Thursday, 5 December 2019

ನೀನೆನ್ನ ಪೆತ್ತಿಲ್ಲವಂತೆ ಅಮ್ಮಾ purandara vittala

ಪುರಂದರದಾಸರು
ನೀನೆನ್ನ ಪೆತ್ತಿಲ್ಲವಂತೆ ಅಮ್ಮಾ |ನಾನಿನ್ನ ಮಗನಲ್ಲವಂತೆ ||ಧೇನುಕಾಯುವರಿಲ್ಲವೆಂದು ನೀನು |ಸಾನುರಾಗದಿ ಸಲಹಿದೆಯಂತೆ 2

ವಿಷವು ತುಂಬಿದ ಮೊಲೆಯ-ಕೊಟ್ಟ |ಅಸುರೆಯ ಸಂಹರಿಸಿದೆನಂತೆ ||ಅಸುರನಾದ ಶಕಟನನಾಕ್ಷಣದಲಿ |ಶಿಶುವಾಗಲೆ ಒರೆಸಿದೆನಂತೆ 3

ವತ್ಸಾಸುರನನು ಕೆಡಹಿದೆನಂತೆ |ಕಿಚ್ಚನೆಲ್ಲವನು ನುಂಗಿದೆನಂತೆ ||ಕಚ್ಚಬಂದ ಕಾಳಿಂಗನಾ ಹೆಡೆ-|ಚಚ್ಚಿ ತುಳಿದು ಓಡಿದೆನಂತೆ 4

ಕುಸುಮಗಂಧಿಯರಡುವ |ವಸನಕದ್ದು ಓಡಿದೆನಂತೆ ||ಹಸುಗೂಸು ಅಲ್ಲ ಇವ |ಅಸುರ ಮಗನು ಎಂತೆಂಬುವರೆ 5

ಒರಳನೆಳೆತಂದು ಮತ್ತಿ-|ಮರವ ಮುರಿದೋಡಿದೆನಂತೆ ||ತರಳೆಯರ ವಸ್ತ್ರವ ಕದ್ದು |ತರುವನೇರಿದೆನಂತೆ 6

ಪರಮಗಾಡಿಕಾರನಿವ |ಪುರಂದರವಿಠಲರಾಯ ||ತರುಣಿಯರ ವಂಚಿಸುತ್ತ |ಠಕ್ಕಿಸಿ ಪೋದನೆಂತೆಂಬುವರು7
*********

No comments:

Post a Comment