Wednesday, 1 September 2021

ಬೆಡಗು ಅಗಮ್ಯವಿದು ಶ್ರೀ ಗುರುವಿನ ಬೆಡಗು ಅಗಮ್ಯವಿದು ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಬೆಡಗು ಅಗಮ್ಯವಿದು ಶ್ರೀ ಗುರುವಿನ ಬೆಡಗು ಅಗಮ್ಯವಿದು ಪ  


ಶೂನ್ಯಾಕಾರದ ಬಾಲೆ ಗಗನವ ಹಡೆದಳು ಏನೆಂದ್ಹೇಳಲಿ ಸೋಜಿಗೆ ಘನಲೀಲೆಯು 1 

ವ್ಯೋಮಸುಂದರಿ ಜನಿಸಿದಳು ಮಾರುತನ ಭೀಮ ಪರಾಕ್ರಮನ ನೇಮದಿಂದಲಿ 2 

ನಿಜ ವಾಯುಕುಮಾರಿ ಜನಿಸಿದಳು ತಾನೊಂದು ತೇಜ:ಪುಂಜದ ರೂಪವ ಮೂಜಗದೊಳು 3 

ಥಳಥಳಿಸುವ ತೇಜದ ಖನಿಯು ಹಡೆದಳು ಜಲಮಯದ ರೂಪವ ನಲಿದಾಡುವ 4 

ನಿರಾಕಾರದ ಕೂಸು ಭೂಮಿ ಹಡೆದುದ ಕಂಡು ಬೆರಗಾದ ಮೂಢ ಮಹಿಪತಿಯ ಗುರುಜ್ಞಾನದ 5 

ಬೆಡಗು ತೋರಿದ ಗುರು ಒಡಿಯ ಸರ್ವೋತ್ಮನು ಪೊಡವಿಯೊಳೊಂದು ಸೋಜಿಗ ಗೂಢವಾಗಿಹ 6 

ಕೌತುಕವನು ಕಂಡು ಕೈ ಮುಗಿದು ಮಹಿಪತಿ ತ್ರಾಹಿ ತ್ರಾಹಿ ತ್ರಾಹಿಯೆಂದ ಮನದೊಳಿನ್ನು 7

***


No comments:

Post a Comment