ಕಾಖಂಡಕಿ ಶ್ರೀ ಕೃಷ್ಣದಾಸರು
ಸದ್ಗುರು ದಯಾ ಸಾಧ್ಯವಾಗದೇ ಜ್ಞಾನವಿಲ್ಲಾ | ಸದ್ಗತಿ ಕೀಲರಿತವನೇ ಬಲ್ಲಾ ಪ
ಖಟಪಟ ವೃತದೊಳಿಲ್ಲಾ | ಘಟಮಟ ಶಬ್ದದೊಳಿಲ್ಲಾ | ಥಟ್ಟನೆ ಸಂಸಾರ ತೊರೆದರಿಲ್ಲಾ 1
ಬಹೂನಾಂ ಜನ್ಮನಾ ಜಾಯಂತೆ | ಜ್ಞಾನವಾನ್ ಮಾಂ ಪ್ರಪದ್ಯತೆ | ಶ್ರೀ ಹರಿ ಹೇಳಿದ ಗಾದಿಮಾತೆ 2
ವಸುಧಿಯೊಳೆಲ್ಲಾ ಜನಕೆ | ಹಿಂಗಾದರ ಸಾಧನ ಬೇಕು | ಋಷಿಮುನಿಗಳು ಸಾಹಸಬಡುವರ್ಯಾಕ 3
ಮನುಷ್ಯಣಾಂ ಸಹಸ್ರೇಷು | ವೆಂಬಾ ಗೀತೆಯ ನುಡಿಲೇಸು | ಜನದಲಿ ಗರ್ವಾಭಿಮಾನಿಗೆ ಬಿರುಸು 4
ಅಂಬು ತಾನು | ಎರಗುದೇ ಗುರಿಯಾ ಸ್ಥಳವನು | ಗುರುಮಹಿಪತಿ ನಂದನು ಸಾರಿದ ನಿಜನು 5
***
No comments:
Post a Comment