..
kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru
ನರಸಿಂಹ
ನರಸಿಂಹ ಪಾಹಿ ಶ್ರೀಶ ಪೊರೆವರಾರಿಲ್ಲ ಬೇರೆ
ಕರವೆತ್ತಿ ಮುಗಿವೆ ನಿನಗೆ ಸುರಮುನಿ ಸುಖತೀರ್ಥ ಸೇವ್ಯ ಪ
ನಿಷಿದ್ಧ ಕರ್ಮಗಳ ಗೈದು ಅನಿರುದ್ಧ ನಾ ನಿನ್ನ ಮರೆತೆ
ಶುದ್ಧವೈಷ್ಣವತನವನೀಯೊ ಪ್ರಸಿದ್ಧಿ ಅದ್ಭುತಶಕ್ತ ವಿಭುವೆ 1
ಸಾಧ್ಯಸಾಧನವನ್ನು ಬಿಟ್ಟು ಪ್ರದ್ಯುಮ್ನ ನಾ ನಿನ್ನ ಮರೆತೆ
ವಿದ್ಯುದೀಶನೆಸ್ವಾಮಿ ಸಲಹೊ ವೇದವೇದ್ಯಾನಂತ ಮಹಿಮ 2
ಸಂಚಿಂತೆ ಸಂಸ್ಮರಣೆ ತೊರೆದು ಸಂಕರ್ಷಣ ನಿನ್ನ ಮರೆತೆ
ಸಂಸಾರತಾಪಗಳ 1 ತೊರೆಯೊ ಶಂಕರ ಸುರ ಶಂಭು ಸೇವ್ಯ 3
ವಸನ ಮನೆ ಹಣ ಹೆಣ್ಣು ಹುಡುಕಿ ವಾಸುದೇವನೆ ನಿನ್ನ ಮರೆತೆ
ಪಸು ಶಿಶುವಾದೆನ್ನ ಪೊರೆಯೊ ಶ್ರೀಶ ಮುಕ್ತೇಶ ಸರ್ವೇಶ 4
ಅನಿಮಿತ್ತಬಂಧು ಮೂಲೇಶ ಅನ್ಯರ ನಾನರಿಯೆ ನಾರಾಯಣ
ವನರುಹಾಸನ ತಾತ ಪ್ರಸನ್ನ ಶ್ರೀನಿವಾಸನೆ ಕೃಷ್ಣವ್ಯಾಸ 5
***
No comments:
Post a Comment