ಕಾಖಂಡಕಿ ಶ್ರೀ ಮಹಿಪತಿರಾಯರು
ಒಂದೆ ಸುಪಥವೆ ಲೇಸು ಸದ್ಗುರು ಭಕುತಿಗೆ p
ಪಿಡಿದರೆ ದೃಢ ಗುರುಭಕುತಿ ಸಾಕು ಷಡದರುಷಣ ಗೂಢವ್ಯಾತಕೆ ಬೇಕು ನಡಿನುಡಿಯಲಿ ನಿಜ ಭೇದಿಸಬೇಕು ಪಡಕೊಂಡರೆ ಬಾಹುದು ಘನಥೋಕÁ 1
ಒಂದರಿಯದೆ ನಿಜದೋರುದು ಖೂನ ಸಂದಿಸಿ ಬೆರೆವುದು ಮನ ಚಿದ್ಛನ ತಂದೆ ಸದ್ಗುರು ದಯದನುಸಂಧಾನ ಎಂದೆಂದಿಗೆ ಅದ ತಾ ನಿಧಾನ 2
ಒಂದಾಗುದೆ ನಿಜಗುರು ದಯಕರುಣ ವಂದಿಸಿ ನೋಡಬೇಕಿದೆ ಘನಸ್ಫುರಣ ಹೊಂದಿ ಬದುಕಿರೊ ಮಹಿಪತಿಗುರುಚರಣ ಚಂದವಿದೆ ಇಹಪರ ಭೂಷಣ 3
***
No comments:
Post a Comment