Thursday, 5 August 2021

ದಯಮಾಡಿ ಬಾರೆನ್ನ ಗುರುವೇ ಮಂತ್ರಾಲಯ ಪ್ರಭುವೇ ankita raghavendra

 ..

kruti by radhabai

ದಯಮಾಡಿ ಬಾರೆನ್ನ ಗುರುವೇ ಮಂತ್ರಾಲಯ ಪ್ರಭುವೇ ಪ


ಧರೆಯೊಳು ಸುಜನರಾ ಪೊರೆಯಲೋಸುಗ ನೀನು

ವರ ಮಂತ್ರಾಲಯದೊಳು ಬಂದು ನಿಂದಿಹೆ ಗುರುವೇ 1

ಬಹು ವಿಧದಲಿ ನಿನ್ನ ಮಹಿಮೆಗಳ ಕೇಳೀ

ದೇಶ ದೇಶದಿ ಜನರು ಬಂದು ಕಾದಿಹರೋ2

ಕರೆದಾರೆ ಬರುವಂಥ ಕರುಣಸಾಗರ ನೀನು

ಪರಿ ಪರಿಸ್ತುತಿಸುವೆ ಕಾರುಣ್ಯ ಮೂರ್ತಿಯೆ 3

ಬೇಡಿದಳಾ ವರಗಳ ಕೊಡುವ ನೀನೆನುತಲಿ

ಧೃಡ ಭಕುತಿಯೊಳು ನಿನ್ನಡಿಗಳ ಸೇವಿ ಸುವರೋ 4

ಹಗಲು ಇರುಳು ನಿನ್ನ ಬಿಡದೆ ಸ್ತುತಿಸುವಂತೆ

ಮತಿಯ ಪಾಲಿಪುದು - ಶ್ರೀ ಗುರುರಾಘವೇಂದ್ರಾ 5

***


No comments:

Post a Comment