Wednesday, 11 December 2019

ನಮ್ಮ ಕುಲದೈವನೀತ ಬೊಮ್ಮನ ಪಡೆದಾತ ankita mahipati

ಖಂಬಾವತಿ ರಾಗ ತ್ರಿತಾಳ (ಝಪ್ )

ನಮ್ಮ ಕುಲದೈವನೀತ ಬೊಮ್ಮನ ಪಡೆದಾತ
ಸಾಮಗಾಯನ ಪ್ರೀತ ಸ್ವಾಮಿ ಈತ ||ಪ||

ವೇದ ಉದ್ಧರನೀತ ಮೇದಿನಿಯ ಪೊತ್ತಾತ
ಸಾಧುಜನವಂದಿತ ಸದ್ವಸ್ತು ಈತ ||೧||

ಧಾರುಣಿಯ ಗೆದ್ದಾತ ತರಳಗೊಲಿದಿಹನೀತ
ವರಮುನಿಗಳ ದಾತ ಕರುಣಿ ಈತ ||೨||

ಮೂರು ಪಾದಳದಾತ ಪರಶುಧರನಹುದೀತ
ಸುರಜನರ ಪೂಜಿತ ಸರ್ವೋತ್ತಮನೀತ ||೩||

ಪವನಸುತಗೊಲಿದಾತ ಮಾವನ ಮಡಹಿದಾತ
ಭುವನತ್ರಯಲೀತ ದೇವನೀತ ||೪||

ಬತ್ತಲೆಯು ಸುಳಿದಾತ ಉತ್ತಮ ಹಯವನೇರಿದಾತ
ಭಕ್ತರಿಗೆ ಹೊರೆವಾತ ಶಕ್ತನೀತ ||೫||

ಅಣುರೇಣುದೊಳು ಈತ ಅನುಕೂಲವಾದಾತ
ಆನಂದ ಬ್ರಹ್ಮ ಅನಂತ ಈತ ||೬||

ಮಹಾಮಹಿಮನಹುದೀತ ಬಾಹ್ಯಂತರ ಪೂರಿತ
ಮಹಿಪತಿಯ ಸಾಕ್ಷಾತ ವಸ್ತು ಈತ ||೭||
****

ಕಾಖಂಡಕಿ ಶ್ರೀ ಮಹಿಪತಿರಾಯರು

ನಮ್ಮ ಕುಲದೈವೀತ ಬೊಮ್ಮನ ಪಡೆದಾತ ಸಾಮಗಾಯನ ಪ್ರೀತ ಸ್ವಾಮಿನೀತ pa


ವೇದ ಉದ್ಧರನೀತ ಮೇದಿನಿಯ ಪೊತ್ತಾತ ಸಾಧುಜನ ವಂದಿತ ಸದ್ವಸ್ತುನೀತ 1 

ಧಾರುಣಿಯ ಗೆದ್ದಾತ ತರಳಗೊಲಿದಹನೀತ ದಾತ ಕರುಣಿ ಈತ 2 

ಮೂರು ಪಾದಳಿದಾತ ಪರಶುಧರನಹುದೀತ ಸುರಜನರ ಪೂಜಿತ ಸರ್ವೋತ್ಮನೀತ 3 

ಪವನಸುತಗೊಲಿದಾತ ಮಾವನ ಮಡುಹಿದಾತ ಭುವನತ್ರಯಲೀತ ದೇವನೀತ 4 

ಬೆತ್ತಲೆಯು ಸುಳಿದಾತ ಉತ್ತಮ ಹಯವನೇರಿದಾತ ಭಕ್ತರಿಗೆ ಹೊರೆವಾತ ಶಕ್ತನೀತ 5 

ಅಣುರೇಣುದೊಳೀತ ಅನುಕೂಲವಾದಾತ ಆನಂದೋ ಬ್ರಹ್ಮ ಅನಂತನೀತ 6 

ಮಹಾಮಹಿಮನಹುದೀತ ಬಾಹ್ಯಾಂತ್ರಪೂರಿತ ಮಹಿಪತಿಯ ಸಾಕ್ಷಾತ ವಸ್ತುನೀತ 7

****

No comments:

Post a Comment