Wednesday, 1 September 2021

ಹೊಂದಿ ಬದುಕಿರೋ ಮನವೆ ಇಂದಿರೇಶನ ಎಂದೆಂದಗಲದೆ ದ್ವಂದ್ವ ankita mahipati

 ಹೊಂದಿ ಬದುಕಿರೋ ಮನವೆ ಇಂದಿರೇಶನ ಎಂದೆಂದಗಲದೆ ದ್ವಂದ್ವ ಶ್ರೀಪಾದವ ಹೊಂದಿ ಸುಖಿಯಾಗೋ ತಂದೆ ಸರ್ವೇಶನ pa 


ಮುಚ್ಚಿಕೊಂಡು ಮುಕುತಿ ಸಾಧನ ಹುಚ್ಚುಗೊಂಡು ಸಚ್ಚಿದಾನಂದನ ಬಚ್ಚಿಟ್ಟುಕೊಂಡು ನಿಜ ನೆಚ್ಚಿಕೊಂಡಿರೋ ನೀ ಅಚ್ಯುತಾನಂತನ 1 

ಹರಿಚರಣ ಕಮಲವ ಕಂಡು ಹರಿನಿಜಧ್ಯಾನ ನೆಲೆಗೊಂಡು ಹರಿಕರುಣವ ಪಡಕೊಂಡು ಹರಿನಾಮಾಮೃತ ಸವಿದುಂಡು 2 

ಶ್ರೀಹರಿಸೇವೆ ಮಾಡಿಕೊಂಡು ಇಹಪರ ಸುಖ ಸೂರೆಗೊಂಡು ಬಾಹ್ಯಾಂತ್ರಪೂರ್ಣ ಮನಗಂಡು ಮಹಿಪತಿ ಸ್ವಾಮಿ ವಾಲ್ವೈಸಿಕೊಂಡು 3

***


No comments:

Post a Comment