Monday, 6 September 2021

ಬಂದನಿಂದು ಕಣ್ಣಮುಂದೆ ರಾಘವೇಂದ್ರನು ankita seetarama vittala

 ರಾಗ: ವಸಂತ ತಾಳ: ಏಕ


ಬಂದನಿಂದು ಕಣ್ಣಮುಂದೆ ರಾಘವೇಂದ್ರನು 

ತಂದು ಶುಭವ ಭೂರಿಸುಖವ ಸುಮ್ಮುನೀಂದ್ರನು


ಶೀಲಮೂರ್ತಿ ನಾರಸಿಂಹದೇವನೆದುರಲಿ 

ಬಾಲನಾಗಿ ನಿಂದು ರೂಪ ನೋಡಿ ಮೆರೆದನು

ಲೋಲಕೃಷ್ಣ ಮುಂದೆ ಕುಣಿಯೆ ಸಾಲಿಗ್ರಾಮವ 

ತಾಳಮಾಡಿ ನೋಡಿ ನಲಿದ ಯತಿಯು ಬಂದನು 2

ಎರಡು ರಾಜ್ಯವಾಳಿ ಮೆರೆದ ರಾಯ ಬಂದನು

ಎರಡು ವೃಂದಾವನದಿ ಇರುವ ಸ್ವಾಮಿ ಬಂದನು 3

ತಂಪತೋರಿ ಕಂಪಬೀರಿ ಮನವನರಳಿಸಿ

ಸಂಪದವನಿತ್ತು ಹರಸಿ ಕಾಯಬಂದನು 4

ದಾತಸೀತಾರಾಮವಿಠಲನ ಭಜಕನು

ಪ್ರೀತನಾಗಿ ಬಂದು ನಿಂದ ರಾಘವೇಂದ್ರನು 5

***


ಎರಡು ರಾಜ್ಯ=ವಿಜಯನಗರ ಮತ್ತು 

ವಿದ್ಯಾಸಾಮ್ರಾಜ್ಯಗಳಿರಬಹುದು; ಎರಡು 

ವೃಂದಾವನ=ನವವೃಂದಾವನದಲ್ಲಿರುವ 

ಮತ್ತು ಮಂತ್ರಾಲಯದಲ್ಲಿರುವ ಬೃಂದಾವನಗಳಿರಬಹುದು;

No comments:

Post a Comment