Wednesday, 1 September 2021

ಮೃಡದೇವ ಭವ್ಯ ಸ್ವರೂಪ ಜಡೇಂದ್ರ ಗುರು ಜಿತಕೋಪ ankita shyamasundara

 ..

ಮೃಡದೇವ ಭವ್ಯ ಸ್ವರೂಪ ಜಡೇಂದ್ರ | ಗುರು ಜಿತಕೋಪ ಪ


ಭಸಿತ ವಿಭೂಷಿತ ಪರ ಉಪಕಾರಿ

ಅಸಮ ಸುಗುಣ ಗಂಭೀರ ಉದಾರಿ

ಎಸೆವ ರುದ್ರಾಕ್ಷಿ ಸುಮಾಲಾಧಾರಿ 1


ದೀನ ಜನಾಭಿಮಾನ ಸಂಪ್ರೀತ

ಮಾನಿತ ನಿರ್ಮಲ ಹೃದಯ ದಯಾನ್ವಿತ

ಧ್ಯಾನಿತ ಹರಿಪದ ಮಾನಸÀ ನಿಜ 2


ಗ್ರಾಮ ಬಲ್ಲಟಗಿ ಶಿವಮಠಾಧೀಶ

ಪಾಮರ ಜನರಘು ಗರ್ವವಿನಾಶ

ಶಾಮಸುಂದರ ಸಖ ಸ್ವಾಮಿ ಚಿನ್ಮಯ ಕೈಲಾಸವಾಸ 3

***


No comments:

Post a Comment