Sunday, 5 September 2021

ಜನನ ಮರಣ ಎರಡು ಇಲ್ಲವೊ ತಾ ತಿಳಿದ ಮೇಲೆ ankita tulasiramadasa

 ಚನ್ನಪಟ್ಟಣದ ಅಹೋಬಲದಾಸರು

ಜನನ ಮರಣ ಎರಡು ಇಲ್ಲವೊ ತಾ ತಿಳಿದ ಮೇಲೆ ಪ 


ಮನದೊಳಿರುವ ಮಮತೆ ಅಳಿದು ಘನವಿವೇಕವಾಗಿ ಕಾಣುವ ಇನಕುಲೇಶನನ್ನು ಬಿಡದೆಅನುರಾಗದೊಳು ಭಜಿಸಿದವಗೆ ಅ.ಪ ಆರುಮೂರು ಮೀರಿ ನೋಡೆಲೈ ಅಲ್ಲಿರುವ ತಾರಕದಾರಿ ಪ್ರಣವ ಸಾರುತಿದೆ ನೋಡೈ ಘೋರ ಕತ್ತಲೆಯನರಿದು ಮಾರಜನಕನನ್ನು ನೆನೆದು ಏರಿ ಶಿಖರದೊಳಗೆಯಿರುವ ತೇರು ಕಂಡುಬಂದಬಳಿಕ 1 

ದಾನವಾರಿಯನ್ನು ಕಾಣೆಲೊ ಶ್ರೀಪರಮ ಚರಿತ ಗಾನಲೋಲನನ್ನು ಕಾಣೆಲೈ ಭಾನುಕೋಟಿರೂಪನಹುದು ಗುರುವು ತುಲಸಿರಾಮದಾಸ ದೀನರಕ್ಷಕನೆಂದು ಭಜನೆ ಮಾಡಿಕೊಂಡು ಬಂದಬಳಿಕ 2

***


No comments:

Post a Comment