..
ಬೆಳಗೋಣು ಹರಿಗೆ ಆರುತಿಯ | ಸಂಗೀತಹಾಡಿ ಪಾಡಿ
ನಲುವಿಂದ ಬೇಗ ಬಾರೆ ನಳಿನಾಕ್ಷಿ ಬಾ ಪ
ಬಾಲೆ ಶೀಲೆ ದ್ರೌಪದಿ ಭಕುತಿಲಿ ಧ್ಯಾನಿಸಿ ಧೇನಿಸಿ
ಕೇಳಿ ಅಕ್ಷಯಶಾಲಿ ಗರೆದ ದೇವ ದೇವಗೆ ||
ಶೈಲವನೆತ್ತಿದಾತಗೆ | ಗೋಪಗೆ | ಬಹುರೂಪನಿಗೆ |
ಶೃಂಗಾರ ಸುಗುಣಾಂಬುಧಿಗೆ ಜಯಶುಭ ಮಂಗಳೆಂದು 1
ದೀನೋದ್ಧಾರಿ ಧೇನುಕ ಮಾತುವೈರಿಗೆ | ಶೌರಿಗೆ |
ವೇಣುನೂದುತ ಗೋವ್ಗಳ ಸಲುಹಿದಾತಗೆ ನಾಥಗೆ |
ಶ್ರೀನಿಧಿ ಚಕ್ರಪಾಣಿಗೆ ರಂಗಗೆ ಯದುಪುಂಗವಗೆ
ಮಂದರ ಕರುಣಾತರಗೆ 2
ಭಾಸುರ ಶಾಮಸುಂದರವಿಠಲ ಸ್ವಾಮಿಗೆ | ಪ್ರೇಮಿಗೆ |
ವಾಸವಾತ್ಮಜಗೆ ಒಲಿದು ಧುರದೊಳು ಕಾಯ್ದಗೆ ಶ್ರೀದಗೆ ||
ವಾಸುಕಿತಲ್ವಶಾಯಿಗೆ | ಗೋಪಗೆ | ಬಹುರೂಪನಿಗೆ |
ದಾಸರ ಒಡನಾಡುವಗೆ | ಜಯಶುಭ ಮಂಗಳೆಂದು 3
***
No comments:
Post a Comment