Thursday, 5 August 2021

ತೂಗಿರೆ ರಂಗನ್ನ ತೂಗಿರೆ ಕೃಷ್ಣನ್ನ ತೂಗಿರೆ ವೇಣು ankita raghavendra

..

kruti by radhabai

ತೂಗಿರೆ ರಂಗನ್ನ ತೂಗಿರೆ ಕೃಷ್ಣನ್ನ

ತೂಗಿರೆ ವೇಣು ಗೋಪಾಲನ್ನ

ತೂಗಿರೆ ಅಳಗಿರಿ ಅಪ್ಪ ತಿಮ್ಮಪ್ಪನ್ನ

ತೂಗಿರೆ ಕನಕಾದ್ರಿ ವೆಂಕಟನಾ ಪ


ಪಾಲಗಡಲೋಳು ಆಲದೆಲೆಯಮ್ಯಾಲೆ

ಬಾಲಾನುಮಲಗ್ಯಾನೆ ತೂಗಿರೇ 1

ಕಂಜದಳಾಕ್ಷನ್ನ ಕಮನೀಯಗಾತ್ರನ್ನ

ಕಮಲಾಕ್ಷಿಯರೆಲ್ಲಾ ತೂಗೀರೇ

ಕಾಮಿನಿಯರುಟ್ಟಿ ಸೀರೆಗಳನೆ ಕದ್ದು

ಕಟಹಾಲ್ದಮರನೇರಿದವನ್ನಾ 2

ದಶರಥ ತನುಜನ್ನ ದನುಜಸಂಹಾರನ್ನ

ವನಜಾಕ್ಷಿಯಾರೆಲ್ಲಾ ತೂಗೀರಮ್ಮಾ

ಅಶರಥನ ಮಡದಿ ಧರಣಿಸುತೆಯ ತಂದ

ಪವಮಾನನುತರಾಮಚಂದ್ರನ್ನಾ 3

ಕಿಂಕರರಿಗೆ ಬಂದ ಸಂಕಟ ಕಳೆವನ್ನ

ವೆಂಕಟರಮಣನ್ನ ತೂಗೀರೇ

ಬಿಂಕಾದಿಂದಲಿ ಬಂದು ಬೆಟ್ಟದೊಳ್‍ನಿಂದಹ

ವೆಂಕಟವಿಠಲನ್ನ ತೂಗೀರೇ4

***


No comments:

Post a Comment