Tuesday, 1 June 2021

ಶರಣಾಗತ ರಕ್ಷಿಸಿ ಸ್ವಾಮಿ ಪೊರೆವುದು ಎನ್ನನು ಹರಿಯೇ ankita hanumesha vittala

ಶರಣಾಗತ ರಕ್ಷಿಸಿ ಸ್ವಾಮಿ ಪೊರೆವುದು ಎನ್ನನು ಹರಿಯೇ

ಶರಣಾಗತನೊಳು ನಿರ್ದಯ ಸರಿಯೇ ಕರುಣಾಕರ ಗುಣನಿಧಿಯೇ ಪ


ಅಪರಾಧಗಳನು ಕ್ಷಮಿಸಿ ಸ್ವಾಮಿ ಕಾಪಾಡೋ ಮಾಧವನೇ

ಅಪಾರಪರ ಮಹಿಮನೇ ಪುರಾಣ ಪುರುಷೋತ್ತಮನೇ 1


ಶಂಖಚಕ್ರಧರನೇ ಸ್ವಾಮಿ ಪಂಕಜಪಿತನೆ

ಸಂಕಟಪರಿಹಾರಕನೇ ನಮ್ಮ ವೆಂಕಟ ವಿಠಲನೆ 2


ಸೃಷ್ಟಿಕರ್ತನು ನೀನೆ ಸ್ವಾಮಿ ಅಷ್ಟೈಶ್ವರ್ಯವೂ ನೀನೆ

ಶಿಷ್ಟರ ಪಾಲಿಪ ನೀನೆ ದುಷ್ಟರ ಸಂಹಾರಕನೇ 3


ವೇದ ಪುರಾಣವು ನೀನೆ ಮೇಧಿನಿಗಧಿಪತಿ ನೀನೆ

ಮಾಧವ ಮಧುಸೂದನನೇ ಆದಿ ಮೂರುತಿ ನೀನೆ 4


ಹನುಮೇಶ ವಿಠಲನೇ ಸ್ವಾಮಿ ಜನನಿ ಜನಕನು ನೀನೆ

ಜ್ಞಾನ ಪ್ರದಾಯಕ ನೀನೆ ಘನ ಮುಕ್ತಿಗೊಡೆಯನು ನೀನೆ 5

****


No comments:

Post a Comment