ರಾಗ : ಕಾಂಬೋಧಿ ತಾಳ : ಝ೦ಪೆ
ನಾರಾಯಣನೆಂದು ಸಾರೋ ಮುಕುತಿಯನು ।
ಹಾರಲೊದಿಯೋ ಸಂಸಾರವ ಮನುಜ ।। ಪಲ್ಲವಿ ।।
ಲೋಕದ ಗುರು ಬ್ರಹ್ಮ ವೈಜಯಂತದಲ್ಲೀ ।
ಯೇಕಾಂತದಿ ಹರಿ ಧ್ಯಾನದಲ್ಲೀ ।
ಶ್ರೀಕಾಂತನ ದಿವ್ಯ ನಾಮ ಜಪಿಸೆಂದೂ । ಸಿ ।
ತೀಕಂಠಗೆ ಅಂದೊರದ ಗಡ ।। ಚರಣ ।।
ಕೈಲಾಸದಲಿ ವಟ ಮೂಲದಿ ಶಂಕರ ।
ವ್ಯೂಲಾಡುತ ಹರಿ ಧ್ಯಾನದಲ್ಲೀ ।
ಶ್ರೀಲೋಲನ ದಿವ್ಯ ನಾಮವ ಜಪಿಸೆಂದು ।
ಪೇಳಿದಾನಂದು ಪಾರ್ವತೀದೇವಿಗೆ ।। ಚರಣ ।।
ನಾರದ ಮುನಿ ತನ್ನ ವೀಣೆಯ ಮ್ಯಾಳೈಸಿ ।
ಶ್ರೀರಮಣ ಕೃಷ್ಣನೆಂದು ಪಾಡುತ ।
ನಾರಾಯಣನೆಂದು ಚೀರಿರೋ ನೀವೆಂದೂ ।
ಸಾರಿದನೆಂದು ಸಕಲ ಜನರಿಗ್ಯಲ್ಲ ।। ಚರಣ ।।
***
No comments:
Post a Comment