..
kruti by ವರದೇಶ ವಿಠಲರು varadesha vittala dasaru
ಶಂಭೋಶಿವಹರ ತ್ರಿಯಂಬಕ ಶ್ರೀಜಗ -
ದಂಬಾರಮಣ ಪರಿಪಾಲಯಾ ಪ
ಅಜಿನಾಂಬರಧರ ಭಜಿಪರಾರ್ತಿಹರ
ತ್ರಿಜಗಪಾವನ ಗಂಗಾಧರ1
ನಂದಿವಾಹನ ಸುರವೃಂದ ಸುಪೂಜಿತ
ಇಂದ್ರ ವಂದಿತ ಗರಕಂಧರ 2
ರುಂಡಮಾಲಧರ ಶÀುಂಡಾಲಮದಹರ
ಚಂಡವಿಕ್ರಮ ಉಗ್ರೇಶ್ವರ 3
ದಕ್ಷಾಧ್ವರ ಹರದುಷ್ಟಶಿಕ್ಷಕ ವಿರೂ -
ಪಾಕ್ಷನೆ ವೈರಾಗ್ಯನಿಧೆ 4
ವಾಮದೇವನೆ ಭಕ್ತಾಕಾಮಿತ ಫಲದನೆ
ಕಾಮಸಂಹರ ಕರುಣಾಕರ 5
ಮೃತ್ಯುಂಜಯನೆ ಯನ್ನಪಮೃಹಾರಕಹರಿ
ಭಕ್ತಾಗ್ರೇಸರ ಶಿವಶಂಕರ 6
ರಾಮನಾಮಲೋಲ ತಾಮಸಖಳಕಾಲ
ಧಿಮಂತಜನ ಪರಿಪಾಲಕ 7
ಗಿರಿಜಾರಮಣ ನಿನ್ನ ಗುರುವೆಂದು ಮೊರೆಹೊಕ್ಕೆ
ಹರಿಭಕ್ತಿಯಲ್ಲಿ ಮನನಿಲ್ಲಿಸೋ 8
ನಂಬಿದೆ ನಿನ್ನ ಪಾದಾಂಬುಜ ಯುಗಳ ಹೇ
ರಂಭಜನಕ ಪೊರಿಯನ್ನನು9
ರಜತಾಚಲನಿವಾಸ ರಜನಿಚರ ವಿನಾಶ
ಅಜನಸುತನೆ ದಿಗಂಬರ 10
ಸರ್ವಶ್ರೀ ವರದೇಶವಿಠಲನ ಸಖ ಮು -
ಪ್ಪುರಹರ ಶ್ರೀ ಮಹಾದೇವ 11
***
No comments:
Post a Comment