Saturday, 4 December 2021

ಹೂವ ಕೊಡೆ ನೀ ವರವ ಕೊಡೆ ದೇವಿ ನಿನ್ನಯ ankita bheemesha krishna HOOVA KODE NEE VARAVA KODE DEVI NINNAYA



.ಹೂವ ಕೊಡೆ ನೀ ವರವ ಕೊಡೆ
ದೇವಿ ನಿನ್ನಯ ಮುಡಿಮ್ಯಾಲಿದ್ದ ಮಲ್ಲಿಗೆ||ಪ||

ಕಟ್ಟ್ಟುವೊ ತೊಟ್ಟ್ಟಿಲ್ಹುಟ್ಟುವೊ ಗಂಡು ಮಕ್ಕಳು
ಮುತ್ತೈದೆತನವ ಮುದದಿಂದ
ಮುತ್ತೈದೆತನವ ಮುದದಿ ಬೇಡುವೆ
ಶ್ರೀ ಮಾಲಕ್ಷ್ಮಿಯೆ ನಮಗೆ ದಯಮಾಡೆ ||೧||

ಅಂದಣ ರಥ ಬಂದ್ಹೋಗುವೋ ಹೆಣ್ಣು ಮಕ್ಕಳು
ಬಂಧುಗಳಿಗೆಲ್ಲ ಬಲುಕ್ಷೇಮ
ಬಂಧುಗಳಿಗೆಲ್ಲ ಬಲುಕ್ಷೇಮ ಇರುವಂತೆ
ಇಂದಿರಾದೇವಿ ದಯಮಾಡೆ ||೨||

ದಂಪತಿ ನಲಿಸುತ ಸಂಪತ್ತು ಸೌಭಾಗ್ಯ
ಇಂಥ ಮಂದಿರಕೆ ಬಹುಮಾನ
ಇಂಥ ಮಂದಿರಕೆ ಬಹುಮಾನಯಿರುವಂತೆ
ಸಂತೋಷದಿ ವರವ ದಯಮಾಡೆ ||೩||

ಅನ್ನ ಗೋವ್ಗಳು ದಿವ್ಯ ಕನ್ಯಾ ಭೂದಾನ
ಹಿರಣ್ಯದಾನಗಳ ಹಿತದಿಂದ 
ಹಿರಣ್ಯದಾನಗಳ ಹಿತದಿಂದ ಮಾಡುವಂತೆ 
ಸಂಪನ್ನ ನೀ ವರವ ದಯಮಾಡೆ ||೪||

ಇಂದಿಗೆ ಮನೋಭೀಷ್ಟ ಎಂದೆಂದಿಗೆ ನಿನಪಾದ
ಹೊಂದಿರಲೆಂದೂ ಮರೆಯದೆ
ಹೊಂದಿರಲೆಂದೂ ಮರೆಯದೆ ಭೀಮೇಶಕೃಷ್ಣನ
ಅರ್ಧಾಂಗಿ ನೀ ವರವ ದಯಮಾಡೆ ||೫||
***

Hoova kode taayi varava kode |
Devi ninnaya mudimyaalidda mallige || pa ||

Kattuvo tottilhuttuvo gandu makkalu |
Muttaide tanava mudadinda |
Muttaide tanava mudadinda beduve |
Shreemahaalakshmiye namage daya maade || 1 ||

Andanaratha bandhoguva hennumakkalu |
Bandhugaligella balu kshema |
Bandhugaligella balu kshema iruvante |
Indiraadevi dayamaade || 2 ||

Dampati nalisuta sampattu soubhaagya |
Intha mandirake bahumaana |
Intha mandirake bahumaana iruvante |
Santoshadinda varava dayamaade || 3 ||

Anna govgalu divya kanyaa bhoodaana |
Hiranya daanagala hitadinda |
Hiranya daanagala hitadinda maaduvante |
Sampanne nee varava daya maade || 4 ||

Indire manobhishta endendige ninna paada |
Hondiralendoo | endendige ninna paada hondiralendoo |
Mareyade bheemeshakrushnanardhaangi
Nee varava daya maade || 5 ||
***


Huva kode ni varava kode
devi ninnaya mudimyalidda mallige||pa||

Katttuvo totttilhuttuvo gandu makkalu
muttaidetanava mudadinda
muttaidetanava mudadi beduve
sri malakshmiye namage dayamade ||1||

Andana ratha bandholguvo hennu makkalu
bandhugaligella balukshema
bandhugaligella balukshema iruvante
indiradevi dayamade ||2||

Dampati nalisuta sampattu saubhagya
intha mandirake bahumana
intha mandirake bahumanayiruvante
santoshadi varava dayamade ||3||

Anna govgalu divya kanya bhudana
hiranyadanagala hitadinda 
hiranyadanagala hitadinda maduvante 
sampanna ni varava dayamade ||4||

Indige manobhista endendige ninapada
hondiralendu mareyade
hondiralendu mareyade bhimeshakrishnana
ardhangi ni varava dayamade ||5||
***

ಹೂವ ಕೊಡೆ ನೀ ವರವ ಕೊಡೆ
ದೇವಿ ನಿನ್ನಯ ಮುಡಿಮ್ಯಾಲಿದ್ದ ಮಲ್ಲಿಗೆ||

ಕಟ್ಟ್ಟುವೊ ತೊಟ್ಟ್ಟಿಲ್ಹುಟ್ಟುವೊ ಗಂಡು ಮಕ್ಕಳು
ಮುತ್ತೈದೆತನವ ಮುದದಿಂದ
ಮುತ್ತೈದೆತನವ ಮುದದಿ ಬೇಡುವೆ
ಶ್ರೀ ಮಾಲಕ್ಷ್ಮಿಯೆ ನಮಗೆ ದಯಮಾಡೆ ||

ಅಂದಣ ರಥ ಬಂದ್ಹೋಗುವೋ ಹೆಣ್ಣು ಮಕ್ಕಳು
ಬಂಧುಗಳಿಗೆಲ್ಲ ಬಲುಕ್ಷೇಮ
ಬಂಧುಗಳಿಗೆಲ್ಲ ಬಲುಕ್ಷೇಮ ಇರುವಂತೆ
ಇಂದಿರಾದೇವಿ ದಯಮಾಡೆ ||

ದಂಪತಿ ನಲಿಸುತ ಸಂಪತ್ತು ಸೌಭಾಗ್ಯ
ಇಂಥ ಮಂದಿರಕೆ ಬಹುಮಾನ
ಇಂಥ ಮಂದಿರಕೆ ಬಹುಮಾನಯಿರುವಂತೆ
ಸಂತೋಷದಿ ವರವ ದಯಮಾಡೆ ||

ಅನ್ನ ಗೋವ್ಗಳು ದಿವ್ಯ ಕನ್ಯಾ ಭೂದಾನಹಿ-
ರಣ್ಯದಾನಗಳ ಹಿತದಿಂದ ಹಿ-
ರಣ್ಯದಾನಗಳ ಹಿತದಿಂದ ಮಾಡುವಂತೆ ಸಂ-
ಪನ್ನ ನೀ ವರವ ದಯಮಾಡೆ ||

ಇಂದಿಗೆ ಮನೋಭೀಷ್ಟ ಎಂದೆಂದಿಗೆ ನಿನಪಾದ
ಹೊಂದಿರಲೆಂದೂ ಮರೆಯದೆ
ಹೊಂದಿರಲೆಂದೂ ಮರೆಯದೆ ಭೀಮೇಶಕೃಷ್ಣನ-
ರ್ಧಾಂಗಿ ನೀ ವÀರವ ದಯಮಾಡೆ ||
*******

No comments:

Post a Comment