ಶ್ರೀವಿಜಯದಾಸಾರ್ಯ ವಿರಚಿತ ಕಾಲಾಖ್ಯ ಸುಳಾದಿ
ಧ್ರುವತಾಳ
ಅಣುದ್ವಯ ಪರಮಾಣು ಯಿಂಥಾದೆ ತ್ರಯವಾಗೆ
ತ್ರಣು ಯೆನಿಸಿ ಕೊಂಬೋದು ಯಿದೆ ತೃಸರೇಣು
ಮನುಜಾಗೋಚರವೆನ್ನು ಜಾಲಾರ್ಕಕಿರಣಾದಲ್ಲಿ
ಘನವಾಗಿ ಚರಿಸುವ ದೇಶಭೇದ
ಇನಿತು ತ್ರಸರೇಣು ತೃಟಿ ತೃಟಿ ಮೂರು ಯೆಂಬೋದು
ಅನಿಸಿಕೊಳುತಲಿದೆ ವಂದು ವೇಧ
ತೃಣಿ ವೇಧ ವೊಂದು ಲವ ಯಿಂಥವು ಮೂರಾಗೆ
ಎಣಿಸು ನಿಮಿಷಾವೆಂದು ನಿಮಿಷ ಮೂರು
ಕ್ಷಣವಾಗುವದು ಕೇಳಿ ಮರಳೆ ಚನ್ನಾಗಿ ಐದು -
ಕ್ಷಣ ಕೂಡಿದರೆ ವೊಂದು ಕಾಷ್ಟ ಯೆನ್ನಿ
ಅನುಮಾನ ಮಾಡಸಲ್ಲ ಹದಿನೈದು ಕಾಷ್ಟಾ ಲೋ -
ಚನೆ ಮಾಡು ವೊಂದು ಲಘುವು ಸಿದ್ದವಕ್ಕು
ಗುಣಿಸು ಹದಿನೈದು ಲಘುವು ವೊಂದು ನಾಡಿಯೆಂದು
ಇನಿತು ಆರೇಳು ಯೆಂಟು ವೊಂದು ಯಾಮಾ
ಎಣಿಕೆ ಗೈಯೊ ಯಿಂಥ ಯಾಮ ಚತುಷ್ಟವಾಗೆ
ದಿನಮಣಿ ಅಸ್ತಂಗತ ಹನ್ನೆರಡು ತಾಸು
ಇನಿತು ಹನ್ನೆರಡಾಗೆರಳು ನಾಲು ಝಾಂವ
ಎನಿಸುವದು ವೊಂದು ವಾಸರಕೆ
ಗಣಿತಜ್ಞರು ಪೇಳುವರು ತಿಥಿ ತಾರ ಯೋಗ ಕರಣ
ಮನುಜರಿಗೆ ವೊಂದು ದಿವಸಾಯಿತೋ ದೇವ
ಜನನ ಮಿಕ್ಕಾದ ಕರ್ಮಗಳಿಗೆ ಯಿದೆ ಆರಂಭ
ನೆನಿಸು ಹತ್ತೈದು ದಿವಸವೆಂಬೋದೆ ಪಕ್ಷ
ಇನಿತು ಈ ಪರಿಯಾಗೆ ಭಿನ್ನ ಪಕ್ಷ ವೆಂ -
ದೆನಿಸುವು ಶುಕ್ಲ ಕೃಷ್ಣ ಯೆಂಬೊ ನಾಮ
ಅನುವಾಗಿ ಯೆರಡು ಪಕ್ಷ ಕೂಡಿಸಲು ಮಾ -
ತನು ಕೇಳು ತಿಂಗಳೊಂದು ಇಂಥವೆರಡು
ಅನುಸಂಧಿ ನಾಲ್ಕು ವೊಂದು ಋತುವಾಹುದು ಯಿವೆ ಆರು
ಗುಣಿಸಲು ವೊಂದು ವರ್ಷ ವರ್ಷ ನೂರಾಗಲು
ಮನುಜರಿಗೆ ಪೂರ್ಣಾಯು ಯೆಂದೆನಿಸುವದು ಯೋ -
ಚನೆ ಮಾಡು ಮಾನುಷ್ಯ ಮಾನದ ಲೆಕ್ಕ
ಅನಿಮಿಷ ತತಿಗಳಿಗೆ ಮತ್ತೆ ಬಗೆ ವೊಂದು ವತ್ಸರ
ದಿನವೊಂದು ಹಗಲಿರಳು ಆಗೋವೆಂದು
ವನಜಗರ್ಭನ್ನ ತನಕ ಈ ಪರಿಯಿಂದ ಯೆಣಿಸಿ
ಗುಣಿಸಿ ತಿಳಿಯಬೇಕು ಕಾಲಪ್ರಭಾ
ಅಣುಮಹತ್ತುರೂಪ ವಿಜಯವಿಟ್ಠಲರೇಯ
ಗುಣನಿಧಿ ಸರ್ವಕಾಲದೊಡನೆ ತಿರುಗುತಿಪ್ಪ ॥ 1 ॥
ಮಟ್ಟತಾಳ
ಮೂರೊಂದು ಯುಗವುಂಟು ಮನುಜ ಮಾನದಲ್ಲಿ
ಸಾರುವೆ ವರ್ಷಂಗಳು ವಿವರ ವಿವರವಾಗಿ
ಆರಂಭ ಯುಗಕೆ ಹದಿನೇಳು ಲಕ್ಷ
ಈರೈದು ಹತ್ತುಯೆಂಟು ಸಾವಿರವೆನ್ನಿ (೧೭,೨೮,೦೦೦)
ಚಾರು ದ್ವಿತಿಯ ಯುಗಕೆ ಲಕ್ಷದ್ವಾದಶ ತೊಂಭ -
ತ್ತಾರು ಸಾವಿರವೈಯ್ಯ (೧೨,೯೬,೦೦೦)
ಮೂರನೆಯುಗಕೆ ಯೆಂಟುಲಕ್ಷ ಮ್ಯಾಲೆ
ಈರೆರಡರವತ್ತು ಸಾವಿರ ವರುಷಗಳು (೮,೬೪,೦೦೦)
ಈ ರೀತಿ ಗ್ರಹಿಸು ನಾಲ್ಕನೆಯುಗಕೆ ವಿ -
ಚಾರ ನಾಲ್ಕು ಲಕ್ಷ ತ್ರಿಂಶತಿ ದ್ವಯ ಸಹಸ್ರ (೪,೩೨,೦೦೦)
ಹಾರೈಸು ಯೆಲ್ಲ ಕೂಡಿ ಗುಣಿಸೆ ವಿ -
ಸ್ತಾರವಾಗಿದೆ ನಾಲ್ಕು ಹತ್ತು
ಮೂರುಲಕ್ಷ ದಶ ದಶ ಸಾವಿರವೊ (೪೩,೨೦,೦೦೦)
ಬ್ಯಾರೆ ಬ್ಯಾರೆ ಯುಗದ ಪೆಸರಂಗಳು ಶ್ರಿಂ -
ಗಾರದಿಂದಲಿ ಕೇಳಿ ಕೃತ ತ್ರೈತಾ ದ್ವಾಪರ ಕಲಿ
ಸಾರ ಹೃದಯರೊಲಿದು ಸಂತತ ಕರುಣದಲಿ
ಶ್ರೀರಮಣ ನಮ್ಮ ವಿಜಯವಿಟ್ಠಲರೇಯ
ಮೂರೊಂದು ವತ್ಸರ ನಾಮಕ ಕಾಣೊ ॥ 2 ॥
ರೂಪಕತಾಳ
ಏಕತ್ರಯ (೧ + ೩ = ೪) ವೊಮ್ಮೆ ತಿರುಗಿದರು ಮಹಯುಗ
ನಾಕಮಾನದಲ್ಲಿ ದ್ವಾದಶ ಸಹಸ್ರವೊ (೧೨,೦೦೦)
ಲೋಕದೊಳಗೆ ಸಿದ್ಧ ಯಿಂಥ ಮಹಯುಗ ಸಾವಿರ
ಶ್ರೀಕಾಂತನಿಂದಲಿ ತಿರುಗಿದರದು ಅಂದು
ಲೋಕೇಶಗಾಗುವದು ವೊಂದು ಹಗಲು ಶಬ್ದ
ವಾಕು ಲಾಲಿಸಿ ನಾನೂರು ಮೂವತ್ತೆರಡುಕೋಟಿ (೪೩೨,೦೦,೦೦,೦೦೦)
ಈ ಕಾಲದಂತೆ ಸಾವಿರಾವರ್ತಿ ತಿರುಗಿದರು
ನೂಕಿ ಪೋಯಿತು ವೊಂದು ಯಿರಳು ಕಮಲಾಸನಗೆ
ನಾಲ್ಕು ನೂರು ಮೂವತ್ತೆರಡು ಕೋಟಿ
ಶ್ಲೋಕಾರ್ಥದಿಂದಲಿ ಯಿತ್ತಂಡ ಕೂಡಿಸಿ
ನಾಲ್ಕೆರಡು ಅರವತ್ತು ನಾಲ್ಕು ಕೋಟಿ ಗುಣಿತ (೮೬೪,೦೦,೦೦,೦೦೦)
ವಾಕೇಶ ಚತುರ್ಮುಖಗೆ ನಿಜವೊಂದು ದಿವಸವೊ
ಸಕಾರಮೂರ್ತಿ ಸಿರಿ ವಿಜಯವಿಟ್ಠಲರೇಯ
ಲೌಕಿಕಮಾನದಲ್ಲಿ ಯಿಷ್ಟು ವರ್ಷ ಗೈದಾ ॥ 3 ॥
ಝಂಪಿತಾಳ
ವನಜಸಂಭವನ ವೊಂದು ದಿವಾ ರಾತ್ರಿಯೊಳು
ಮನುಗಳು ಚತುರ್ದಶರು ತಮ್ಮ ಪದವಿ
ಅನುಭವಿಸುವರು ಪ್ರತ್ಯೇಕ ಪ್ರತ್ಯೇಕವಾಗಿ
ಗಣಣೆ ಮಾಡಲಿಬೇಕು ಯಿವರ ಕಾಲ
ಮನು ವೊಬ್ಬಗೆ ಎಪ್ಪತ್ತೊಂದು ಮಹಾಯುಗ ದಶ
ಪನಗರ್ಧಾಲಕ್ಷ ಮೇಲೆ ಭುಕ್ತಿಕಾಲ
ಎಣಿಕೆ ಮಾಡಲಿಬೇಕು ಯೆಪ್ಪತ್ತೊಂದು ಮಹಾಯುಗ
ವಿನಯದಿಂದಲಿ ವೊಂದು ಮಹಯುಗದ ಲೆಖ್ಖ (೪೩,೨೦,೦೦೦)
ಇನಿತು ಯೆಪ್ಪತ್ತೊಂದರಿಂದ ವೆಗ್ಗಳಿಸೆ
ಮನಕೆ ವೊಪ್ಪುವದು ತ್ರಿಂಶತಿ ಕೋಟಿ ಅರವತ್ತು
ಮುನಿಲಕ್ಷ ಯಿಪ್ಪತ್ತು ಸಾಸಿರ ವರುಷ (೩೦,೬೭, ೨೦,೦೦೦)
ಮನು ವೊಬ್ಬಬ್ಬನಿಗೆ ಮಹಯುಗ ಎಪ್ಪತ್ತೊಂದು
ಉಣಿಸಿ ಪೋದವು ನೂಕೆ ಅದು ಸಂಖ್ಯ ಮಾಡೆ
ಕ್ಷಣ ಬಿಡದೆ ವೊಂಭೈನೂರು ವೊಂಭತ್ತು ನಾಲ್ಕು
ಮಿನಗುವದು ಮಹಾಯುಗ ಉಳಿದವಾರು ಈ
ಜನಕೆ ಹಂಚಿಕೆಯಿಂದ ನೋಡಲಿಬೇಕು
ಎಣಿಸು ಹದಿನೆಂಟುಲಕ್ಷ ವಂದೈವತ್ತು ಸಾವಿರ
ವನಧಿ ಶತಯಿಪ್ಪತ್ತೆಂಟು ವರುಷಾರು ತಿಂಗಳ
ದಿನ ಯಿಪ್ಪತ್ತೈದು ತಾಸು ಹದಿನೇಳು ಲಘು ಐದು
ಕೊನೆಮಾತ್ರ ವುಂಟು ಅದು ಅಲ್ಪ ವಿವಕ್ಷ
ಮನು ಓರ್ವನಿಗೆ ಕೇಳು ಕಾಲಕ್ಲಪ್ತಿ ಅಬ್ದ
ಮುನಿಗಳ ಸಮ್ಮತವೊ ಬಲ್ಲವರಿಗೆ ಈ ಪ್ರಕಾರದಲಿ
(೧೮, ೫೧, ೪೨೮ ವರುಷ , ೬ ತಿಂಗಳು , ೨೫ ದಿನ ,
೧೭ತಾಸು, ೫ ಲಘು, ೫ ಕಾಷ್ಟ, ೩ ಕ್ಷಣ)
ಇನಿತು ಮಿಶ್ರಮಾಡೆ ವೊಬ್ಬ ಮನುನಿಗೆ ಧಾ -
ರುಣಿ ವಶವಾಗಿ ಯಿದ್ದದು ಕೇಳಿರೊ
ಗುಣ ಹತ್ತು ಕೋಟಿ ಎಂಭತ್ತೈದು ಲಕ್ಷ, ಮಾ -
ರ್ಗಣ ಯೆರಡು ಶತ ಮೇಲೆ ವೊಂದು ಸಹಸ್ರ
ವನಧಿ ವಿಂಶತಿ ಅಷ್ಟವರುಷ ತದು ಪರಿಯಿಂದ
ಗುಣಿಸು ಯುಗ ಮಹಾಯುಗ ವಿಭಾಗದಿ
ಜನನ ಮರಣ ಶೂನ್ಯ ವಿಜಯವಿಟ್ಠಲ ತಾನೆ
ಮನುವಿನೊಳಗಿದ್ದು ತ್ರಿಲೋಕವನು ಆಳ್ವಾ ॥ 4 ॥
ವಿವರ
ಹದಿನಾಲ್ಕು ಮನುಗಳಿಗೆ ಎಪ್ಪತ್ತೊಂದು ಮಹಾಯುಗ ಪ್ರಕಾರ ಲೆಕ್ಕ
ಮಾಡಲಾಗಿ, ೧೪ × ೭೧ = ೯೯೪ ಮಹಾಯುಗಗಳು.
ಮನುಷ್ಯ ಮಾನದ ವರುಷಗಳು ವಂದು ಮಹಾಯುಗಕೆ (೪೩,೨೦,೦೦೦) ನಾಲ್ವತ್ತುಮೂರುಲಕ್ಷ ಯಿಪ್ಪತ್ತು ಸಾವಿರ ವರುಷ ಇದು. ಎಪ್ಪತ್ತೊಂದರಲ್ಲಿ ಹೆಚ್ಚು ಗುಣಿಸಿದರೆ ಒಬ್ಬ ಮನುವಿಗೆ - ೪೩,೨೦,೦೦೦ × ೭೧ = ೩೦,೬೭,೨೦,೦೦೦
೩೦,೬೭,೨೦,೦೦೦ ಇದಕ್ಕೆ ೧೪ ಮನುಗಳು. ೧೪ ರಿಂದ ಗುಣಿಸಿದರೆ ೪೨೯,೪೦,೮೦,೦೦೦ ವರ್ಷಗಳು ೯೯೪ ಮಹಾಯುಗಕೆ.
೨೫೯,೨೦,೦೦೦ ಉಳಿದ ಆರು ಯುಗಕೆ, ಒಟ್ಟಿಗೆ ೧೦೦೦ ಯುಗಗಳಿಗೆ ೪,೩೨,೦೦,೦೦,೦೦೦ ವರುಷಗಳು.
ಬ್ರಹ್ಮದೇವರಿಗೆ (೧) ಹಗಲು ನಾಲ್ಕು ಅಬ್ಜ, ಮೂವಕ್ತೆರಡು ಕೋಟಿ ಮನುಜ ಮಾನ, ವರ್ಷ, ಬ್ರಹ್ಮದೇವರ ಹಗಲಿಗೆ.
ಇನ್ನು ಒಬ್ಬ ಮನುವಿಗೆ ಕಾಲ, ೧ + ೧೦ ಗುಣ ಹತ್ತುಕೋಟಿ, ಎಂಭತ್ತೈದುಲಕ್ಷ ಮಾರ್ಗಣ - ೩೦,೮೫,೭೧೪,೨೮
ವರುಷ, ಆರು ತಿಂಗಳು (೬) ದಿನ (೨೫) ಘಳಿಗೆ (೧೭) ಲಘು (೫) ಕಾಷ್ಟ (೫) ಕ್ಷಣ (೩) ಇದಕ್ಕೆ ೧೪ ರಿಂದ ಗುಣಿಸೆ ೪,೩೨,೦೦,೦೦,೦೦೦
ತ್ರಿವಿಡಿತಾಳ
ಹದಿನಾಲ್ಕು ಮನುಗಳು ಯಿಪ್ಪರು ಸ್ವಾಯಂಭುವ
ಇದರೊಳಗಾದಿ ಮನುವೆನಿಸಿಕೊಂಬ
ಮುದದಿಂದ ತಿಳಿವದು ತಾಪಸಾಖ್ಯಮನು
ಉದುಭವ ವಾಗಿಹ ನಾರೆಯಣ
ಬುಧರು ವಿವರಿಸಿ ಯಿವರ ಸಂಧಿಕಾಲದ ಕ್ಲಪ್ತಿ
ವೊದಗಿ ಕೊಂಡಾಡುವದು ಪುಣ್ಯವಕ್ಕು
ಮೊದಲು ಮನುವಿಗೆ ಎರಡು ಸಾವಿರ ಹಯನ - ೨೦೦೦
ಅದರ ತರುವಾಯದಲಿ ಐದು ಮನುಗಳಿಗೆ
ಹದಿನಾಲ್ಕುನೂರು ವತ್ಸರ ಪ್ರಕಾರ - ೧೪೦೦೦ × ೫
ಯಿದನೆ ಗುಣಿಸಲಾಗಿ ಏಳು ಸಾವಿರ ವಾ - ೭೦೦೦
ದದು ಕಾಣೊ ಉಳಿದೆಂಟು ಮನುಗಳ ಸಂಧಿ
ಹದಿನೈದು ನೂರಬ್ದದಂತೆ ಉಗ್ಗಡಿಸೆ ಹನ್ನೆರಡು ಸಾವಿರವಾದವೆನ್ನಿ - ೧೨೦೦೦
ಇದರಂತೆ ಅವರವರ ಸಂಧಿ ಕಾಲಗಳಿಗೆ
ತ್ರಿದಶಗಣ ಬಲ್ಲರೆ ಕಾಲ ವಿವರ
ಮದನಜನಕ ನಮ್ಮ ವಿಜಯವಿಟ್ಠಲರೇಯ
ಹೃದಯದೊಳಗೆ ಪ್ರೇರಿಸಿದಂತೆ ವಿವರ ನಿಶ್ಚಯಮಾಡಿ ॥ 5 ॥
(೨೧,೦೦೦ ಇಪ್ಪತ್ತೊಂದು ಸಾವಿರ ವರುಷ ೧೪ ಮನುಗಳ ಸಂಧಿಕಾಲ)
ಇದರ ವಿವರ :
೨೦೦೦ ಎರಡು ಸಾವಿರ ವರುಷ ಆದಿ ಸ್ವಾಯಂಭು ಮನುವಿಗೆ.
೭೦೦೦ ಸ್ವಾರೋಚಿಷ, ಉತ್ತುಮ, ತಾಪಸ, ರೈವತ, ಚಾಕ್ಷುಸ ಮನುಗಳಿಗೆ
೧೪೦೦ ನೂರು ಪ್ರಕಾರ × ೫ - ೭೦೦೦ ಸಾವಿರ
೨೧,೦೦೦ ವೈವಸ್ವತಮನ್ವಾದಿ ಇಂದ್ರಸಾವರ್ಣಿ ತನಕಾ,
೮ ಜನಕ್ಕೆ ೧೫೦೦ ವರ್ಷ ಪ್ರಕಾರಕ್ಕೆ ಒಟ್ಟು ೨೧,೦೦೦.
ಅಟ್ಟತಾಳ
ಇಂತು ಸಾವಿರ ಖ್ಯಾಪಿ ತಿರುಗಿದರೆ ದೇವ
ತಿಂತಿಣಿ ಪಿರಿಯಂಗೆ ಹಗಲಿರಳೊಂದೆ ಅಯ್ಯ
ಸಂತಿತೊ ಕಾಣೊ ಮುಂದೆ ಗಣತಿ ಚನ್ನಾಗಿ
ಚಿಂತಿಸು ಬೊಮ್ಮನ್ನಾ ವಂದೆ ತಿಂಗಳಿಗೆ ಆ -
ದ್ಯಂತಕಾಲ ನೋಡೆ ಎರಡು ಅರ್ಬುದ ಐನೂರಾ ತೊಂ -
ಭತ್ತೆರಡು ಕೋಟ ವತ್ಸರ ಸಿದ್ಧ (೨೫,೯೨,೦೦,೦೦,೦೦೦)
ಇಂಥವೆ ಹನ್ನೆರಡಾಗೆ ವೊಂದು ವರುಷ
ಮಂತ್ರೋಕ್ತದಿಂದಲಿ ಯಿವೆ ನೂರು ಬೊಮ್ಮಗೆ
ಕಂತುಜನಕ ರಂಗ ವಟಪತ್ರ ಶಯನನೊ
ಎಂತು ಪೇಳಲಿ ಹರಿಯ ಶಕ್ತಿಗೆ ಸರ್ವ ಸ್ವಾ -
ತಂತ್ರನೊ ಅಜನಬ್ದ ನೂರು ವರುಷ ಪರಿ -
ಯಂತ ಮಲಗಿಪ್ಪ ಲಕುಮಿ ಸಹಿತವಾಗಿ
ಚಿಂತಿತ ಫಲದಾಯಕ ವಿಜಯವಿಟ್ಠಲರೇಯ
ಪಿಂತಿನ ಬೊಮ್ಮನಿಗೆ ಯಿದರಂತೆ ಫಲಿಸಿದ ॥ 6 ॥
ಆದಿತಾಳ
ಕಾಲಾತೀತ ವಿಷ್ಣು ಅಣುಮಹತ್ತುವಾದ
ಕಾಲ ಪ್ರೇರಕನಾಗಿ ಅನಾದಿಯಿಂದ ವಿಡಿದು
ಕಾಲನಾಮಕನೆನಿಸಿ ಸಮಸ್ತ ಜೀವಿಗಳ
ಕಾಲಪಾಶದಿ ಸಂಸಾರದೊಳಗಿಟ್ಟು
ಕಾಲಕಾಲಕೆ ಮಹಾ ಸುಳಿಯೊಳು ಸುತ್ತಿಸುವ
ಕಾಲಮೂರುತಿ ಈತನ ಭಯದಿಂದ ಜಡಜೀವರು
ಕಾಲ ಮೀರದೆ ಸರ್ವ ಸತ್ಪಥ ಕೊಡುವರು
ಕಾಲದೊಡನೆಯಿಪ್ಪ ಕಾಲಕ್ಕೆ ಶಿಗದಿಪ್ಪ
ಕಾಲತ್ರಯದಲ್ಲಿ ಯಿನಿತೆನಿಸಿದ ಮಾನವ
ಕಾಲಜ್ಞಾನಿಯಾಗುವ ಆವಾವ ದೇಹದಲ್ಲಿ
ಕಾಲನ್ನ ಭೀತಿಯಿಲ್ಲದೆ ಸುಖಿಸುವ ಗೋತ್ರದೊಡನೆ
ಕಾಲಕ್ಕೆ ದೋಷವಿಲ್ಲ ಸಮ್ಮಂಧದಿಂದ ದುಷ್ಕಾಲ ಅಕಾಲವೆಂದು
ಕಾಲ ಕರೆಸಿಕೊಳುತಿಪ್ಪವು ನೋಡಿರೊ
ಕಾಲಕಂಧರ ವಿನುತ ವಿಜಯವಿಟ್ಠಲ ಸರ್ವ -
ಕಾಲಕೆ ಗತಿಯೆನ್ನು ಕಡೆಮಾಡು ಭವದಿಂದ ॥ 7 ॥
ಜತೆ
ಕಾಲವಿವರ ತಿಳಿದು ವಿಜಯವಿಟ್ಠಲರೇಯನ
ಕಾಲಿಗೆರಗಿ ಬದುಕು ಜ್ಞಾನ ಭಕುತಿಯಿಂದ ॥
****
1. Dhṛvatāḷa (Microscopic Units to Human and Deva Days)
Aṇudvaya paramāṇu yiṇthāde trayavāge |
Traṇu yenisi koṃbōದು yide tṛsarēṇu |
Manujāgōcaravennu jālārkakiraṇādalli |
Ghanavāgi carisuva dēśabhēda |
Initu tṛsarēṇu tṛṭi tṛṭi mūru yeṃbōdu |
Anisikoḷutalide vaṇdu vēdha |
Tṛṇi vēdha voṇdu lava yiṇthavu mūrāge |
Eṇisu nimiṣāveṇdu nimiṣa mūru |
Kṣaṇavāguvadu kēḷi maraḷe cannāgi aidu - |
Kṣaṇā kūḍidare voṇdu kāṣṭa yeṇni |
Anumāna māḍasalla hadinaidu kāṣṭā lō - |
Cane māḍu voṇdu laghuvu siddhavakku |
Guṇisu hadinaidu laghuvu voṇdu nāḍiyeṇdu |
Initu ārēḷu yeṇtu voṇdu yāmā |
Eṇike gaiyo yiṇtha yāma catuṣṭavāge |
Dinamaṇi astaṅgata hanneradu tāsu |
Initu hanneradāgeraḷu nālu jhāṃva |
Enisuvaḍu voṇdu vāsarake |
Gaṇitajñaru pēḷuvaru tithi tāra yōga karaṇa |
Manujarige voṇdu dhavasāyitō dēva |
Janana mikkāda karmagaḷige yide āraṃbha |
Nenisu hattaidu divasaveṃbōde pakṣa |
Initu ī pariyāge bhiṇna pakṣa veṃ - |
Denisuvu śukla kṛṣṇa yeṃbo nāma |
Anuvāgi yeradu pakṣa kūḍisalu mā - |
Tanu kēḷu tiṅgaḷoṇdu iṇthaveradu |
Anusaṇdhi nālku voṇdu ṛtuvāhudu yive āru |
Guṇisalu voṇdu varṣa varṣa nūrāgalu |
Manujarige pūrṇāyu yeṇdenisuvaḍu yō - |
Cane māḍu mānuṣya mānada lekkha |
Animiṣa tatigaḷe matte bage voṇdu vatsara |
Dinavoṇdu hagaliraḷu āgōveṇdu |
Vanajagarbhaṇna tanaka ī pariyinda yeṇisi |
Guṇisi tiḷiyabēku kālapraphā |
Aṇumahatturūpa vijayaviṭṭhalarēya |
Guṇanidhi sarvakāladoḍane tirugutipp ॥ 1 ॥
2. Maṭṭatāḷa (The Length of the Four Yugas)
Mūroṇdu yugavuṇṭu manuja mānadalli |
Sāruve varṣaṃgaḷu vivara vivaravāgi |
Āraṃbha yugake hadinēḷu lakṣa |
Īraidu hattuyeṇtu sāviraveṇni |
Cāru dvitīya yugake lakṣadvādaśa toṃbha - |
Ttāru sāvira vaiyya |
Mūraneyugake yeṇtulakṣa myāle |
Īreradaravattu sāvira varuṣagaḷu |
Ī rīti grahisu nālkaneyugake vi - |
Cāra nālku lakṣa triṃśati dvaya sahasra |
Hāraisu yella kūḍi guṇise vi - |
Stāravāgide nālku hattu |
Mūralakṣa daśa daśa sāvira vo |
Byāre byāre yugada pesarāṅgaḷu śriṃ - |
Gāradindali kēḷi kṛta traitā dvāpara kali |
Sāra hṛdayarolidu saṇtata karuಣdali |
Śrīramaṇa namma vijayaviṭṭhalarēya |
Mūroṇdu vatsara nāmaka kāṇō ॥ 2 ॥
3. Rūpakatāḷa (Cosmic Day and Night of Brahma)
Ēkatraya voṃme tirugidaru mahāyuga |
Nākamānadalli dvādaśa sahasravo |
Lōkadoḷage siddha yiṇtha mahāyuga sāvira |
Śrīkāṇtanindali tirugidaru adu aṇdu |
Lōkēśagāguvadu voṇdu hagalu śabda |
Vāku lālisi nānūru mūvatteradukōṭi |
Ī kāladante sāvirāvārti tirugidaru |
Nūki pōyitu voṇdu yiraḷu kamalāsanage |
Nālku nūru mūvatteradu kōṭi |
Ślōkārthadiṇdali yittaṇಡ kūḍisi |
Nālkeraḍu aravattu nālku kōṭi guṇita |
Vākēśa caturmukhage nijavoṇdu dhavasavo |
Sakāramūrti siri vijayaviṭṭhalarēya |
Laukikamānadalli yiṣṭu varṣa gaidā ॥ 3 ॥
4. Jhampitāḷa (Lifespan of One Manu / Manvantara)
Vanajasaṃbhavana voṇdu divā rātriyoḷu |
Manugaḷu caturdaśaru tamma padavi |
Anubhavisuvaru pratyēka pratyēkavāgi |
Gaṇaṇe māḍalibēku yivara kāla |
Manu voṃbage eppattōndu mahāyuga daśa |
Panagardhālakṣa mēle bhuktikāla |
Eṇike māḍalibēku yeppattōndu mahāyuga |
Vinayadiṇdali voṇdu mahāyugada lekhha |
Initu yeppattōndariṇda veggalise |
Manake voppuvadu triṃśati kōṭi aravattu |
Munilakṣa yippattu sāsira varuṣa |
Manu voṃbabbānige mahāyuga eppattōndu |
Uṇisi pōdavu nūke adu saṅkhye māḍe |
Kṣaṇa biḍade voṃbhai nūru voṃbhattu nālku |
Minaguvaḍu mahāyuga uḷidavāru ī |
Janake hañcikeyiṇda nōḍalibēku |
Eṇisu hadineṇtulakṣa vaṇdaivattu sāvira |
Vanadhi śatayippatteṇtu varuṣāru tiṅgaḷa |
Dina yippattaidu tāsu hadinēḷu laghu aidu |
Konemātra vuṇṭu adu alpa vivakṣa |
Manu ōrvanige kēḷu kālaklapthi abda |
Munigaḷa sammatavo ballavarige ī prakāradali |
Initu miśramāḍe voṃba manunige dhā - |
Ruṇi vaśavāgi yiddadu kēḷiro |
Guṇahattu kōṭi eṃbhaittailakṣa mā - |
Rgaṇayeradu śata mēle voṇdu sahasra |
Vanadhi viṃśati aṣṭavaruṣa tadu pariyinda |
Guṇisu yuga mahāyuga vibhāgadi |
Janana maraṇa śೂnya vijayaviṭṭhala tāne |
Manuvinoḷagiddu trilōkavanu āḷvā ॥ 4 ॥
5. Triviḍatāḷa (The Chronology of Sandhi Kalas)
Hadimālku manugaḷu yipparu svāyaṃbhuva |
Idaroḷagādi manuvenisikoṃba |
Mudadinda tiḷivadu tāpasākhyamanu |
Udubhavavāgiha nārāyaṇa |
Budharu vivarisi yivar saṇdhikālada klapthi |
Vodagi koṇಡāḍuvadu puṇyavakku |
Modalu manuvige eradu sāvira hayana - |
Adara taruvāyadali aidu manugaḷige |
Hadinaīrunūru vatsara prakāra |
Yidane guṇisalāgi ēlu sāvira vā - |
Dadu kāṇo uḷideṇtu manugaḷa saṇdhi |
Hadinainūrabdadante uggadise hanneradu sāvira vādaveṇni - |
Idaraṇte avaravara saṇdhi kālagaḷige |
Tridaśagaṇa ballare kāla vivara |
Madanajanaka namma vijayaviṭṭhalarēya |
Hṛdayadoḷage prērisidaṇte vivara niścayamāḍi ॥ 5 ॥
6. Aṭṭatāḷa (Brahma's 100-Year Century and Maha Pralaya)
Iṇtu sāvira khyāpi tirugidare dēva |
Tiṇtiṇi piriyāṅge hagaliraḷōnde ayya |
Saṇtito kāṇō muṇde gaṇati cannāgi |
Ciṇtisu boṃmaṇṇā vaṇde tiṅgaḷige ā - |
Dyaṇtakāla nōḍe eradu arbudā ainūrā toṃ -
Bhatteradu kōṭa vatsara siddha |
Iṇtheve hanneradāge voṇdu varuṣa |
Maṇtrōktadiṇdali yive nūru boṃmage |
Kaṇtujanaka raṅga vaṭapatra śayanano |
Eṇtu pēḷali hariya śaktige sarva svā - |
Traṇtraṇo ajanabda nūru varuṣa pari -
Yaṇta malagippa lakumi sahitavāgi |
Ciṇtita phalādayaka vijayaviṭṭhalarēya |
Piṇtina boṃmanige yidaraṇte phalisida ॥ 6 ॥
7. Āditāḷa (Glory of Vishnu as Lord of Time)
Kālātīta viṣṇu aṇumahattuvāda |
Kāla prērakanāgi anādiyiṇda viḍidu |
Kālanāmakanenisi samasta jīvigaḷa |
Kālapaśadi saṃsāradoḷagittu |
Kālakālake mahā suḷiyoḷu suttisuva |
Kālamūrti ītana bhayatiṇda jaḍajīvaru |
Kāla mīrade sarva satpatha koduvaru |
Kāladoḍanēyippa kālakke śigadippa |
Kālatrayadalli yinitenisida mānava |
Kālajñāniyāguva āvāva dēhadalli |
Kālānna bhītiyillade sukhisuva gōtradoḍane |
Kālakke dōṣavilla saṃmaṇdhadiṇda duṣkāla akālaveṇdu |
Kāla karesikoḷutippavu nōḍirō |
Kālakaṇdhara vinuta vijayaviṭṭhala sarva - |
Kālake gatiyennu kaḍemāḍu bhavadiṇda ॥ 7 ॥
Jate (Concluding Couplet)
Kālavivara tiḷidu vijayaviṭṭhalarēyana |
Kāligeragi baduku jñāna bhakutiyiṇda ॥
***
Key Pronounciation guide
Vowels: Elongate your voice for two full beats whenever you see a line above a vowel ($\bar{a}, \bar{\imath}, \bar{u}, \bar{e}, \bar{o}$), making sounds like "aa" in rājā or "ee" in nāḍi.
Retroflexes: Whenever a dot appears under a consonant ($ṭ, ḍ, ṇ, ḷ$), curl the tip of your tongue backward to touch the roof of your mouth, as in suḷādi, kāṣṭa, or naḍige.Soft Ch & Sh:
Always pronounce the letter c softly like the "ch" in "chair" (e.g., catura), and treat ś as a soft, flowing "sh" sound like in "shoe" (e.g., śukla).
Nasals: Treat the letters ṃ and ṅ as deep, vibrant nasal trailing notes that echo from the back of the throat, sounding like the "ng" in "sing" (e.g., astaṅgata, saṃbandha).
Aspirates: Forcefully breathe out from your chest for any consonant paired with an h ($th, ph, kh, gh$), giving a heavy emphasis to words like vēdha or lekhha.
***
ಶ್ರೀ ವಿಜಯದಾಸಾರ್ಯರು (ಅಂಕಿತ: ವಿಜಯವಿಠಲ) ವಿರಚಿಸಿರುವ ಈ 'ಕಾಲಾಖ್ಯ ಸುಳಾದಿ' ಅತ್ಯಂತ ಮಹತ್ವದ ಹಾಗೂ ಶಾಸ್ತ್ರೀಯವಾದ ಕೃತಿಯಾಗಿದೆ. ಇದರಲ್ಲಿ ದಾಸರು ಭಾರತೀಯ ಸನಾತನ ಧರ್ಮ ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕಾಲದ ಸೂಕ್ಷ್ಮ ಲೆಕ್ಕಾಚಾರವನ್ನು (ಪರಮಾಣುವಿನಿಂದ ಹಿಡಿದು ಬ್ರಹ್ಮದೇವರ ನೂರು ವರ್ಷಗಳ ಆಯುಷ್ಯದವರೆಗೆ) ಅತ್ಯಂತ ನಿಖರವಾಗಿ ಗಣಿತದ ರೂಪದಲ್ಲಿ ನಿರೂಪಿಸಿದ್ದಾರೆ.
ಸಾರಾಂಶ (Summary)
ಈ ಸುಳಾದಿಯಲ್ಲಿ ವಿಜಯದಾಸರು ಕಾಲದ ಸ್ವರೂಪವನ್ನು ಬಿಚ್ಚಿಟ್ಟಿದ್ದಾರೆ. ಕಾಲ ಎಂಬುದು ಕಣ್ಣಿಗೆ ಕಾಣದ ಪರಮಾಣುವಿನಿಂದ ಆರಂಭವಾಗಿ ತ್ರಸರೇಣು, ನಿಮಿಷ, ನಾಡೀ, ದಿವಸ, ಪಕ್ಷ, ಮಾಸ, ಋತು, ವರ್ಷಗಳಾಗಿ ಬೆಳೆಯುತ್ತದೆ. ಮಾನವನ ನೂರು ವರ್ಷಗಳ ಆಯುಷ್ಯದ ನಂತರ ದೇವತೆಗಳ ಕಾಲ, ಅದಾದ ಮೇಲೆ ಚತುರ್ಯುಗಗಳ (ಕೃತ, ತ್ರೇತಾ, ದ್ವಾಪರ, ಕಲಿ) ಕೋಟ್ಯಂತರ ವರ್ಷಗಳ ಲೆಕ್ಕ ಬರುತ್ತದೆ. ಇಂತಹ ಸಾವಿರ ಚತುರ್ಯುಗಗಳು ಸೇರಿದರೆ ಬ್ರಹ್ಮದೇವರಿಗೆ ಒಂದು ಹಗಲು (೪೩೨ ಕೋಟಿ ವರ್ಷಗಳು). ಇಂತಹ ಬ್ರಹ್ಮದೇವರ ದಿನರಾತ್ರಿಗಳು, ೧೪ ಮನುಗಳ ಆಳ್ವಿಕೆಯ ಕಾಲ (ಮನ್ವಂತರ) ಮತ್ತು ಬ್ರಹ್ಮದೇವರ ನೂರು ವರ್ಷಗಳ ಆಯುಷ್ಯದ ಬೃಹತ್ ಲೆಕ್ಕವನ್ನು ದಾಸರು ಇಲ್ಲಿ ನೀಡಿದ್ದಾರೆ. ಕೊನೆಗೆ, ಇಷ್ಟೆಲ್ಲಾ ಬೃಹತ್ ಕಾಲಚಕ್ರವನ್ನು ನಿಯಂತ್ರಿಸುವ ಸಾಕ್ಷಾತ್ ಶ್ರೀಹರಿಯೇ 'ಕಾಲನಿಯಾಮಕ' ಮತ್ತು 'ಕಾಲಾತೀತ'ನಾಗಿದ್ದಾನೆ, ಆತನ ಪಾದಗಳನ್ನು ನಂಬಿ ಭವಬಂಧನದಿಂದ ಮುಕ್ತರಾಗಿ ಎಂದು ದಾಸರು ಉಪದೇಶಿಸಿದ್ದಾರೆ.
ಅರ್ಥ (Meaning Parawise)
೧. ಧ್ರುವತಾಳ (ಸೂಕ್ಷ್ಮ ಕಾಲದಿಂದ ಮಾನವ ಮತ್ತು ದೇವತೆಗಳ ಕಾಲದ ಲೆಕ್ಕ)
ಅರ್ಥ: ಎರಡು ಪರಮಾಣುಗಳು ಸೇರಿದರೆ ಒಂದು 'ಅಣುದ್ವಯ'. ಇಂತಹವು ಮೂರು ಸೇರಿದರೆ 'ತ್ರಸರೇಣು' (ಕಿಟಕಿಯ ಸೂರ್ಯನ ಬಿಸಿಲಿನ ಕಿರಣದಲ್ಲಿ ಕಣ್ಣಿಗೆ ಕಾಣುವ ಸಣ್ಣ ಧೂಳಿನ ಕಣ). ಮೂರು ತ್ರಸರೇಣು ಎಂದರೆ ಒಂದು 'ತೃಟಿ'. ಮೂರು ತೃಟಿ ಎಂದರೆ ಒಂದು 'ವೇಧ'. ಮೂರು ವೇಧ ಎಂದರೆ ಒಂದು 'ಲವ'. ಮೂರು ಲವ ಎಂದರೆ ಒಂದು 'ನಿಮಿಷ'. ಮೂರು ನಿಮಿಷ ಎಂದರೆ ಒಂದು 'ಕ್ಷಣ'. ಐದು ಕ್ಷಣಗಳು ಸೇರಿದರೆ ಒಂದು 'ಕಾಷ್ಟ'. ಹದಿನೈದು ಕಾಷ್ಟಗಳು ಎಂದರೆ ಒಂದು 'ಲಘು'. ಹದಿನೈದು ಲಘುಗಳು ಸೇರಿದರೆ ಒಂದು 'ನಾಡಿ' (ಘಳಿಗೆ). ಇಂತಹ ಆರೇಳು-ಎಂಟು ನಾಡಿಗಳು ಸೇರಿದರೆ ಒಂದು 'ಯಾಮ' (ಜಾವ - ಸುಮಾರು ೩ ಗಂಟೆ). ನಾಲ್ಕು ಯಾಮಗಳು ಸೇರಿದರೆ ಹಗಲು (೧೨ ತಾಸು). ಹಗಲು-ರಾತ್ರಿ ಸೇರಿದರೆ (೮ ಜಾವಗಳು) ಮನುಷ್ಯರಿಗೆ ಒಂದು 'ದಿವಸ' (ದಿನ) ಆಗುತ್ತದೆ. ಜ್ಞಾನಿಗಳು ಇದನ್ನು ತಿಥಿ, ನಕ್ಷತ್ರ, ಯೋಗ, ಕರಣಗಳಿಂದ ಲೆಕ್ಕ ಹಾಕುತ್ತಾರೆ. ಮಾನವನ ಸಕಲ ಕರ್ಮಗಳಿಗೆ ಇದೇ ಆರಂಭ.
ಹದಿನೈದು ದಿವಸಗಳು ಸೇರಿದರೆ ಒಂದು 'ಪಕ್ಷ' (ಶುಕ್ಲ ಪಕ್ಷ ಮತ್ತು ಕೃಷ್ಣ ಪಕ್ಷ). ಎರಡು ಪಕ್ಷಗಳು ಸೇರಿದರೆ ಒಂದು 'ತಿಂಗಳು' (ಮಾಸ). ಎರಡು ತಿಂಗಳು ಸೇರಿದರೆ ಒಂದು 'ಋತು'. ಆರು ಋತುಗಳು (೧೨ ತಿಂಗಳು) ಸೇರಿದರೆ ಒಂದು 'ವರ್ಷ'. ಮನುಷ್ಯರಿಗೆ ನೂರು ವರ್ಷಗಳು ಪೂರ್ಣ ಆಯುಷ್ಯ. ಇದು ಮನುಷ್ಯ ಮಾನದ ಲೆಕ್ಕ.
ದೇವತೆಗಳಿಗೆ (ಅನಿಮಿಷ ತತಿ) ಮನುಷ್ಯರ ಒಂದು ವರ್ಷವೇ ಒಂದು ದಿವಸ (ಹಗಲು-ರಾತ್ರಿ) ಆಗಿರುತ್ತದೆ. ಬ್ರಹ್ಮದೇವರ (ವನಜಗರ್ಭ) ವರೆಗೂ ಇದೇ ರೀತಿ ಕಾಲದ ಪ್ರಭಾವವನ್ನು ಗುಣಿಸಿ ತಿಳಿಯಬೇಕು. ಸೂಕ್ಷ್ಮ ಹಾಗೂ ಬೃಹತ್ ರೂಪಿಯಾದ (ಅಣುಮಹತ್ತುರೂಪ) ವಿಜಯವಿಠಲನು ಈ ಸರ್ವಕಾಲದ ನಿಯಾಮಕನಾಗಿ ಇದರೊಂದಿಗೆ ತಿರುಗುತ್ತಿದ್ದಾನೆ.
೨. ಮಟ್ಟತಾಳ (ಚತುರ್ಯುಗಗಳ ವರ್ಷಗಳ ಲೆಕ್ಕ)
ಅರ್ಥ: ಮನುಷ್ಯರ ಲೆಕ್ಕದ ಪ್ರಕಾರ ಮಹಾಯುಗದಲ್ಲಿ ನಾಲ್ಕು ಯುಗಗಳಿವೆ. ಅವುಗಳ ವರ್ಷಗಳ ವಿವರವನ್ನು ದಾಸರು ಇಲ್ಲಿ ನೀಡಿದ್ದಾರೆ:
ಕೃತಯುಗ (ಸತ್ಯಯುಗ): ೧೭,೨೮,೦೦೦ (ಹದಿನೇಳು ಲಕ್ಷ ಇಪ್ಪತ್ತೆಂಟು ಸಾವಿರ) ವರ್ಷಗಳು.
ತ್ರೇತಾಯುಗ: ೧೨,೯೬,೦೦೦ (ಹನ್ನೆರಡು ಲಕ್ಷ ತೊಂಬತ್ತಾರು ಸಾವಿರ) ವರ್ಷಗಳು.
ದ್ವಾಪರಯುಗ: ೮,೬೪,೦೦೦ (ಎಂಟು ಲಕ್ಷ ಅರವತ್ತನಾಲ್ಕು ಸಾವಿರ) ವರ್ಷಗಳು.
ಕಲಿಯುಗ: ೪,೩೨,೦೦೦ (ನಾಲ್ಕು ಲಕ್ಷ ಮೂವತ್ತೆರಡು ಸಾವಿರ) ವರ್ಷಗಳು.
ಇವೆಲ್ಲವನ್ನೂ ಒಟ್ಟಿಗೆ ಸೇರಿಸಿ ಗುಣಿಸಿದರೆ ಒಂದು 'ಮಹಾಯುಗ' ಆಗುತ್ತದೆ. ಒಂದು ಮಹಾಯುಗದ ಒಟ್ಟು ವರ್ಷಗಳು: ೪೩,೨೦,೦೦೦ (ನಲವತ್ತಮೂರು ಲಕ್ಷ ಇಪ್ಪತ್ತು ಸಾವಿರ) ವರ್ಷಗಳು. ಕೃತ, ತ್ರೇತಾ, ದ್ವಾಪರ, ಕಲಿ ಎಂಬ ಸುಂದರ ನಾಮಗಳುಳ್ಳ ಈ ಯುಗಚಕ್ರವನ್ನು ನಮ್ಮ ವಿಜಯವಿಠಲನೇ ಸದಾ ನಡೆಸುತ್ತಿದ್ದಾನೆ.
೩. ರೂಪಕತಾಳ (ಬ್ರಹ್ಮದೇವರ ಒಂದು ದಿನದ ಲೆಕ್ಕ)
ಅರ್ಥ: ದೇವತೆಗಳ ಲೆಕ್ಕದ ಪ್ರಕಾರ (ನಾಕಮಾನ) ಹನ್ನೆರಡು ಸಾವಿರ ವರ್ಷಗಳಾದರೆ ಒಂದು ಮಹಾಯುಗ. ಭೂಲೋಕದ ಲೆಕ್ಕದಲ್ಲಿ ಇಂತಹ ಸಾವಿರ ಮಹಾಯುಗಗಳು ಒಮ್ಮೆ ತಿರುಗಿದರೆ, ಅದು ಬ್ರಹ್ಮದೇವರಿಗೆ (ಲೋಕೇಶ) 'ಒಂದು ಹಗಲು' ಎನಿಸಿಕೊಳ್ಳುತ್ತದೆ. ಅಂದರೆ ಮನುಷ್ಯರ ಲೆಕ್ಕದಲ್ಲಿ ೪೩೨ ಕೋಟಿ ವರ್ಷಗಳು ಬ್ರಹ್ಮದೇವರ ಒಂದು ಹಗಲು! ಇದೇ ರೀತಿ ಮತ್ತೊಂದು ಸಾವಿರ ಮಹಾಯುಗಗಳು ಉರುಳಿದರೆ ಬ್ರಹ್ಮದೇವರ 'ಒಂದು ರಾತ್ರಿ' ಕಳೆದುಹೋಗುತ್ತದೆ (ಅದೂ ಕೂಡ ೪೩೨ ಕೋಟಿ ವರ್ಷಗಳು). ಹೀಗೆ ಹಗಲು ಮತ್ತು ರಾತ್ರಿ ಎರಡನ್ನೂ ಸೇರಿಸಿದರೆ ಚತುರ್ಮುಖ ಬ್ರಹ್ಮದೇವರಿಗೆ 'ಒಂದು ನಿಜವಾದ ದಿವಸ' ಆಗುತ್ತದೆ. ಅದರ ಒಟ್ಟು ಮೊತ್ತ ೮೬೪ ಕೋಟಿ ವರ್ಷಗಳು. ಸಾಕಾರಮೂರ್ತಿಯಾದ ಶ್ರೀ ವಿಜಯವಿಠಲನು ಲೌಕಿಕ ಮಾನದಲ್ಲಿ ಇಷ್ಟೊಂದು ದೀರ್ಘವಾದ ಕಾಲವನ್ನು ಸೃಷ್ಟಿಸಿದ್ದಾನೆ.
೪. ಝಂಪಿತಾಳ (ಮನ್ವಂತರಗಳ ಮತ್ತು ಮನುಗಳ ಆಳ್ವಿಕೆಯ ನಿಖರ ಲೆಕ್ಕ)
ಅರ್ಥ: ಬ್ರಹ್ಮದೇವರ ಒಂದು ಹಗಲಿನಲ್ಲಿ ೧೪ ಮನುಗಳು (ಚತುರ್ದಶ ಮನುಗಳು) ಬಂದು ತಮ್ಮ ತಮ್ಮ ಅಧಿಕಾರದ ಪದವಿಯನ್ನು ಪ್ರತ್ಯೇಕವಾಗಿ ಅನುಭವಿಸಿ ಹೋಗುತ್ತಾರೆ. ಒಬ್ಬ ಮನುವಿನ ಆಳ್ವಿಕೆಯ ಕಾಲಕ್ಕೆ 'ಮನ್ವಂತರ' ಎನ್ನಲಾಗುತ್ತದೆ.
ಒಬ್ಬ ಮನುವಿನ ಕಾಲಾವಧಿ ೭೧ ಮಹಾಯುಗಗಳು ಮತ್ತು ಅದರ ಮೇಲಿನ ಕೆಲವು ವರ್ಷಗಳು. ಒಂದು ಮಹಾಯುಗದ ಲೆಕ್ಕ ೪೩,೨೦,೦೦೦ ವರ್ಷಗಳು. ಇದನ್ನು ೭೧ ರಿಂದ ಗುಣಿಸಿದರೆ ೩೦,೬೭,೨೦,೦೦೦ (ಮೂವತ್ತು ಕೋಟಿ ಅರವತ್ತೇಳು ಲಕ್ಷ ಇಪ್ಪತ್ತು ಸಾವಿರ) ವರ್ಷಗಳಾಗುತ್ತವೆ.
೧೪ ಮನುಗಳಿಗೆ ಹಂಚಿಕೆ ಮಾಡಿದಾಗ ಒಟ್ಟು ೯೯೪ ಮಹಾಯುಗಗಳಾಗುತ್ತವೆ (೧೪ × ೭೧). ಉಳಿದ ೬ ಮಹಾಯುಗಗಳ ಕಾಲವನ್ನು (ಒಟ್ಟು ೧೦೦೦ ಯುಗಗಳು ಪೂರ್ಣಗೊಳಿಸಲು) ಮನುಗಳ ಮಧ್ಯದ ಸಂಧಿಕಾಲಗಳಾಗಿ ಹಂಚಲಾಗುತ್ತದೆ.
ಒಬ್ಬ ಮನುವಿನ ನಿಖರ ಆಯುಷ್ಯದ ಲೆಕ್ಕ: ೩೦,೮೫,೭೧೪೨೮ ವರ್ಷಗಳು, ೬ ತಿಂಗಳು, ೨೫ ದಿನಗಳು, ೧೭ ತಾಸುಗಳು, ೫ ಲಘು, ೫ ಕಾಷ್ಟ ಮತ್ತು ೩ ಕ್ಷಣಗಳು. ಇಷ್ಟು ಕಾಲ ಒಬ್ಬೊಬ್ಬ ಮನುವು ಈ ಭೂಮಿಯನ್ನು ಆಳುತ್ತಾನೆ. ಜನನ-ಮರಣ ರಹಿತನಾದ ವಿಜಯವಿಠಲನೇ ಆಯಾ ಮನುಗಳ ಅಂತರಂಗದಲ್ಲಿದ್ದುಕೊಂಡು ಮೂರು ಲೋಕಗಳನ್ನು ಆಳುತ್ತಿದ್ದಾನೆ.
೫. ತ್ರಿವಿಡತಾಳ (೧೪ ಮನುಗಳ ಸಂಧಿಕಾಲದ ವಿವರಣೆ)
ಅರ್ಥ: ಸ್ವಾಯಂಭುವ ಮನು ಮೊದಲಾದ ೧೪ ಮನುಗಳು ಇದ್ದಾರೆ. ಇವರ ಆಳ್ವಿಕೆಯ ನಡುವೆ ಬರುವ 'ಸಂಧಿಕಾಲ'ಗಳ (ವಿರಾಮದ ಕಾಲ) ಲೆಕ್ಕವನ್ನು ಜ್ಞಾನಿಗಳು ವಿವರಿಸಿದ್ದಾರೆ. ಇದನ್ನು ಸ್ಮರಿಸುವುದು ಪುಣ್ಯಕರ.
ಮೊದಲನೇ ಮನುವಾದ ಸ್ವಾಯಂಭುವ ಮನುವಿನ ಸಂಧಿಕಾಲ: ೨,೦೦೦ ವರ್ಷಗಳು.
ಮುಂದಿನ ಐದು ಮನುಗಳ (ಸ್ವಾರೋಚಿಷ, ಉತ್ತಮಿ, ತಾಮಸ, ರೈವತ, ಚಾಕ್ಷುಷ) ಸಂಧಿಕಾಲ: ತಲಾ ೧,೪೦೦ ವರ್ಷಗಳಂತೆ ಒಟ್ಟು ೭,೦೦೦ ವರ್ಷಗಳು (೧೪೦೦ × ೫).
ಉಳಿದ ಎಂಟು ಮನುಗಳ (ವೈವಸ್ವತ ಇತ್ಯಾದಿ) ಸಂಧಿಕಾಲ: ತಲಾ ೧,೫೦೦ ವರ್ಷಗಳಂತೆ ಒಟ್ಟು ೧೨,೦೦೦ ವರ್ಷಗಳು (೧೫೦೦ × ೮).
ಹೀಗೆ ೧೪ ಮನುಗಳ ಒಟ್ಟು ಸಂಧಿಕಾಲದ ವರ್ಷಗಳು: ೨೧,೦೦೦ (ಇಪ್ಪತ್ತೊಂದು ಸಾವಿರ) ವರ್ಷಗಳು. ನನ್ನ ಹೃದಯದಲ್ಲಿ ನೆಲೆಸಿರುವ ಮದನಜನಕನಾದ ವಿಜಯವಿಠಲನು ಪ್ರೇರಿಸಿದಂತೆ ಈ ಕಾಲದ ವಿವರವನ್ನು ನಿಶ್ಚಯಿಸಲಾಗಿದೆ.
೬. ಅಟ್ಟತಾಳ (ಬ್ರಹ್ಮದೇವರ ವರ್ಷ ಮತ್ತು ಮಹಾಪ್ರಲಯದ ಲೆಕ್ಕ)
ಅರ್ಥ: ಹೀಗೆ ಸಾವಿರ ಮಹಾಯುಗಗಳು ಉರುಳಿದಾಗ ಬ್ರಹ್ಮದೇವರಿಗೆ ಒಂದು ಹಗಲು-ರಾತ್ರಿ ಮುಗಿಯುತ್ತದೆ. ಮುಂದೆ ಲೆಕ್ಕ ಹಾಕಿದರೆ, ಬ್ರಹ್ಮದೇವರ ಒಂದು ತಿಂಗಳಿಗೆ ೨೫,೯೨,೦೦,೦೦,೦೦೦ (ಎರಡು ಅರ್ಬುದ ಐನೂರ ತೊಂಬತ್ತೆರಡು ಕೋಟಿ) ವರ್ಷಗಳಾಗುತ್ತವೆ. ಇಂತಹ ೧೨ ತಿಂಗಳುಗಳು ಸೇರಿದರೆ ಬ್ರಹ್ಮದೇವರಿಗೆ ಒಂದು ವರ್ಷ. ಈ ಲೆಕ್ಕದ ಪ್ರಕಾರ ಬ್ರಹ್ಮದೇವರಿಗೆ ನೂರು ವರ್ಷಗಳು ತುಂಬಿದಾಗ ಅವರ ಆಯುಷ್ಯ ಮುಗಿಯುತ್ತದೆ (ಮಹಾಪ್ರಲಯ).
ಅಲ್ಲಿಯವರೆಗೆ ಸಾಕ್ಷಾತ್ ಶ್ರೀಹರಿಯು (ರಂಗ) ಆಲದ ಎಲೆಯ ಮೇಲೆ ಮಲಗಿ (ವಟಪತ್ರಶಯನ), ಲಕ್ಷ್ಮೀಸಹಿತನಾಗಿ ಇಡೀ ಬ್ರಹ್ಮಾಂಡವನ್ನು ತನ್ನೊಳಗೆ ಇಟ್ಟುಕೊಂಡಿರುತ್ತಾನೆ. ಹರಿಯ ಈ ಸರ್ವತಂತ್ರ ಸ್ವತಂತ್ರ ಶಕ್ತಿಯನ್ನು ವರ್ಣಿಸಲು ಯಾರಿಗೆ ಸಾಧ್ಯ? ಚಿಂತಿಸಿದ ಫಲವನ್ನು ನೀಡುವ ವಿಜಯವಿಠಲನೇ ಹಿಂದಿನ ಬ್ರಹ್ಮದೇವರಿಗೂ ಇದೇ ರೀತಿ ಆಯುಷ್ಯವನ್ನು ಕರುಣಿಸಿ ಮುಕ್ತಿ ನೀಡಿದ್ದನು.
೭. ಆದಿತಾಳ (ಕಾಲಸ್ವರೂಪಿ ಶ್ರೀಹರಿಯ ಮಹಿಮೆ)
ಅರ್ಥ: ಸಾಕ್ಷಾತ್ ವಿಷ್ಣುವು ಕಾಲಾತೀತನಾಗಿದ್ದಾನೆ. ಆತನೇ ಸೂಕ್ಷ್ಮಾತಿಸೂಕ್ಷ್ಮ ಹಾಗೂ ಬೃಹತ್ ರೂಪಿಯಾಗಿದ್ದಾನೆ. ಅನಾದಿಕಾಲದಿಂದಲೂ ಆತನೇ 'ಕಾಲ' ಎಂಬ ಹೆಸರಿನಿಂದ ಸಕಲ ಜೀವಿಗಳನ್ನು ಕಾಲಪಾಶವೆಂಬ ಸಂಸಾರದಲ್ಲಿ ಸಿಲುಕಿಸಿ, ಕಾಲಕಾಲಕ್ಕೆ ಜನ್ಮ-ಮರಣಗಳ ಸುಳಿಯಲ್ಲಿ ಸುತ್ತಿಸುತ್ತಿದ್ದಾನೆ. ಈ ಕಾಲಮೂರ್ತಿಯಾದ ಭಗವಂತನ ಭಯದಿಂದಲೇ ಜಗತ್ತಿನ ಸಕಲ ಚೇತನಗಳು ತಮ್ಮ ದಾರಿ ತಪ್ಪದೆ ಸನ್ಮಾರ್ಗದಲ್ಲಿ (ಸತ್ಪಥ) ನಡೆಯುತ್ತಿವೆ. ಆತನು ಕಾಲದ ಜೊತೆಗಿದ್ದರೂ ಕಾಲಕ್ಕೆ ಸಿಕ್ಕಿಹಾಕಿಕೊಳ್ಳದವನು (ಕಾಲಾತೀತನು). ಭೂತ, ವರ್ತಮಾನ, ಭವಿಷ್ಯತ್ ಎಂಬ ತ್ರಿಕಾಲಗಳ ಜ್ಞಾನವುಳ್ಳವರು ಯಾರೆಲ್ಲಾ ಇದ್ದಾರೋ, ಅವರು ಭಗವಂತನ ಅನುಗ್ರಹದಿಂದ ಕಾಲದ ಭಯವಿಲ್ಲದೆ ಸುಖವಾಗಿರುತ್ತಾರೆ. ವಾಸ್ತವದಲ್ಲಿ ಕಾಲಕ್ಕೆ ಸ್ವತಃ ಯಾವುದೇ ದೋಷವಿಲ್ಲ; ಆದರೆ ಜೀವಿಗಳ ಕರ್ಮಸಂಬಂಧದಿಂದ ಅದು ದುಷ್ಕಾಲ (ಕೆಟ್ಟ ಸಮಯ) ಅಥವಾ ಅಕಾಲ ಎಂದು ಕರೆಸಿಕೊಳ್ಳುತ್ತದೆ. ಶಿವನಿಂದ (ಕಾಲಕಂಧರ) ಕೊಂಡಾಡಲ್ಪಡುವ ವಿಜಯವಿಠಲನೇ ಸರ್ವಕಾಲಕ್ಕೂ ಗತಿಯಾಗಿದ್ದಾನೆ, ಆತನೇ ನಮ್ಮನ್ನು ಈ ಸಂಸಾರ ಭವದಿಂದ ಕಡೆಗಾಣಿಸಬೇಕು.
ಜತೆ (ಮುಕ್ತಾಯ)
ಅರ್ಥ: ಈ ಸುಗಮವಾದ ಕಾಲದ ನಿಖರ ವಿವರವನ್ನು ಅರಿತುಕೊಂಡು, ಜ್ಞಾನ ಮತ್ತು ಭಕ್ತಿಪೂರ್ವಕವಾಗಿ ಶ್ರೀ ವಿಜಯವಿಠಲರಾಯನ ಪಾದಗಳಿಗೆ ಶರಣಾಗಿ ಬದುಕನ್ನು ಧನ್ಯವಾಗಿಸಿಕೊಳ್ಳಿ.
***
This Kālākhya Suḷādi (The Hymn of Time's Calculations) composed by Sri Vijaya Dasaru (Ankita: Vijaya Vittala) is an extraordinary, highly analytical, and scriptural work. In this composition, the poet meticulously charts the Vedic concept of time, moving mathematically from the microscopic Paramanu (subatomic moment) all the way up to the cosmic 100-year lifespan of Lord Brahma.SummaryVijaya Dasaru breaks down time into precise cosmic and mathematical units. It begins with the smallest invisible instant (Paramanu) and climbs through human measurements (seconds, minutes, days, months, seasons, years) to the lifetimes of the gods. He details the vast spans of the four cosmic epochs (Yugas), explaining how 1,000 such cycles form just one daytime for Lord Brahma (equivalent to 4.32 billion human years). The text breaks down the rule of the 14 successive Manus (cosmic regents) and their transition periods (Sandhi Kalas).Ultimately, the Suḷādi teaches that while all living beings and even cosmic creators are bound and swept away by this massive wheel of time, Lord Sri Hari alone is Kālatīta (beyond time) and Kāla-niyāmaka (the controller of time). The poet urges us to surrender to Him to escape the cycle of birth and death.Section-wise Meaning1. Dhruva Tala (From the Microscopic to Human and Deva Time)Meaning: The combination of two subatomic points (Paramanus) forms an Anudvaya. Three such units make a Trasarenu—which is the smallest speck of dust visible to human eyes floating in a sunbeam through a window. Three Trasarenus equal one Truti. Three Trutis make one Vedha. Three Vedhas make one Lava. Three Lavas equal one Nimisha (the blink of an eye). Three Nimishas form a Kshana. Five Kshanas together make a Kashta. Fifteen Kashtas define a Laghu, and fifteen Laghu units make one Nadi (or Ghalige, approx. 24 minutes).About six to eight Nadis form one Yama (a watch of the day, approx. 3 hours). Four Yamas constitute a daytime, and a full set of eight Yamas makes one Vasara (a full 24-hour day and night) for human beings. Astronomers calculate this day using Tithi (lunar day), Tara (stellar constellation), Yoga, and Karana. This is the fundamental unit for all human actions, births, and rituals.Fifteen such days form one Paksha (split into the waxing Shukla and waning Krishna phases). Two Pakshas make one Masa (month). Two months form a Ritu (season), and six seasons (12 months) equal one Varsha (human year). A century (100 years) is considered the full lifespan of a human.For the unblinking gods (Animisha Tati), one entire human year is equal to just one single day and night. This geometric progression of time applies all the way up to Lord Brahma (Vanajagarbha). Our Lord Vijaya Vittala, who assumes both the smallest atomic and largest cosmic forms (Anu-mahat-rupa), is the eternal treasurer of virtues moving alongside this time wheel.2. Matta Tala (The Calculation of the Four Great Yugas)Meaning: Measured in human years, there are four great epochs (Yugas) that cycle continuously. I shall break down their specific durations chronologically:Krita Yuga (Satya Yuga): Lasts for 1,728,000 (Seventeen lakh twenty-eight thousand) years.Treta Yuga: Lasts for 1,296,000 (Twelve lakh ninety-six thousand) years.Dvapara Yuga: Lasts for 864,000 (Eight lakh sixty-four thousand) years.Kali Yuga: Lasts for 432,000 (Four lakh thirty-two thousand) years.When you combine all four of these distinct epochs together, it forms one single Maha Yuga, which spans a total of 4,320,000 (Forty-three lakh twenty thousand) human years. Our beautiful Lord Vijaya Vittala affectionately guides and names these rotating eras.3. Rupaka Tala (One Full Day of Lord Brahma)Meaning: In the measurement of the heavens (Naka-mana), one Maha Yuga passes in twelve thousand celestial years. When this massive Maha Yuga cycle rotates exactly 1,000 times on Earth, it comprises just one daytime for Lord Brahma (Lokesha). Listen closely: that is equal to 4,320,00,00,00,000 (4.32 billion) human years!When another 1,000 Maha Yuga cycles pass in the same manner, one single night passes for the lotus-seated Brahma, which also spans 4.32 billion years. Adding his day and night together, one true 24-hour day for the four-faced Brahma equals 8,640,00,00,00,000 (8.64 billion) human years. The personified supreme deity, Sri Vijaya Vittala, has structured these staggering numbers out of His sovereign will.4. Jhampita Tala (The Reign of the 14 Manus - Manvantaras)Meaning: Within one single daytime of Lord Brahma, fourteen successive cosmic regents (Manus) come to inherit, enjoy, and pass on their ruling positions. This era of a single Manu is called a Manvantara.Each individual Manu rules for exactly 71 Maha Yugas plus a fraction. Since one Maha Yuga is 4,320,000 human years, multiplying it by 71 yields a base period of 30,67,20,000 (Thirty crore sixty-seven lakh twenty thousand) years per Manu. Multiplying this base by 14 Manus accounts for 994 Maha Yugas. The remaining 6 Maha Yugas out of the 1,000-cycle day are distributed evenly as interlocking transition periods (Sandhi Kalas) between the reigns.When all structural remainders are factored in, the precise lifespan and ruling period of a single Manu stands at exactly 30,85,71,428 years, 6 months, 25 days, 17 hours, 5 Laghus, 5 Kashtas, and 3 Kshanas. Throughout this entire duration, Lord Vijaya Vittala—who is entirely free from birth and death—resides inside each Manu, governing the three worlds.5. Trividi Tala (The Transition Eras between the Manus)Meaning: Sages have charted out the Sandhi Kalas (buffer periods of rest and twilight) that occur between the rules of the 14 Manus, starting from Svayambhuva Manu. Remembering this layout grants immense spiritual merit:The transition period for the very first Manu (Svayambhuva) is 2,000 years.For the next five Manus (Svarochisha, Uttami, Tamasa, Raivata, Chakshusha), the transition period is 1,400 years each, totaling 7,000 years ($1,400 \times 5$).For the remaining eight Manus (Vaivasvata down to Indrasavarni), it is calculated at 1,500 years each, totaling 12,000 years ($1,500 \times 8$).When combined, the total interlocking transition period across all 14 changes equals 21,000 cosmic years. This precise breakdown has been verified just as Lord Vijaya Vittala, the father of Cupid, prompted within my heart.6. Atta Tala (Brahma's Year and the Cosmic Dissolution)Meaning: When 1,000 Maha Yugas spin, a single day and night of Brahma finishes. Moving further up the calendar, one single month for Brahma equals 2,592,00,00,00,000 (25.92 billion) human years. Twelve such months make one cosmic year, and Brahma lives for 100 such years.When those 100 years conclude, a total cosmic dissolution (Maha Pralaya) occurs. During this period, Lord Sri Hari (Ranga) withdraws the entire creation into Himself and rests peacefully upon a floating banyan leaf (Vatapatra-shayana) alongside Goddess Lakshmi. Who can possibly describe the absolute, independent power of Hari? He granted this exact same liberation to the Brahmas of past cosmic cycles as well.7. Adi Tala (The Supreme Lord of Time)Meaning: Lord Vishnu is entirely beyond time (Kalatita); yet He acts as the prime mover of time. Existing since before the dawn of creation, He assumes the name of Kala (Time) to bind ordinary souls to worldly life using the noose of time, spinning them continuously through the cycles of birth and death. Out of sheer fear of this Time-Personified Lord, all living elements follow their natural trajectories without crossing their boundaries. He moves alongside time, yet He is never caught or affected by it.Those who look past material life and understand the Lord of the past, present, and future become true seers (Kalajnanis)—they live joyfully in any physical body without the fear of death. Time itself possesses no inherent evil or defect; it is only based on a soul's specific karmic alignment that periods are labeled as "dark times" (Dushkala) or "untimely moments" (Akala). Lord Vijaya Vittala, praised by the blue-throated Shiva, is the ultimate refuge across all eras. May He liberate us from this material ocean.Jate (Conclusion)Meaning: Understand these intricate calculations of time, bow down to the feet of Lord Vijaya Vittala, and elevate your life through pure knowledge and devotion.
***
No comments:
Post a Comment