Sunday, 1 August 2021

ಮನವೆ ನಿನ್ನಯ ನಿಜಮೂಲ ನೀನೋಡು ankita shanti

 ..


kruti by shantibai dasaru ಶಾಂತಿಬಾಯಿ ದಾಸರು


ಮನವೇ ನಿನ್ನಯ ನಿಜಮೂಲ ನೀನೋಡು

ಸಮರಸವನೆಗೂಡು || ಚಾಲ ||

ವಿಷಯವಾಸನೆಗಳ ನಿಶಿದು ಹೋಗಲಿ ಕುಳ

ಅಸಮ ಸಾಹಸಿಯಾಗಿ ನಿಜಸುಖದೊಳಗೆ ಪ


ಹಿಂದೆ ಬಹು ಜನ್ಮದೊಳು ನೀ ತೊಳಲಿ ವಾಸನೆಯೊಳು ಬಳಲಿ

ಇಂದೆ ನೀ ಬಂದೆ ನರಜನ್ಮದಲಿ ಎಚ್ಚರು ನಿನಗಿರಲಿ

ಮುಂದೆ ಸಿಕ್ಕುವ ನಿಜವಿಲ್ಲದರಲ್ಲಿ ಆ ನಿಮಿತ್ಯದಲೀ

ಸಂದೇಹಂಗಳ ಬಿಟ್ಟು ಸತ್ಪುರುಷರ ಹೊಂದಿ

ನಿಜದೊಳತಿ ಛಂದದಿ ನಿಲ್ಲೈ 1


ಗುರುಪಾದ ಕಮಲದ ಸೇವೆಯ ಮಾಡಿ ಇಷ್ಟಾರ್ಥವ ಬೇಡಿ

ದೃಢದೀ ಅದರಲ್ಲಿ ನಲಿನಲಿಹಾಡಿ ಸತ್ ಶಬ್ದವ ಗೂಡಿ

ಬಿಡದೇ ನಡುಮಾರ್ಗದಿಂ ಮುಂದೊಡೊ

ಮೂಧ್ರ್ನಿಯಲಿ ಲೋಲ್ಯಾಡಿ

ಸದಮಲ ನಿಜಸುಖ ಅದರಲಿ ನಿಲ್ಲುತ ಚದಲದೆ

ದೃಢತರವದಗಿ ನಿರಂತರ 2


ಭಕ್ತಿಭಾವವನೆ ದೃಢಮಾಡು ಸದ್ಧರ್ಮವಗೂಡು

ಯುಕ್ತಿಯಿಂದಲೀ ಸಾಧನೆಮಾಡು ಗುರುಪದದೊಳಗಾಡು ವಿ

ರಕ್ತಿ ನಿಜವಾಗಿ ಹುರಿಯನೆ ಮಾಡು ಸತ್ಸಂಗದೊಳಾಡು

ಸತ್ತನಾಗಿ ತೇಜೋಕ್ತ ಸದ್ಗುರು ವಚನೋಕ್ತಿಯಿಂದಲಿ

ಅನುರಕ್ತನಾಗಿ ನಿಜ 3


ಕಾಷ್ಠದೊಳಗಿಂದಾ ಅಗ್ನಿಯ ಪುಟ್ಟು ಕಾಷ್ಠವನೆ ಸುಟ್ಟು

ಉತ್ಕøಷ್ಟ ಚಿತ್ತವನೆ ಪುಟವಿಟ್ಟು ಜಡಭಾವನೆ ಬಿಟ್ಟು

ಥಟ್ಟನೇ ಜ್ಞಾನಾಗ್ನಿ ಪುಟವಿಟ್ಟು ಕ್ಷಡ್ರಿಪುಗಳ ಸುಟ್ಟು

ಶ್ರೇಷ್ಟ ಚಿಜ್ಯೋತಿಯಿಂದೆಸೆವ ನಾರಾಯಣ ದಿಟ್ಟ

ಸದ್ಗುರುವಿನೊಳ್ ಇಟ್ಟ ಶಾಂತಿ ನಿಜ 4

***


No comments:

Post a Comment