ರಾಗ ಹಿಂದೋಳ ತಿಶ್ರನಡೆ
ವೃಂದಾವನದೇವಿ ನಮೋ ನಮೋ । ಚೆಲ್ವ ।
ಮಂದರಧರನ ಮನಃಪ್ರಿಯಳೆ ॥ ಪ ॥
ನಿನ್ನ ಸೇವಿಸಿ ಉದಕವನೆರೆಯಲು ।
ಮುನ್ನ ಮಾಡಿದ ಪಾಪ ಹೋಗುವುದು ॥
ಎನ್ನ ಇಪ್ಪತ್ತೊಂದು ಕುಲದವರಿಗೆಲ್ಲ ।
ಉನ್ನಂತ ವೈಕುಂಠ ಪದವೀವಳೆ ॥ 1 ॥
ಒಂದೊಂದು ದಳದಲ್ಲಿ ಒಂದೊಂದು ಮೂರುತಿ ।
ಸಂದಣಿಸುವೆ ಬಹು ಗುಪಿತದಲಿ ॥
ಬಂದು ಕುಂಕುಮ ಶಂಖ ಚಕ್ರ ಧರಿಸಿದರೆ ।
ತಂದೆ ನಾರಾಯಣ ಕರೆದೊಯ್ಯುವ ॥ 2 ॥
ಹರಿಗೆ ಸಮರ್ಪಿಸಿದ ತುಳಸಿ ನಿರ್ಮಾಲ್ಯವ ।
ಕೊರಳೊಳು ಧರಿಸಿ ಕರ್ಣದೊಳಿಟ್ಟರೆ ॥
ದುರಿತ ರಾಶಿಗಳೆಲ್ಲ ಅಂಜಿ ಓಡುತಲಿವೆ ।
ಹರಿಯು ತನ್ನವರೆಂದು ಕೈ ಪಿಡಿವ ॥ 3 ॥
ಹತ್ತು ಪ್ರದಕ್ಷಿಣೆ ಹತ್ತು ವಂದನೆ ಮಾಡೆ ।
ಉತ್ತಮ ವೈಕುಂಠ ಪದವೀವಳೆ ॥
ಭಕ್ತಿಯಿಂದಲೆ ಬಂದು ಕೈ ಮುಗಿದವರನ್ನು ।
ಕರ್ತು ನಾರಾಯಣ ಕರೆದೊಯ್ವನು ॥ 4 ॥
ಆವಾವ ಪರಿಯಲ್ಲಿ ಸೇವೆಯ ಮಾಡಲು ।
ಪಾವನ ವೈಕುಂಠಪದವೀವಳೆ ॥
ದೇವ ಶ್ರೀಪುರಂದರವಿಟ್ಠಲರಾಯನ ।
ದೇವಿ ನಿನ್ನ ಮುಟ್ಟಿ ತ್ರಾಹಿಯೆಂಬೆ ॥ 5 ॥
***
ರಾಗ ಮಧ್ಯಮಾವತಿ ಆದಿತಾಳ (raga tala may differ in audio)
Vrundaavanadevi namO namO
Chelva mandaraadharana manapreeyaLe | |
Ninna sEvisi udakavanereyalu
munna maaDida papa hoguvudu
Innu ippattondu kuladavarigella
unnata vaikunTha padavi eevaLe | |
Ondondu daLadali ondondu mooruthi
sandaNisuve bahuguchithadali |
ondu kumkuma shankha chakra dharisidare
thande naaraayaNa karedoyyuva | |
Aavaava pariyali sEveya maaDalu
Paavana vaikunTha padavi eevaLe
dEva sri purandara viTTala raayana
dEvi ninna muTti traahi embe | |
***
Vrundavanadevi namo namo celva mandaradharana manahpriyale
vrundavanadevi namo namo ||pa.||
Ninna sevisi udakavanereyalu munna madida papa hoguvadu
inna ippattondu kuladavarigella unnata vaikuntha padavivale ||1||
Ondondu daladalli ondondu muruti samdanisuve bahu gupitadali
bandu kumkuma shankha cakra dharisidare tande narayana karedoyyuva ||2||
Harige samarpisida tulasi nirmalyava koralolu karnadolittare
durita rashigalella amji odutalire hariyu tannavaremdu kai pidiva ||3||
Hattu pradakshine hattu vandane made uttama vaikuntha padavivale
deva shri purandara vitthalarayana devi ninna mutti trahi embe ||4||
***
pallavi
vrndAvana dEvi namO namO celva mandara dharana manah-priyaLe vrndAvana dEvi namO namO
caraNam 1
ninna sEvisi udakavanereyalu munna mADida pApa hOguvadu
inna ippattondu kuladavarigella unnanta vaikuNTha padavIvaLe
caraNam 2
ondondu daLadalli ondondu mUruti sandaNisuve bahu kupitadali
bandu kumkuma shankha cakra dharisidare tande nArAyaNa karedoyyuva
caraNam 3
harige samaprpisda tulasi nirmAlyava koraLoLu dharisi karNadoLiTTare
durita rAShigaLella anji Odudalive hariyu tannavarendu kai piDiva
caraNam 4
hattu pradakSiNe hattu vandane mAde uttama vaikuNTha padavIvaLe
dEva shrI purandara viTTalarAyana dEvi ninna muTTi trAhiyembe
***
ವೃಂದಾವನದೇವಿ ನಮೋ ನಮೋ, ಚೆಲ್ವ
ಮಂದರಧರನ ಮನಃಪ್ರಿಯಳೆ
ವೃಂದಾವನ ದೇವಿ ನಮೋ ನಮೋ ||ಪ||
ನಿನ್ನ ಸೇವಿಸಿ ಉದಕವನೆರೆಯಲು
ಮುನ್ನ ಮಾಡಿದ ಪಾಪ ಹೋಗುವುದು
ಎನ್ನ ಇಪ್ಪತ್ತೊಂದು ಕುಲದವರಿಗೆಲ್ಲ
ಉನ್ನಂತ ವೈಕುಂಠ ಪದವೀವಳೆ ||
ಒಂದೊಂದು ದಳದಲ್ಲಿ ಒಂದೊಂದು ಮೂರುತಿ
ಸಂದಣಿಸುವೆ ಬಹು ಗುಪಿತದಲಿ
ಬಂದು ಕುಂಕುಮ ಶಂಖಚಕ್ರ ಧರಿಸಿದರೆ
ತಂದೆ ನಾರಾಯಣ ಕರೆದೊಯ್ಯುವ ||
ಹರಿಗೆ ಸಮರ್ಪಿಸಿದ ತುಳಸಿ ನಿರ್ಮಾಲ್ಯವ
ಕೊರಳೊಳು ಧರಿಸಿ ಕರ್ಣದೊಳಿಟ್ಟರೆ
ದುರಿತ ರಾಶಿಗಳೆಲ್ಲ ಅಂಜಿ ಓಡುತಲಿವೆ
ಹರಿಯು ತನ್ನವರೆಂದು ಕೈ ಪಿಡಿವ ||
ಹತ್ತು ಪ್ರದಕ್ಷಿಣೆ ಹತ್ತು ವಂದನೆ ಮಾಡೆ
ಉತ್ತಮ ವೈಕುಂಠ ಪದವೀವಳೆ
ಭಕ್ತಿಯಿಂದಲೆ ಬಂದು ಕೈ ಮುಗಿದವರನ್ನು
ಕರ್ತುನಾರಾಯಣ ಕರೆದೊಯ್ವನು ||
ಆವಾವಪರಿಯಲ್ಲಿ ಸೇವೆಯ ಮಾಡಲು
ಪಾವನ ವೈಕುಂಠಪದವೀವಳೆ
ದೇವ ಶ್ರೀ ಪುರಂದರವಿಠಲರಾಯನ
ದೇವಿ ನಿನ್ನ ಮುಟ್ಟಿ ತ್ರಾಹಿಯೆಂಬೆ ||
*******
ಪುರಂದರದಾಸರು
ವೃಂದಾವನದೇವಿ ನಮೋನಮೋ ಚೆಲ್ವ-|
ಮಂದರಧರನ ಮನಃ ಪ್ರಿಯಳೆ ಪ
ನಿನ್ನ ಸೇವಿಸಿ ಉದಕವನು ಎರೆಯಲು |ಮುನ್ನ ಮಾಡಿದ ಪಾಪವಳಿಯುವುದು ||ಎನ್ನ ಇಪ್ಪತ್ತೊಂದು ಕುಲದವರಿಗೆ ಎಲ್ಲ |ಉನ್ನತ ವೈಕುಂಠಪದವೀವಳೆ 1
ಒಂದೊಂದು ದಳದಲಿ ಒಂದೊಂದು ಮೂರುತಿ |ಸಂದಣಿನೆವೆ ಬಹು ಗುಪಿತದಲಿ ||ಬಂದು ಕುಂಕುಮ ಶಂಖಚಕ್ರವಿರಿಸಿದರೆ |ತಂದೆ ನಾರಾಯಣ ಕರೆದೊಯ್ಯುವ 2
ಹರಿಗೆ ಅರ್ಪಿಸಿದ ತುಳಸಿ ನಿರ್ಮಾಲ್ಯವ |ಕೊರಳೊಳು ಧರಿಸಿ ಕರ್ಣದೊಳಿಟ್ಟರೆ ||ದುರಿತರಾಶಿಗಳೆಲ್ಲ ಅಂಜಿ ಓಡುವುವು ಶ್ರೀ-|ಹರಿಯು ತನ್ನವರೆಂದು ಕೈಪಿಡಿವ 3
ಹತ್ತು ಪ್ರದಕ್ಷಿಣಿ ಹತ್ತು ವಂದನೆ ಮಾಡೆ |ಉತ್ತಮ ವೈಕುಂಠ ಪದವೀವಳು ||ಭಕ್ತಿಯಿಂದಲಿ ಬಂದು ಕೈಮುಗಿದವರನು |ಕರ್ತೃನಾರಾಯಣ ಕರೆದೊಯ್ವನು 4
ಆವಾವ ಪರಿಯಲಿ ಸೇವೆಯ ಮಾಡಲು |ಪಾವನ ವೈಕುಂಠಪದವೀವಳೆ ||ದೇವ ಶ್ರೀಪುರಂದರವಿಠಲರಾಯನ |ದೇವಿ ನಿನ್ನ ಮುಟ್ಟಿತ್ರಾಹಿಎಂಬೆ5
****
No comments:
Post a Comment