ರಾಗ - : ತಾಳ -
ಶರಣು ಶಂಕರ ಭೂಷಣಾದ್ರಿಗೆ
ಶರಣು ಅಭಯಾಚಲನಿಗೆ ll ಪ ll
ಶರಣು ಖಗಮೃಗ ತರುಲತಾಂಕಗೆ
ಶರಣು ವಿಂಶತಿ ನಾಮಗೆ ll ಅ ಪ ll
ವರಹ ನೀಲಾಂಜನ ಕನಕಋಷಿ
ಗರುಡ ಘನ ನಾರಾಯಣಾ
ಉರಗ ತೀರ್ಥಾನಂದ ಶ್ರೀ ಪು
ಷ್ಕರ ವೃಷಭ ವೈಕುಂಠಗೆ ll ೧ ll
ಜ್ಞಾನ ಪರ್ವತ ಮೇರು ಶೃಂಗಗೆ
ಶ್ರೀನಿವಾಸ ಸುಕ್ರೀಡಗೆ ಪಂ
ಚಾನನಾಹ್ವಯ ವೆಂಕಟಾದ್ರಿಗೆ
ಕ್ಷೋಣಿಯೊಳು ಸುರಮಾನ್ಯಗೆ ll ೨ ll
ರತುನ ಕಾಂಚನ ಶ್ರೀನಿವಾಸನ
ಪ್ರತಿಮೆಯಂದದಿ ಪೊಳೆವಗೆ
ಕೃತಿರಮಣ ಜಗನ್ನಾಥವಿಟ್ಠಲಗೆ
ಅತುಳ ಮಂಗಳನೆನಿಪಗೆ ll ೩ ll
***
No comments:
Post a Comment