Thursday 5 December 2019

ನೀನೇ ಗತಿ ನೀನೆ ಮತಿ ನೀನೆ ಸ್ವಾಮಿ purandara vittala

ಪುರಂದರದಾಸರು purandara vittala
ರಾಗ ಪೂರ್ವಿ. ಝಂಪೆ ತಾಳ 

ನೀನೆ ಗತಿ ನೀನೆ ಮತಿ ನೀನೆ ಸ್ವಾಮಿ
ನೀನಲ್ಲದನ್ಯತ್ರ ದೈವಗಳ ನಾನರಿಯೆ ||

ನಿನ್ನ ಪಾದಾರವಿಂದದ ಸೇವೆಯ ಮಾಡಿ
ನಿನ್ನ ಧ್ಯಾನದಲಿರುವ ಹಾಗೆ ಮಾಡು
ನಿನ್ನ ದಾಸರ ಸಂಗದಿಂದ ದೂರಿಡದೆನಗೆ
ಸನ್ಮಾರ್ಗದಿರಿಸೊ ಜಗದೀಶ ಅಘನಾಶ ||

ಕಮಲನಾಭಿಯಲಿ ಬೊಮ್ಮನ ಪುಟ್ಟಿಸಿದೆ ಹರಿಯೆ
ಕಮಲಸಖ ಕೋಟಿಪ್ರಕಾಶ ಈಶ
ಕಮಲಕರತಳದೆ ಅಭಯವನಿತ್ತು ಭಕುತರಿಗೆ
ಕಮಲಾಕ್ಷನೆನಿಸಿದೆಯೊ ಕಮಲಾರಮಣ ||

ಶಿಶುಪಾಲದಂತ ವಕ್ತ್ರರ ಶಿರವ ಛೇದಿಸಿದೆ
ಪಶುಪತಿಯ ಆಭರಣವೈರಿವಾಹನನೆ
ಅಸುರಕುಲ ಸಂಹರಿಸಿ ಭಕ್ತಜನರನು ಪೊರೆದೆ
ವಸುಧೇಶ ಪುರಂದರವಿಠಲರಾಯ ||
***

pallavi

nIne gati nIne mati nIne svAmi nInalladanyatra daivagaLa nAnariye

caraNam 1

ninna pAdAravinda sEveya mADi ninna dhyAnadaliruva hAge mADu
ninna dAsara sangadinda duriDadenna sanmAragatiriso jagadIsha agha nAsha

caraNam 2

kamala nAbhiyali bommana puTTiside hariye kamala sakha kOTi prakAsha Isha
kamala karaLade abhayavanittu bhakutarige kamalAkSanenisideyo kamalA ramaNa

caraNam 3

shishupAladanta vaktra chEdiside pashupatiya AbharaNa vairi vAhanane
asurakula samharisi bhakta janaralu porede vasudhEsha purandara viTTalarAya
***

ನೀನೇ ಗತಿ ನೀನೆ ಮತಿ ನೀನೆ ಸ್ವಾಮಿ
ನೀನಲ್ಲದನ್ಯತ್ರ ದೈವಗಳ ನಾನರಿಯೆ ಪ

ನಿನ್ನ ಪಾದಾರವಿಂದದ ಸೇವೆಯನು ಮಾಡಿನಿನ್ನ ಧ್ಯಾನದಲಿರುವ ಹಾಗೆಮಾಡು||ನಿನ್ನ ದಾಸರ ಸಂಗದಿಂದ ದೂರಿಡದೆನಗೆಸನ್ಮಾರ್ಗವಿಡಿಸೊ ಜಗದೀಶ ಅಘನಾಶ 1

ಕಮಲನಾಭಿಯೊಳು ಬೊಮ್ಮರ ಪುಟ್ಟಿಸಿದೆ ಹರಿಯೆಕಮಲಸಖಕೋಟಿ ಪ್ರಕಾಶ ಈಶಕಮಲಕರ ತಳದಿ ಅಭಯವನಿತ್ತು ಭಕುತರಿಗೆಕಮಲಾಕ್ಷನೆನಿಸಿದೆಯೊ ಕಮಲಾರಮಣನೆ 2

ಶಿಶುಪಾಲ ದಂತವಕ್ತ್ರರ ಶಿರವ ಭೇದಿಸಿದೆಪಶುಪತಿಯ ಆಭರಣ ವೈರಿವಾಹನನೆ ||ಅಸುರಕುಲ ಸಂಹರಿಸಿ ಭಕ್ತಜನರನು ಪೊರೆದೆವಸುಧೇಶಸಿರಿಪುರಂದರವಿಠಲರಾಯಾ3
*******

No comments:

Post a Comment