Friday, 27 December 2019

ಅಪ್ರಮೇಯ ಆದರಿಸೋ ಎನ್ನ ankita gururama vittala

by ಬಾಗೇಪಲ್ಲಿ ಸುಬ್ರಹ್ಮಣ್ಯದಾಸರು

ಅಪ್ರಮೇಯ  ಆದರಿಸೋ ಎನ್ನ ||ಪ||

ಸ್ವಪ್ರಕಾಶಾನಂದರೂಪನೆ ||ಅ||

ಮುಪ್ಪುರಹರನುತ ಮುನಿಜನಸೇವಿತ
ತಪ್ಪುಗಳೆಣಿಸದೆ ದಾಸನೆಂತೆಂದು ||೧||

ನಿನ್ನದರುಶನದಿಂದಾ ಧನ್ಯರಾಗುವರು  ಜನರು
ಪುಣ್ಯವಂತರಾಗಿಹವರನ ಪಡೆವರು ||೨||

ಧಾರುಣಿಯೊಳಗೆ ಮಳೂರೊಳು ನೆಲಸಿದೆ
ಮಾರಜನಕ ಗುರುರಾಮವಿಠಲ ||೩||
*******


No comments:

Post a Comment