಯಿಂದ ಭಜಿಸಲು ಭೂತ ಭಯವು | ಸುವ್ವಿ ||
ಕುಷ್ಠರೋಗ ಕ್ಷಯ ಪಾಂಡು ಜ್ವರ ಸನ್ನಿ ಮೊದಲಾದ |ಅಷ್ಟುಪದ್ರವಾಕ್ಷಣ ಬಿಟ್ಟು ಓಡುವುದು | ಸುವ್ವಿ ||

ಮೃತ್ತಿಕೆಮಾಲೆಅಂಗಾರದಿವ್ಯ ಮಂತ್ರಾಕ್ಷತೆಯು |ಹತ್ತಿರವಿರಲು ಕ್ಲೇಶವ ಲೇಶ ಕಾಣರು | ಸುವ್ವಿ ||
ಎತ್ತ ಹೋದರು ಜನರಿಗೆ ಜಯಪ್ರದ ತೋರುವದು |ಕತ್ತಲಿಲ್ಲ ಶತಸಿದ್ಧ ಮತ್ತೇನುಕೇಳಿ| ಸುವ್ವಿ ||

ಪಂಡಿತರು ಮೊದಲಾಗಿಹಸ್ತಿಉಷ್ಟ್ರ ಕುದುರೆಯ |ಹಿಂಡುಗಳು ತೃಷೆಯಿಂದ ಬಳಲುತಿರೆ | ಸುವ್ವಿ ||
ದಂಡ ಜಗತಿಗೂರಿ ತೋಯ ತೆಗಿಸಿಯವನೀ |ಮಂಡಲದೊಳಗೆ ಪೆಸರಾದರಿವರು | ಸುವ್ವಿ ||

ಕಟ್ಟಲಿಯ ಭತ್ತದೊಳು ಭೂಪದಳಯುಕ್ತ ಬರ |ಲಿಟ್ಟುಕೊಂಡು ಉಣಿಸಿ ಉತ್ತಮ ವರವ | ಸುವ್ವಿ ||
ಕೊಟ್ಟು ಕಳಿಸಿದ ಮೇಲೆ ಆವು ಕೊಂಚಿಯಾಗಲಿಲ್ಲ |ಗಟ್ಟಿ ಸಂಕಲ್ಪರಿವರು ಮುನಿವರರು | ಸುವ್ವಿ ||

ವಿಪ್ರರೆಲ್ಲರು ಹೇಳಿಸಿ ಕಟ್ಟಿಸಿದ ಸದನವ |ಥಟ್ಟನೆ ಕೆಡಿಸಿ ಭೂಪ ಮೆಚ್ಚುವಂದದಿ | ಸುವ್ವಿ ||
ನೆಪ್ಪು ಧರೆಗಾಗಲೆಂದುಗುರುಸುಧೀಂದ್ರ ಕುಮಾರ |ಸರ್ಪನ ತೋರಿಸಿ ಸುಪ್ರಖ್ಯಾತರಾದರು | ಸುವ್ವಿ ||

ದ್ವಿಜರ ಸ್ತೋಮವು ಬಾಯಿ ಬಿಡುತಿರೆ ದಯದಿಂದ |ನಿಜಕಾಷ್ಟವಿಳೆಗೆ ನಿಲ್ಲಿಸಿ ಮರವ | ಸುವ್ವಿ ||
ಸೃಜಿಸಿ ಪಲ್ಲವ ಫಲಯುಕ್ತವಾಗಿ ತೋರಿಸಿದ |ಭಜಿಸಿರಿವರನ್ನು ಮಕ್ಕಳು ಬೇಡುವವರು | ಸುವ್ವಿ ||

ಮುತ್ತಿನ ಮಾಲಿಕೆನೃಪಭಕ್ತಿಯಿಂದ ಕೊಡಲಾಗಿ |ಸಪ್ತಜಿಹ್ವಗುಣಿಸಿದ ಸರ್ವರು ನೋಡಿ | ಸುವ್ವಿ ||
ಮತ್ತೆ ಬೇಡಲು ಪಾವಕನಿಗೆ ಪ್ರಾರ್ಥನೆಯ ಮಾಡಿ |ಮತ್ರ್ಯಪಗೆ ಇತ್ತರು ಮೊದಲಂತೆಯೆ ತಂದು | ಸುವ್ವಿ ||

ಹಿಂದೆ ಮಾಡಿದ ದುಷ್ಕರ್ಮ ತೀರ ಬಂದದನು ನೋಡಿ |ಬಂದಾಕ್ಷಣದಲ್ಲಿ ಅವನ ವಿಚಾರಿಸಿ | ಸುವ್ವಿ ||ಇಂದಿರೇಶನ ಕಾರುಣ್ಯ ಬಲದಿಂದ ಜನನೋಡೆ |ಸಂದೇಹವಿಲ್ಲದೆ ಸುಲೋಕವನಿತ್ತರು | ಸುವ್ವಿ ||

ತುಂಗಾತೀರ ಮಂತ್ರಾಲಯದಲ್ಲಿಶ್ರಾವಣಬಹುಳ |ಮಂಗಳ ಬಿದಿಗಿಯಲ್ಲಿ ನಿವಾಸವಾದರು | ಸುವ್ವಿ ||
ಶೃಂಗಾರ ವೃಂದಾವನ ದ್ವಾದಶನಾಮ ಶ್ರೀ ಮುದ್ರೆಯು |ಕಂಗಳುಸಾಲವು ನೋಡ ಹೊದ್ದ ಶಾಠಿಯ | ಸುವ್ವಿ ||

ಅಂಧಕಬಧಿರಕುಂಟ ನಾನಾ ರೋಗಿಗಳು ಮತ್ತೆ |ಕಂದ ವಜ್ರ್ಯ ಮೊದಲಾದವರಿಗೆಕಾಮ್ಯ| ಸುವ್ವಿ ||ತಂದುಕೊಡುವರು ಬೇಗ ಇತರ ಸಂಶಯವಿಲ್ಲ |ಮಂದಭಾಗ್ಯರಿಗೆ ಇವರ ಸೇವೆ ದೊರೆಯದೇ || ಸುವ್ವಿ ||

ಕೌತುಕವೇನೆನ್ನಲಿ ಮುಂಜಿ ವಿವಾಹ ಮಾಡಿಸುವರು |ಚಾತುರ್ಮಾಸದೊಳಗೆ ಗ್ರಹಗಳಸ್ತವಾಗೆ | ಸುವ್ವಿ ||
ಧಾತಾ ಪಿತ ನಿಲಯವಿದೇನೋಯೆಂದು ತೋರುವದು |ಪ್ರೀತಿಯುಳ್ಳ ಭಕ್ತರಿಗೆ ಅಧಮರಿಗಲ್ಲ | ಸುವ್ವಿ ||

ಪಾಡ್ಯ ಪೂರ್ವಾರಾಧನೆ ಉತ್ತರಾರಾಧನೆಗೆ |ಒಡ್ಡಿಬರುವುದು ಎಂಟು ದಿಕ್ಕುಗಳಿಂದ ಜನವು | ಸುವ್ವಿ ||ಕಡ್ಡಿಹಿಡಿಯದಂಥ ಸಂದಣಿಯೊಳು ಸನ್ಮುಹೂರ್ತದಿ |ದೊಡ್ಡ ರಥವೇರಿ ಮಠವ ಸುತ್ತುವರು | ಸುವ್ವಿ ||

ಇಷ್ಟೇಯೆನ್ನಲು ವಶವಲ್ಲ ಮಹಿಮೆಗಳಿನ್ನೂ ಉಂಟು |ನಷ್ಟ ಮಾಡುವರು ದುರ್ಮತ ದಾರಿದ್ರ್ಯವ | ಸುವ್ವಿ ||ಸೃಷ್ಟಿಗೊಡೆಯ ಪ್ರಾಣೇಶ ವಿಠ್ಠಲನೆಂದು ಪೇಳ್ವರು |ಎಷ್ಟು ಪೇಳಿದರೂ ಎನ್ನಿಂದಲಿ ತೀರದು | ಸುವ್ವಿ ||
***


No comments:

Post a Comment