Sunday 1 August 2021

ಯಾವಾಗಲೂ ನಿನ್ನ ಸೇವೆಯೊಳಿರುವಂತೆ ಕಾವುದೆನ್ನಯ ನಿಜದೀ ಕೃಪಾನಿಧೇ ankita shanti

 ..

kruti by shantibai dasaru ಶಾಂತಿಬಾಯಿ ದಾಸರು


ಯಾವಾಗಲೂ ನಿನ್ನ ಸೇವೆಯೊಳಿರುವಂತೆ

ಕಾವುದೆನ್ನಯ ನಿಜದೀ ಕೃಪಾನಿಧೇ

ಈ ಪರಿಯಿಂದನಾ ಭಾರಿ ಭವದಿ ನೊಂದೆ

ತೋರೋ ನಿನ್ನಯ ಚರಣಾ ನಾರಾಯಣ ಪ


ಆಶಾಪಾಶದಲಿ ನಾ ಘಾಸಿಯಾದೆನು ದೇವಾ

ವಾಸನೆಯೊಳು ತೊಳಲಿ ಬಹು ಬಳಲಿ

ವಾಸುದೇವನೆ ನಿನ್ನ ಪಾದದೊಳಗೆನ್ನಯ

ಬೇಸರದಲೆ ರಕ್ಷಿಸೋ ನಿಜಪಾಲಿಸೋ 1


ನೀರಮೇಲಿನ ಗುಳ್ಳೆಯಂತೆ ತೋರುವ ಕಾಯ

ಸೇರಿ ನಂಬಿದೆ ಭರದಿ ಬಹು ವಿಧದಿ

ದೂರನಾದೆನು ನಿಜದರಿವುನಾನರಿಯದೇ

ಸೇರಿಸೊ ನಿಜ ಸುಖದಿ ಪ್ರಬೋಧದಿ 2


ನಂಬಿದವರ ಕಾಯ್ವ ಸಂಭ್ರಮ ಪೊತ್ತವ

ಶಂಭು ಶಂಕರ ಪ್ರಿಯನೇ ಸರ್ವೇಶನೇ

ಇಂಬು ದೋರೆನ್ನಾ ಚಿದಂಬರ ನಿಜಪದ

ನಂಬಿ ನಿಲ್ಲುವ ತೆರದಿ ಸದೃಢದೀ 3


ತತ್ವಮಸಿ ಮಹಾ ವಾಕ್ಯವ ಶೋಧಿಸಿ

ನಿಸ್ತರಿಸುವ ಭವವಾ ಉಪಾಯವಾ

ಚಿತ್ತಚೈತನ್ಯವಾಗಿ ನಿತ್ಯಶಾಂತಿಸ್ವಸುಖ

ಸತ್ಯ ಸದ್ಗುರು ಸ್ವಾನಂದಾ ಸಹಜಾನಂದಾ4


ಕಡಹದಾ ಮರನೇರಿ ಮಡುವಾ ಧುಮ್ಮಿಕೃಇದ್ಯೋ

ಪಿಡಿದು ಕಾಳಿಂಗನಾ ಹೆಡೆ ಕುಳಿದು ಕುಣಿದ್ಯೋ

ಸಡಗರದಿಂದಲಿ ಮಾತೆಯ ತೊಡೆಯ ಮೇಲೆ ಬಂದು ಕುಳಿತೆ5


ದುರುಳ ದುಷ್ಟರ ಶಿರವ ಶರದಿಂದಾ ಕಡಿದೆಯೊ

ಶರಣ ಬಂದ ದೀನರನು ಸಲಹಿದೆಯೊ

ಪರಮ ಪುರುಷನೇ ನಿನ್ನ ಸ್ಮರಣೆಯೊಳಿರಿಸೆನ್ನಾ 6


ಅನ್ಯಾಯದಲಿ ಕುರುಪತಿಯ ಮಡುಹಿದೆಯೊ

ಕರ್ಣನ ಕಂಠವ ಕತ್ತರಿಸಿದೆಯೊ

ಧನ್ಯಧರ್ಮಾರ್ಜುನರ ಶಿರವಾ ಸನ್ಮತದಿಂದಲಿ ಕಾಯ್ದೆ 7


ಪುಂಡಲೀಕನ ಭಕ್ತಿಗೆ ಮೆಚ್ಚಿ

ಪಂಡರಪುರದಲ್ಲಿ ನಿಂತೆನಿ ಹೆಚ್ಚಿ

ತಂಡತಂಡದಲ್ಲಿ ಬರುವ ಹಿಂಡುಭಕ್ತರುಗಳ ಕೂಡುವ 8


ಅಂತರದೊಳಗೆನ್ನಾ ಕಂತು ನಾರಾಯಣ

ಶಾಂತಿ ಪದದಲಿ ವಿಶ್ರಾಂತಿಯ ಕೊಟ್ಟಿನ್ನಾ

ಭ್ರಾಂತಿಗಳನೆಲ್ಲ ತೋರಿಸಿ ಸಂತ ಸಂಗದೊಳಿರಿಸೆನ್ನಾ 9

***


No comments:

Post a Comment