Thursday, 5 August 2021

ದಯಮಾಡೋ ಗುರುವೇ ದಯ ಮಾಡೋ ankita raghavendra

 ..

kruti by radhabai

ದಯ ಮಾಡೋ ಗುರುವೇ ದಯ ಮಾಡೋ ಪ


ದಯ ಮಾಡೋ ಗುರುವೇ ನಿನಗೆದುರಾರೀ ಧರೆಯೊಳಗೆ

ಸದಮಲ ಮೂರುತೀ ಶ್ರೀ ರಾಗವೇಂದ್ರಾ ಅ.ಪ


ಭಕ್ತರ ಪೊರೆಯಬೇಕೆಂಬೀಕಾರಣದಿಂದ ಸಿದ್ಧ ಹಸ್ತಾನಾಗಿ

ಬಂದು ನಿಂತಿರುವೇ ಕಂಡ ಕಂಡಾ ದೈವಂಗಳ ಪೂಜಿಸಿ

ಪರಿಪರಿಸ್ತುತಿಸುತ ಬಳಲಿ ಬೆಂಡಾದೆನೈ ಸದ್ಗುರುವೇ 1

ನಿರುತ ನಿನ್ನಡಿಗಳಬಿಡದೆ ಸೇವಿಸುವಂಥ ಧೃಡ

ಭಕ್ತಿಯಾ ಲಿಟ್ಟು

ಸಲಹು ಸದ್ಗುರುವೇ ಮಂದಾಮತಿಯುನಾನು |

ಮಾಡಿದಪರಾಧಂಗಳ

ಒಂದೆಣಿಸಾದೆ ಎನ್ನನು ಮನಿಸು ಪ್ರಭುವೇ 2

ಪವನತನಯನ ಪ್ರಭುವಾದ ಶ್ರೀರಾಮನ | ಪ್ರಿಯನಾದ

ಶ್ರೀ ರಾಘವೇಣದ್ರಾ

ಎತ್ತ ಪೋಗಲಿ ನಾನೇನು ಮಾಡಲಿ ದೇವಾ ಎಂತು

ದಾರಿಯಕಾಣೆ ಸಂತೈಸು ಜೀಯಾ 3

ತಂದೆ ನೀ ಕೈ ಬಿಟ್ಟರಾರೆನ್ನ ಕಾಯ್ವರೊ ಮಂತ್ರಾಲಯ

ಧೊರೆ ರಾಘವೇಂದ್ರಾ

ಹಿಂದೆ ಮುಂದಿಲ್ಲದೆ ತಪಿಸುತಿರುವೆನ್ನ ಕೈ ಪಿಡಿದು

ಕಾಯೋ ಶ್ರೀ ಗುರು ರಾಘವೇಣದ್ರಾ 4

***


No comments:

Post a Comment